Breaking News

ಕಬ್ಬು ಬೆಂಬಲ ಬೆಲೆ ನೀಡುವಲ್ಲಿ ತಾರತಮ್ಯ – ಸಿಡಿದೆದ್ದ ವಿಜಯಪುರ ಜಿಲ್ಲೆಯ ರೈತರು

Spread the love

ವಿಜಯಪುರ: ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದ ಕಬ್ಬು ಬೆಳಗಾರರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದು 3,600 ರೂ. ಬೆಂಬಲ ಬೆಲೆ ಘೋಷಿಸಿದೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಕೃಷ್ಣೆಯ ಒಡಲಿನ ರೈತರು, ಭೀಮಾ ಒಡಲಿನ ರೈತರು ಅಂತಾ ಬೆಂಬಲ ಬೆಲೆ ಕೊಡಲು ಸಕ್ಕರೆ ಕಾರ್ಖಾನೆಗಳು ತಗಾದೆ ತೆಗೆದಿವೆ. ಈ ತಾರತಮ್ಯಕ್ಕೆ ಜಿಲ್ಲೆಯ ರೈತರು ಸಿಡೆದೆದಿದ್ದಾರೆ.

ಕಬ್ಬು ಒಂದು ಟನ್‌ಗೆ 3,600 ರೂ. ಬೆಂಬಲ ಬೆಲೆಯನ್ನ ರಾಜ್ಯ ಸರ್ಕಾರ ಘೋಷಿಸಿದೆ. ಇದನ್ನ ಬೆಳಗಾವಿ,ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಒಪ್ಪಿಕೊಂಡಿವೆ. ಅಲ್ಲದೆ ವಿಜಯಪುರ ಜಿಲ್ಲೆಯ ಕೃಷ್ಣಾ ನದಿ ಪಾತ್ರದಲ್ಲಿ ಬರುವ ಸಕ್ಕರೆ ಖಾರ್ಖಾನೆಗಳು ಈ ಬೆಲೆ ಕೊಡಲು ಒಪ್ಪಿಕೊಂಡಿವೆ. ಆದ್ರೆ ವಿಜಯಪುರ ಜಿಲ್ಲೆಯ ಭೀಮಾ ನದಿ ಪಾತ್ರದ 7 ಸಕ್ಕರೆ ಕಾರ್ಖಾನೆಗಳು ಈ ಬೆಲೆ ನೀಡಲು ನಿರಾಕರಿಸಿದ್ದು, ತಗಾದೆ ತಗೆದಿದ್ದಾರೆ. ಇದರಿಂದ ಒಂದೇ ಜಿಲ್ಲೆಯಲ್ಲಿ ಈ ತಾರತಮ್ಯ ಏಕೆ ಎಂದು ರೈತರು ಕೆಂಡಾಮಂಡಲರಾಗಿದ್ದಾರೆ.

ಕೃಷ್ಣಾ ನದಿ ಪಾತ್ರದ ಕಬ್ಬು 11.25 ಇಳುವರಿ ಕೊಡುತ್ತವೆ. ಆದರೆ ಭೀಮಾ ನದಿ ಪಾತ್ರದ ಕಬ್ಬು 9.25 ಇಳುವರಿ ಕೊಡುತ್ತವೆ. ಕಾರಣ ಭೀಮಾ ನದಿ ಪತ್ರದ ಸಕ್ಕರೆ ಕಾರ್ಖಾನೆಗಳು 3,600 ರೂ. ಕೊಡಲು ಸಾಧ್ಯವಿಲ್ಲ. 3,300 ರೂ. ಕೊಡುತ್ತವೆ ಅಂತಾ ಹೇಳ್ತಿದ್ದಾರೆ. ಆದ್ರೆ ಭೀಮಾ ನದಿ ಪಾತ್ರದ ರೈತರು ಮಾತ್ರ ಇದನ್ನ ಒಪ್ಪುತ್ತಿಲ್ಲ. ಜೊತೆಗೆ ಸಕ್ಕರೆ ಕಾರ್ಖಾನೆಗಳಲ್ಲಿ ತೂಕದಲ್ಲಿ ಕಳ್ಳಾಟ ನಡೆಸುತ್ತಾರೆ. ಅದರಿಂದ ಇಳುವರಿ ಕಡಿಮೆ ತೋರಿಸುತ್ತದೆ. ರಾಜ್ಯ ಸರ್ಕಾರದಿಂದಲೇ ತೂಕದ ತಪಾಸಣೆ ನಡೆಯಲಿ. ಆಗ ಕಾರ್ಖಾನೆಗಳ ಕಳ್ಳಾಟ ಬಯಲಾಗಲಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಸಕ್ಕರೆ ಕಾರ್ಖಾನೆಗಳಿಗೆ ಬೆಲೆ ನಿರ್ಧರಿಸಿ, ಎರಡು ದಿನ ಗಡುವು ನೀಡಲಾಗಿತ್ತು. ಆದ್ರೆ ಮೂರು ದಿನ ಕಳೆದ್ರೂ ಕಾರ್ಖಾನೆಗಳು ತಮ್ಮ ನಿಲುವು ಪ್ರಕಟಿಸಿಲ್ಲ. ಹೀಗಾಗಿ ರೈತರು ಈ ಕೂಡಲೆ ಬೆಲೆ ಘೋಷಿಸುವರೆಗೂ ಕಾರ್ಖಾನೆ ಬಂದ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಅಡುಗೆ ಎಣ್ಣೆ ಮರುಬಳಕೆಗೆ ಸರ್ಕಾರ ನಿರ್ಬಂಧ – ಶೀಘ್ರದಲ್ಲೇ ಹೊಸ ಆ್ಯಪ್ ಬಿಡುಗಡೆ

Spread the loveಬೆಂಗಳೂರು: ಅಡುಗೆ ಎಣ್ಣೆ  ಮರುಬಳಕೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ  ದಿಟ್ಟ ಹೆಜ್ಜೆ ಇಟ್ಟಿದೆ. ಹೋಟೆಲ್‌ಗಳಲ್ಲಿ ಇನ್ಮುಂದೆ ಅಡುಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ