Breaking News

Monthly Archives: ಅಕ್ಟೋಬರ್ 2026

ಬರದಿಂದ ಶೇ. 80ರಷ್ಟು ಬೆಳೆ ನಷ್ಟ; ರೈತರಿಗೆ ಪರಿಹಾರ ಶೀಘ್ರ ಬಿಡುಗಡೆಗೆ ಕೇಂದ್ರಕ್ಕೆ ಒತ್ತಾಯ: ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿದ್ದು, ಕೆಲವು ಪ್ರದೇಶಗಳಲ್ಲಿ ಶೇ. 80ರಷ್ಟು ಬೆಳೆ ನಷ್ಟವಾಗಿದೆ. ಮುಂದಿನ ದಿನಗಳಲ್ಲಿ ಆಹಾರ  ಧಾನ್ಯಗಳ ಉತ್ಪಾದನೆಯ ಮೇಲೂ ಇದರ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಸದ್ಯಕ್ಕೆ ರಾಜ್ಯದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನೆಯಲ್ಲಿ ಕೊರತೆ ಎದುರಾದರೆ ಅದರ ಪರಿಣಾಮಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರದಲ್ಲಿರುವ ರಾಜ್ಯದ ಸಂಸದರು ಮತ್ತು ಸಚಿವರು ಪಕ್ಷಭೇದ ಮರೆತು ಬರ ಪರಿಸ್ಥಿತಿಯನ್ನು …

Read More »

10 ಸಾಧಕರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ – ನಾಳೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರದಾನ

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಅಕ್ಟೋಬರ್ 26ರಂದು ಆಚರಿಸಲಾಗುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರಿಗೆ 2026-27ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವ ಸಂಬಂಧ ಜಲಸಂಪನ್ಮೂಲ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯರಾದ ಜಿ.ಟಿ. ಚಂದ್ರಶೇಖರಪ್ಪ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. …

Read More »

ವೈಯಕ್ತಿಕ ದ್ವೇಷಕ್ಕೆ ಬಾಂಬ್ ಸ್ಫೋಟ – ಪುಲಕೇಶಿನಗರ ಬ್ಲಾಸ್ಟ್ ಹಿಂದಿನ ಅಸಲಿ ಕಹಾನಿ ಬಯಲು

ಬೆಂಗಳೂರು: ಸಿಲಿಕಾನ್ ಸಿಟಿಯ ಪುಲಕೇಶಿನಗರದಲ್ಲಿ ನಡೆದಿದ್ದ ಬಾಂಬ್ ಸ್ಫೋಟದ  ಸೂತ್ರದಾರರು ಸೆರೆಸಿಕ್ಕಿದ್ದು, ಕೇವಲ ವೈಯಕ್ತಿಕ ದ್ವೇಷ ಹಾಗೂ ಆಸ್ತಿ ವಿವಾದಕ್ಕಾಗಿ ಬಾಂಬ್ ಸ್ಫೋಟಿಸಿ ಕೊಲೆಗೆ ಸಂಚು ರೂಪಿಸಿದ್ದ ಅಸ್ಸಾಂ ಮೂಲದ ಖತರ್ನಾಕ್ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪುಲಕೇಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿನ ಬಾಂಬ್ ಬ್ಲಾಸ್ಟ್ ಕೇಸ್ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಅಲ್ಲಾವುದ್ದೀನ್ ಎಂಬಾತನನ್ನು ಮುಗಿಸುವುದಕ್ಕಾಗಿಯೇ ಈ ಬಾಂಬ್ ಸ್ಕೆಚ್ ಹಾಕಲಾಗಿತ್ತು. ಅಸ್ಸಾಂ …

Read More »

ಅಂಬಾರಿ ಆನೆ ಆಯ್ಕೆ ವಿಷಯವನ್ನ ನನ್ನಿಂದ ಮುಚ್ಚಿಡಲಾಗಿತ್ತು: ಪ್ರಮೋದಾದೇವಿ ಒಡೆಯರ್ ಬೇಸರ

ಮೈಸೂರು: ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಜಪಡೆಯ ಕ್ಯಾಪ್ಟನ್‌ (ಅಂಬಾರಿ ಆನೆ) ಆಯ್ಕೆ ವಿಚಾರವನ್ನ ನನ್ನಿಂದ ಮುಚ್ಚಿಡಲಾಗಿತ್ತು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌  ಬೇಸರ ಹೊರಹಾಕಿದ್ದಾರೆ. ಮೈಸೂರು ದಸರಾ  ಮುಕ್ತಾಯಗೊಂಡ ಬೆನ್ನಲ್ಲೇ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಗಜಪಡೆಯ ಕ್ಯಾಪ್ಟನ್ ಆಯ್ಕೆ ವಿಚಾರವನ್ನ ತಮ್ಮಿಂದ ಮುಚ್ಚಿಡಲಾಗಿತ್ತು ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಕಟಣೆಯಲ್ಲಿ ಏನಿದೆ? ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಅಂಬಾರಿ ಹೊರುವ ಆನೆಯ ವಿಷಯವನ್ನು …

Read More »

ಉಡುಪಿ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ

ಉಡುಪಿ: ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ ಅವರಿಂದು (ಅ.24) ಕುಟುಂಬ ಸಮೇತರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಶ್ರೀಕೃಷ್ಣ ದೇವರ ದರ್ಶನ ಪಡೆದರು. ಉಡುಪಿಯ ಶ್ರೀಕೃಷ್ಣ ಮಠಕ್ಕೆ  ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ, ಪುತ್ರಿ ಸೇರಿದಂತೆ ಕುಟುಂಬ ಸಮೇತರಾಗಿ ಭೇಟಿ ನೀಡಿ, ಶ್ರೀಕೃಷ್ಣ ದೇವರ ದರ್ಶನ ಪಡೆದರು.  ಮಠಕ್ಕೆ ಆಗಮಿಸಿದ ನಟಿ ಮಾಲಾಶ್ರೀ ಅವರು ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣ ದೇವರ ದರ್ಶನ ಪಡೆದು, ಬಳಿಕ …

Read More »

ಇದು ನನ್ನ ಮೇಲೆ ಅನುಮಾನ ಬರುವಂತೆ ನಡೆಯುತ್ತಿರುವ ತನಿಖೆ – ಪ್ರಿಯಾಂಕ್‌ ಖರ್ಗೆ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

ಹಾಸನ: ಸ್ಟಿಂಗ್ ಆಪರೇಷನ್‌ ಪ್ರಸ್ತಾಪ ಆದ ಮೊದಲ ದಿನದಿಂದ ಗೃಹ ಸಚಿವರು ನಮ್ಮ ಪಕ್ಷದ ವಾರ್ ರೂಮ್‌ನಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವ ಕುಟುಂಬಗಳಿಗೆ ಸರ್ಚ್ ವಾರೆಂಟ್ ಕೊಟ್ಟಿದ್ದಾರೆ. ಅವರಿಗೆ ಬೇಕಾದ ಪೊಲೀಸರನ್ನು ನೇಮಕ ಮಾಡಿದ್ದು, ನಮ್ಮ ಕಾರ್ಯಕರ್ತರ ಸುತ್ತ ಸುತ್ತುತ್ತಿದ್ದಾರೆ. ಇದು ನನ್ನ ಮೇಲೆ ಅನುಮಾನ ಬರುವ ರೀತಿಯಲ್ಲಿ ನಡೆಯುತ್ತಿರುವ ತನಿಖೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರು ಸಚಿವ ಪ್ರಿಯಾಂಕ್‌ ಖರ್ಗೆ  ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾವಿನಕೆರೆಯ ಶ್ರೀರಂಗನಾಥಸ್ವಾಮಿ …

Read More »

ಸಾಲ ಮರುಪಾವತಿಸಲಾಗದೇ ಮೂವರು ಮಕ್ಕಳೊಂದಿಗೆ ವಿಷ ಸೇವಿಸಿದ ತಾಯಿ – ಬಾಲಕಿ ಸಾವು

ಧಾರವಾಡ: ಸಾಲ  ಮರುಪಾವತಿಸಲಾಗದೇ ಮೂವರು ಮಕ್ಕಳಿಗೆ ವಿಷ ಕೊಟ್ಟು ತಾಯಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಓರ್ವ ಬಾಲಕಿ ಮೃತಪಟ್ಟಿರುವ ಘಟನೆ ಧಾರವಾಡ  ತಾಲೂಕಿನ ಕರಡಿಗುಡ್ಡ  ಗ್ರಾಮದಲ್ಲಿ ನಡೆದಿದೆ. ನಿವೇದಿತಾ ಅಲಿಯಾಸ್ ಗದಿಗೆವ್ವ (8) ಮೃತ ಬಾಲಕಿ. ಭಾಗ್ಯಶ್ರೀ (06), ಹರ್ಷಿತಾ (9) ಮತ್ತು ಸವಿತಾಗೆ (42) ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹಣಕಾಸು ವಿಚಾರಕ್ಕೆ ವಿಷಯ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಸವಿತಾ ಗ್ರಾಮದ ವಿವಿಧ ಸಂಘಗಳಲ್ಲಿ …

Read More »

KSOU ಶಿವಮೊಗ್ಗ ಪ್ರಾದೇಶಿಕ ಕಚೇರಿಯ ನಿರ್ದೇಶಕ ಅಮಾನತು

ಶಿವಮೊಗ್ಗ: ನಗರದ  ಕೆಎಸ್‌ಓಯು  ಪ್ರಾದೇಶಿಕ ಕಚೇರಿಯಲ್ಲಿ ಪರೀಕ್ಷಾ ಅಕ್ರಮ ಆರೋಪದ ವರದಿ ಪ್ರಸಾರವಾಗುತ್ತಿದ್ದಂತೆ ಕಚೇರಿಯ ನಿರ್ದೇಶಕ ಬಿ.ಎಂ.ಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ. ವಿಶ್ವವಿದ್ಯಾಲಯದ ಘನತೆಗೆ ಧಕ್ಕೆಯಾದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ಪರೀಕ್ಷಾಂಗ ಕುಲಸಚಿವರು ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಮೊಬೈಲ್, ಪುಸ್ತಕ ಕೊಟ್ಟು ಪರೀಕ್ಷೆ ಬರೆಸಲಾಗಿತ್ತು. ಪರೀಕ್ಷಾ ಅಕ್ರಮದ ವಿಡಿಯೋ ಸಮೇತ ʻಪಬ್ಲಿಕ್ ಟಿವಿʼ ಸುದ್ದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಅಮಾನತುಗೊಂಡ ಬಿ.ಎಂ.ಸ್ವಾಮಿಯವರ ಸ್ಥಾನಕ್ಕೆ ಹಾವೇರಿ ಪ್ರಾದೇಶಿಕ …

Read More »

ಸ್ಮಶಾನದಿಂದ ಮೃತದೇಹ ತೆಗೆದು ಖಾಸಗಿ ಮೆಡಿಕಲ್ ಕಾಲೇಜಿಗೆ ಮಾರಾಟ – ಮೂವರು ಆರೋಪಿಗಳು ವಶಕ್ಕೆ

ರಾಯಚೂರು: ಮಂತ್ರಾಲಯ ರಸ್ತೆ ಬಳಿಯ ಸ್ಮಶಾನದಿಂದ ಶವ ಮಾರಾಟ ದಂಧೆ ಬೆಳಕಿಗೆ ಬಂದಿದೆ. ಸ್ಮಶಾನದಿಂದ ಮೃತದೇಹಗಳನ್ನ ಹೊರತೆಗೆದು ಖಾಸಗಿ ಮೆಡಿಕಲ್ ಕಾಲೇಜಿಗೆ ಮಾರಾಟ ಮಾಡ್ತಿದ್ದ ಮೂವರು ಆರೋಪಿಗಳನ್ನು ರಾಯಚೂರಿನ  ನೇತಾಜಿ ನಗರ ಠಾಣೆ ಪೊಲೀಸರು ವಶಕ್ಕೆಪಡೆದಿದ್ದಾರೆ. ಮೃತದೇಹ ಪಡೆಯುತ್ತಿದ್ದ ವೇಳೆಯೇ ತಳವಾರ ಈರೇಶ್, ರಾಜು, ಅಪ್ಸರ್ ಎನ್ನುವವರು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. 1 ತಿಂಗಳು, 2 ತಿಂಗಳ ಹಿಂದೆ ಹೂತು ಹಾಕಿರುವ ಮೃತ ದೇಹಗಳನ್ನ ಹೊರತೆಗೆದು, ದೇಹದ ಭಾಗಗಳನ್ನ ಇವರು …

Read More »

ಸಿದ್ದರಾಮಯ್ಯ ನನ್ನ ರಾಜಕೀಯ ಗುರು: ಶಿವಲಿಂಗೇಗೌಡ

ಹಾಸನ: ಸಿದ್ದರಾಮಯ್ಯ ನನ್ನ ರಾಜಕೀಯ ಗುರುಗಳು ಎಂದು ಅಬಕಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ  ಹೇಳಿದ್ದಾರೆ. ಚನ್ನರಾಯಪಟ್ಟಣದ  ಕಬ್ಬಾಳು ಗ್ರಾಮದಲ್ಲಿ ಭಕ್ತ ಕನಕದಾಸ ಪ್ರತಿಮೆ ಹಾಗೂ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ನಾನು ಜೆಡಿಎಸ್‌ನಲ್ಲಿದ್ದಾಗ ಅವರು ಅದೇ ಪಕ್ಷದಲ್ಲಿದ್ದರು. ನನ್ನನ್ನು ರಾಜಕೀಯವಾಗಿ ಪೋಷಣೆ ಮಾಡಿ, ಸಹಾಯ ಮಾಡಿ, ಮಂತ್ರಿ ಪದವಿಯವರೆಗೂ ಕರೆದು ತಂದಿರುವ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದರು. ಸಿದ್ದರಾಮಯ್ಯ ಚಿಂತನೆಗಳು, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ …

Read More »