Breaking News

Daily Archives: ನವೆಂಬರ್ 29, 2026

ಇಂದಿನಿಂದ ನಂದಿನಿ ಮೊಸರಿನ ದರ 2 ರೂ. ಇಳಿಕೆ

ಬೆಂಗಳೂರು: ನಂದಿನಿ ಮೊಸರಿನ ದರ ಇಂದಿನಿಂದ ಇಳಿಕೆಯಾಗಲಿದೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ  ಮೊಸರಿನ ದರವನ್ನು 1 ಲೀಟರ್‌ಗೆ 2 ರೂಪಾಯಿಗಳಷ್ಟು ಕಡಿತಗೊಳಿಸಿದೆ. ರಾಜ್ಯದ ಹಾಲು ಉತ್ಪಾದಕ ರೈತರ ಮನವಿಯ ಮೇರೆಗೆ ಕಳೆದ ನವೆಂಬರ್ 1 ರಿಂದ ಅನ್ವಯವಾಗುವಂತೆ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರಗಳನ್ನು ಪರಿಷ್ಕರಿಸಿ ಏರಿಕೆ ಮಾಡಲಾಗಿತ್ತು. ಆದರೆ, ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಇಳಿಕೆ ಮಾಡುವಂತೆ ಸಿಎಂ …

Read More »

ಬ್ರೇಕಪ್‌ ಸೇಡು: ಮಾಜಿ ಪ್ರಿಯತಮೆಯ ಖಾಸಗಿ ವಿಡಿಯೋ ಪೋರ್ನ್ ವೆಬ್‌ಸೈಟ್‌ಗೆ ಅಪ್‌ಲೋಡ್

ಬೆಂಗಳೂರು: ಪ್ರೀತಿಸಿ, ಲಿವಿಂಗ್ ಟುಗೆದರ್‌ನಲ್ಲಿದ್ದು ಬಳಿಕ ಬ್ರೇಕಪ್ ಮಾಡಿಕೊಂಡ ಯುವಕನೊಬ್ಬ, ಸೇಡು ತೀರಿಸಿಕೊಳ್ಳಲು ತನ್ನ ಮಾಜಿ ಪ್ರಿಯತಮೆಯ ಖಾಸಗಿ ವಿಡಿಯೋಗಳನ್ನು ಪೋರ್ನ್ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಅಭ್ಯುದಯ್ ಪುರೋಹಿತ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದು, ನೊಂದ ಸಂತ್ರಸ್ತ ಯುವತಿ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತ ಯುವತಿ ಮತ್ತು ಆರೋಪಿ ಅಭ್ಯುದಯ್ ಪುರೋಹಿತ್ 2023ರಿಂದ 2024ರವರೆಗೆ ಪರಸ್ಪರ ಪ್ರೀತಿಸಿ …

Read More »

ಮಸೂದೆ ಬೆಂಬಲಿಸಿದ ಮಾತ್ರಕ್ಕೆ ನಾವು ಬಿಜೆಪಿ ಜೊತೆಗಿದ್ದೇವೆ ಎಂದರ್ಥವಲ್ಲ: ಅಮಿತ್‌ ಶಾ ಭೇಟಿ ಬಳಿಕ ಕನಿಮೊಳಿ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ  ಮತ್ತು ಮಹಿಳಾ ಮೀಸಲಾತಿ ಮಸೂದೆಗಳಿಗೆ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ತನ್ನ ಬೆಂಬಲವನ್ನು ಘೋಷಿಸಿದ ಬೆನ್ನಲ್ಲೇ ರಾತ್ರಿ ಪಕ್ಷದ ನಾಯಕರು ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶನಿವಾರ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಸಂಸದರ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಯಿತು. ಈ …

Read More »

ಮೋಡಿ ಲಿಪಿಯ ಅಪರೂಪದ ಐತಿಹಾಸಿಕ ದಾಖಲೆಗಳ ಸಂರಕ್ಷಣೆಗೆ ಗೋವಾ ಸರ್ಕಾರ–ಸಂಕೇಶ್ವರ ಮಠ ಒಪ್ಪಂದ

ಬೆಳಗಾವಿ: ಪ್ರಾಚೀನ ಮೋಡಿ ಲಿಪಿಯಲ್ಲಿರುವ ಅಮೂಲ್ಯ ಐತಿಹಾಸಿಕ ಹಸ್ತಪ್ರತಿಗಳು ಹಾಗೂ ದಾಖಲೆಗಳನ್ನು ಭಾಷಾಂತರಿಸಿ, ವೈಜ್ಞಾನಿಕವಾಗಿ ಸಂರಕ್ಷಿಸುವ ಮಹತ್ವದ ಕಾರ್ಯಕ್ಕೆ ಗೋವಾ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಗೋವಾ ಸರ್ಕಾರ ಮತ್ತು ಸಂಕೇಶ್ವರದ ಶಂಕರಾಚಾರ್ಯ ಸಂಸ್ಥಾನ ಮಠದ ನಡುವೆ ಮಹತ್ವದ ಒಪ್ಪಂದ ಏರ್ಪಟ್ಟಿದೆ. ಗೋವಾ ಸಚಿವಾಲಯದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಸಂಕೇಶ್ವರ ಶ್ರೀಮಠದ ಪೀಠಾಧಿಪತಿ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ …

Read More »

ಬೆಂಗಳೂರು ಬೆಳಗಾವಿ ವಂದೇ ಭಾರತ್ ರೈಲಿನ ಉಟದಲ್ಲಿ ಬೋಲ್ಟ್ ಪತ್ತೆ

ಬೆಳಗಾವಿ: ಐಷಾರಾಮಿ ರೈಲು ಎಂದೇ ಗುರುತಿಸಿಕೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರಿಗೆ ನೀಡುವ ಆಹಾರದ ಗುಣಮಟ್ಟದ ಕುರಿತು ಗಂಭೀರ ಪ್ರಶ್ನೆ ಎದ್ದಿದೆ. ರೈಲಿನಲ್ಲಿ ಖರೀದಿಸಿದ ವಡಾದೊಳಗೆ ಬೋಲ್ಟ್ ಪತ್ತೆಯಾಗಿರುವ ಘಟನೆ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ. ಬೆಂಗಳೂರಿನಿಂದ ಬೆಳಗಾವಿಗೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ನಿನ್ನೆ ಪ್ರಯಾಣಿಸುತ್ತಿದ್ದ ಸಮರ್ಥ ಕೋಡಿಯಾಳ ಎಂಬುವವರು ಉಪಾಹಾರಕ್ಕಾಗಿ ವಡಾ ಖರೀದಿಸಿದ್ದರು. ಆದರೆ, ಅದನ್ನು ತಿನ್ನುವ ಸಂದರ್ಭದಲ್ಲಿ ಒಳಭಾಗದಲ್ಲಿ ಬೋಲ್ಟ್ ಇರುವುದು ಕಂಡುಬಂದಿದೆ. ಅನಿರೀಕ್ಷಿತವಾಗಿ ವಡಾದಲ್ಲಿ ಬೋಲ್ಟ್ ಪತ್ತೆಯಾಗಿದ್ದರಿಂದ …

Read More »

ಮಂಡೋಳಿ-ಖಾದರವಾಡಿ ಗ್ರಾಮಗಳಿಗೆ ₹2.50 ಕೋಟಿ ವೆಚ್ಚದಲ್ಲಿ ಸಂಪರ್ಕ ರಸ್ತೆ ನಿರ್ಮಾಣ

ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಂಡೋಳಿ ಗ್ರಾಮದಲ್ಲಿ ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ಮಂಡೋಳಿ ಮತ್ತು ಖಾದರವಾಡಿ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಸ್ಥಳೀಯ ಜನಪ್ರತಿನಿಧಿಗಳು, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಹಾಗೂ ಗ್ರಾಮಸ್ಥರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ಈ ರಸ್ತೆ ನಿರ್ಮಾಣದಿಂದ ಮಂಡೋಳಿ ಮತ್ತು ಖಾದರವಾಡಿ ಗ್ರಾಮಗಳ ನಡುವಿನ ಸಂಪರ್ಕ ಮತ್ತಷ್ಟು ಸುಗಮವಾಗಲಿದ್ದು, …

Read More »

ಬಡಸ್ ಕೆ.ಎಚ್. ಗ್ರಾಮದ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ 20 ಲಕ್ಷ ರೂ. ಅನುದಾನ: ಚನ್ನರಾಜ ಹಟ್ಟಿಹೊಳಿ ಅವರಿಂದ ಚೆಕ್ ವಿತರಣೆ

ಇದೇ ವೇಳೆ, ಸುಮಾರು 1.20 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಮಡಿವಾಳೇಶ್ವರ ಮಠದ ಅಭಿವೃದ್ಧಿ ಕಾಮಗಾರಿಗೆ ಮೂರನೇ ಕಂತಿನ ಅನುದಾನವಾಗಿ 15 ಲಕ್ಷ ರೂ.ಗಳ ಚೆಕ್ ಅನ್ನು ಸಂಬಂಧಪಟ್ಟ ಟ್ರಸ್ಟ್ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಗ್ರಾಮದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕೇಂದ್ರಗಳ ಅಭಿವೃದ್ಧಿಗೆ ನೆರವು ನೀಡಿರುವುದಕ್ಕೆ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಚನ್ನರಾಜ ಹಟ್ಟಿಹೊಳಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು …

Read More »

ಕುಡಿಯುವ ನೀರಿಗಾಗಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕಾಲಿಗೆ ಬಿದ್ದ ವೃದ್ಧ

ಬೆಳಗಾವಿ: ಕುಡಿಯುವ ನೀರಿನ ಸಮಸ್ಯೆಯಿಂದ ಬೇಸತ್ತ ವೃದ್ಧರೊಬ್ಬರು ಯುವ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ಕಾಲಿಗೆ ಬಿದ್ದು ಕಣ್ಣೀರಿಡುತ್ತಾ ಮನವಿ ಮಾಡಿದ ಘಟನೆ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ. ಕುಡಿಯುವ ನೀರಿಗಾಗಿ ಗ್ರಾಮಸ್ಥರು ಜನಪ್ರತಿನಿಧಿಗಳ ಮುಂದೆ ಅಂಗಲಾಚುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಉಮರಾಣಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಗ್ರಾಮಕ್ಕೆ ಐದು-ಆರು ದಿನಗಳಿಗೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದ್ದು, ಪ್ರತಿನಿತ್ಯದ …

Read More »

ಬೆಳಗಾವಿಯಲ್ಲಿ ತಲವಾರ ಹಿಡಿದು ತಿರುಗಾಡುತ್ತಿದ್ದ ಯುವಕನ ಬಂಧನ

ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ಹರಿತವಾದ ತಲವಾರ ಇಟ್ಟುಕೊಂಡು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯುವಕನನ್ನು ಮಾರ್ಕೆಟ್ ಠಾಣೆಯ ಆ್ಯಂಟಿ ಸ್ಟ್ಯಾಬಿಂಗ್ ಸ್ಕ್ವಾಡ್ ಬಂಧಿಸಿದ್ದು, ಆತನಿಂದ ಒಂದು ತಲವಾರವನ್ನು ವಶಪಡಿಸಿಕೊಂಡಿದೆ. ನವೆಂಬರ್ 27ರಂದು ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಆ್ಯಂಟಿ ಸ್ಟ್ಯಾಬಿಂಗ್ ಸ್ಕ್ವಾಡ್ ವಿಶೇಷ ಪರಿಶೀಲನೆ ನಡೆಸುತ್ತಿತ್ತು. ಈ ವೇಳೆ ಕೇಂದ್ರ ಬಸ್ ನಿಲ್ದಾಣದ ಸಮೀಪದ ಸ್ವೀಕಾರ ಹೋಟೆಲ್ ಬಳಿ …

Read More »

ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ರವಿ ಕೋಟಾರಗಸ್ತಿ

ಬೆಳಗಾವಿ: ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ, ಬೆಳಗಾವಿ ಸಾಹಿತಿ ರವಿ ಕೋಟಾರಗಸ್ತಿ ಭಾಜನರಾದರು. ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಶನಿವಾರ ನಡೆದ ಕೇರಳ ರಾಜ್ಯಮಟ್ಟದ ಎಂಟನೇ ಕನ್ನಡ ಸಮ್ಮೇಳನದಲ್ಲಿ, ಸಮ್ಮೇಳನದ ಸರ್ವಾಧ್ಯಕ್ಷರಾದ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಮಹಾಸ್ವಾಮೀಜಿ, ಶಿವರಾಮ ಕಾಸರಗೋಡ ಮತ್ತಿತರ ಗಣ್ಯರು  ಪ್ರಶಸ್ತಿ ಪ್ರದಾನ ಮಾಡಿದರು. ಧಾರ್ಮಿಕ ಮತ್ತು ದತ್ತಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ 37ವರ್ಷ ಕೆಲಸ …

Read More »