ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಬದಲಾವಣೆಯಲ್ಲಿ ನಾಲ್ವರಿಗೆ ಹೊಸದಾಗಿ ರಾಜ್ಯಪಾಲರ ಜವಾಬ್ದಾರಿ ನೀಡಲಾಗಿದ್ದು, ಇಬ್ಬರು ಹಾಲಿ ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಲಾಗಿದೆ. ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿ ಹಿರಿಯ ನಾಯಕಿ ಹಾಗೂ ಪಕ್ಷದ ಸಂಸದೀಯ ಮಂಡಳಿ ಸದಸ್ಯೆ ಡಾ. ಸುಧಾ ಯಾದವ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಸಿಕ್ಕಿಂ ರಾಜ್ಯಪಾಲರಾಗಿದ್ದ ಓಂ ಪ್ರಕಾಶ್ …
Read More »Daily Archives: ಅಕ್ಟೋಬರ್ 13, 2026
ಕುಡಿಯುವ ನೀರಿಗೂ ಪರದಾಟ; ಕೆರೆಯ ಕಲುಷಿತ ನೀರೇ ಆಧಾರ, 29 ಕುಟುಂಬಗಳ ಗೋಳು ಕೇಳೋರಿಲ್ಲ
ಮಡಿಕೇರಿ: ಬಡವರಿಗೆ ಸೂರು ಕಲ್ಪಿಸಬೇಕು, ಪ್ರತಿಯೊಬ್ಬರಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಪೊನ್ನತ್ ಮೊಟ್ಟೆ ಗ್ರಾಮದಲ್ಲಿ ಸರ್ಕಾರಿ ಪೈಸಾರಿ ಜಾಗದಲ್ಲಿ ವಾಸಿಸುತ್ತಿರುವ 29 ಕುಟುಂಬಗಳು ಇಂದಿಗೂ ಮೂಲಭೂತ ಸೌಲಭ್ಯಗಳಿಲ್ಲದೆ ಸಂಕಷ್ಟದ ಜೀವನ ನಡೆಸುತ್ತಿವೆ. ಇದೀಗ ಬಾವಿಯೂ ಬತ್ತಿಹೋಗಿದ್ದು, ಕುಡಿಯುವ ನೀರಿಗಾಗಿ ಕೆರೆಯ ನೀರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಒಂದೆಡೆ ಅಭಿವೃದ್ಧಿಯ ಮಾತುಗಳು ಕೇಳಿಬರುತ್ತಿದ್ದರೆ, ಮತ್ತೊಂದೆಡೆ …
Read More »ಅಂತರ್‌ರಾಜ್ಯ ಬೈಕ್ ಕಳ್ಳರ ಬಂಧನ: 18 ಲಕ್ಷ ಮೌಲ್ಯದ 29 ದ್ವಿಚಕ್ರ ವಾಹನ ವಶಕ್ಕೆ
ಬೆಂಗಳೂರು: ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಅಂತರ್‌ರಾಜ್ಯ ಕಳ್ಳರ ಗ್ಯಾಂಗ್‌ನ್ನು ಹೆಡೆಮುರಿ ಕಟ್ಟುವಲ್ಲಿ ಜಿಗಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲದ ರಾಜಶೇಖರ್ (28), ಚರಣ್ ಕುಮಾರ್ (19) ಹಾಗೂ ಪವನ್ ಕುಮಾರ್ (21)ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬರೋಬ್ಬರಿ 18 ಲಕ್ಷ ರೂಪಾಯಿ ಮೌಲ್ಯದ 29 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ನಕಲಿ ಕೀಗಳನ್ನು ಬಳಸಿ ಹಾಗೂ ಹ್ಯಾಂಡಲ್ ಲಾಕ್‌ಗಳನ್ನು ಮುರಿದು ಬೈಕ್‌ಗಳನ್ನು ಕಳ್ಳತನ …
Read More »ಮುಂದುವರಿದ ಮಹದೇವಪ್ಪ ಮುನಿಸು – ಸಿದ್ರಾಮಯ್ಯಗೆ ಆಹ್ವಾನವಿಲ್ಲದೇ ʻಸಂವಿಧಾನ ದಿನʼ ಆಚರಣೆ
ಮೈಸೂರು: ಆಪ್ತ ಮಿತ್ರರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಅವರ ನಡುವಿನ ಮುನಿಸು 2ನೇ ಹಂತಕ್ಕೆ ತಲುಪಿದಂತಿದೆ. ಸಿದ್ದರಾಮಯ್ಯ ಅವರಿಗೆ ಆಹ್ವಾನ ಇಲ್ಲದೇ ಮಹದೇವಪ್ಪ ಅವರು ಮೈಸೂರಿನಲ್ಲಿ ʻರಾಷ್ಟ್ರೀಯ ಸಂವಿಧಾನ ದಿನʼ ಕಾರ್ಯಕ್ರಮ ಆಯೋಜನೆ ಮಾಡಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ. ನವೆಂಬರ್ 26, 27 ರಂದು ಮೈಸೂರಿನಲ್ಲಿ ಸಂವಿಧಾನದ ಹೆಸರಿನಲ್ಲಿ ರಾಷ್ಟ್ರೀಯ ಸಂವಿಧಾನ ದಿನ ಸಮ್ಮೇಳನವನ್ನ ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನ ಮಾಜಿ ಸಚಿವ ಡಾ. …
Read More »ಧಾರವಾಡದ ಸ್ಟೀಲ್ ಅಂಗಡಿಯಲ್ಲಿ ಅಗ್ನಿ ದುರಂತ – ಕಂತೆ ಕಂತೆ ಹಣ ಬೆಂಕಿಗಾಹುತಿ
ಧಾರವಾಡ: ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಸ್ಟೀಲ್ ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮವಾಗಿರುವ ಘಟನೆ ಧಾರವಾಡದ ಸವದತ್ತಿ ರಸ್ತೆಯಲ್ಲಿ ಸಂಭವಿಸಿದೆ. ಸವದತ್ತಿ ರಸ್ತೆಯಲ್ಲಿರುವ ಲಕ್ಷ್ಮೀ ಸ್ಟೀಲ್ ಟ್ರೇಡರ್ಸ್ ಎಂಬ ಅಂಗಡಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಅಂಗಡಿಯ ಮಾಲೀಕರು ಭಾನುವಾರ ರಾತ್ರಿ ಕೆಲಸ ಮುಗಿಸಿ, ಅಂದು ವ್ಯಾಪಾರವಾಗಿದ್ದ ಹಣವನ್ನೂ ಅಂಗಡಿಯಲ್ಲೇ ಇಟ್ಟು ಬೀಗ ಹಾಕಿಕೊಂಡು ಹೋಗಿದ್ದರು. ಇದ್ದಕ್ಕಿದ್ದಂತೆ ಅಂಗಡಿಯೊಳಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲೇ …
Read More »ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್
ಮೈಸೂರು: ನಟ ಪ್ರಭುದೇವ್ ತಾಯಿ ಜೊತೆ ಆಗಮಿಸಿ ಸುತ್ತೂರು ಮಠಕ್ಕೆ ಭೇಟಿದ್ದಾರೆ. ಬಹುಭಾಷಾ ನಟ ಪ್ರಭುದೇವ್ ಅವರಿಂದು (ಅ.12) ತಾಯಿಯ ಜೊತೆಯಲ್ಲಿ ಆಗಮಿಸಿ, ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: ನಾಡಿನೆಲ್ಲೆಡೆ ದಸರಾ ಸಂಭ್ರಮ ಮಾಡಿದ್ದು, ಮೈಸೂರು ವಿಶ್ವವಿಖ್ಯಾತ ದಸರಾಗೆ ಸಾಕ್ಷಿಯಾಗುತ್ತಿದೆ. ನಾಳೆ (ಅ.13) ಮೈಸೂರು ದಸರಾದಲ್ಲಿ ಯುವ ದಸರಾವನ್ನು ಬಹುಭಾಷಾ ನಟ ಪ್ರಭುದೇವ್ ಉದ್ಘಾಟಿಸಲಿದ್ದಾರೆ. ಈ …
Read More »ಮಣಿಪುರ ಕಾಂಗ್ರೆಸ್ ಎಂಪಿ, JNU ಫ್ರೊಫೆಸರ್ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ
ಬೆಂಗಳೂರು: ಮಣಿಪುರದ ಕಾಂಗ್ರೆಸ್ ಸಂಸದ ಹಾಗೂ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿಮೋಲ್ ಅಕೋಯಿಜಮ್ ವಿರುದ್ಧ ಬಿಜೆಪಿಯ ಮಹಿಳಾ ಸದಸ್ಯರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಮುಂಭಾಗ ಜಮಾಯಿಸಿದ ನೂರಾರು ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕೈಯಲ್ಲಿ ಪೋಸ್ಟರ್‌ಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ವಿರೋಧಿ ಕಾಂಗ್ರೆಸ್, ಲೈಂಗಿಕ ಕಿರುಕುಳ ಆರೋಪಿ ಸಂಸದ ರಾಜೀನಾಮೆ ನೀಡಲಿ ಎಂದು ಘೋಷಣೆಗಳನ್ನು ಕೂಗಿದರು. ರಾಹುಲ್ ಗಾಂಧಿ ಅವರು ದೇಶವ್ಯಾಪಿ …
Read More »ಮೈಸೂರು ದಸರಾ 2026: ಮೈತಳೆದ 40 ಅಡಿ ಎತ್ತರದ ಭವ್ಯ `ಕೃಷ್ಣಾರ್ಜುನ ರಥ’
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಎಂದಕ್ಷಣ ನೆನಪಿಗೆ ಬರುವುದು ಅರಮನೆ ನಗರಿಯ ರಸ್ತೆಗಳಲ್ಲಿ ಕಂಗೊಳಿಸುವ ವಿದ್ಯುತ್ ದೀಪಾಲಂಕಾರದ ವೈಭವ. ಪ್ರತಿ ಬಾರಿಯಂತೆ ಈ ಬಾರಿಯೂ ದಸರಾ ಕಳೆಕಟ್ಟಿದ್ದು, ಸಾಂಸ್ಕೃತಿಕ ನಗರಿಯ ಪ್ರಮುಖ ವೃತ್ತಗಳು ಹಾಗೂ ಬೀದಿಗಳು ದ್ಯುತಿಪೂರ್ಣವಾಗಿ ಬೆಳಗುತ್ತಿವೆ. ಈ ಬಾರಿ ದಸರಾ ದೀಪಾಲಂಕಾರದ ಪ್ರಮುಖ ಹೈಲೈಟ್ಸ್‌ನಲ್ಲಿ ಒಂದಾಗಿರುವ ಎಲ್‌ಐಸಿ ವೃತ್ತದ ಕೃಷ್ಣಾರ್ಜುನರ ರಥ ಸದ್ಯ ಜನರನ್ನು ತನ್ನತ್ತ ಸಖತ್ ಸೆಳೆಯುತ್ತಿದೆ. ಕಲಾಚತುರರ ಕೈಚಳಕದಲ್ಲಿ ಮೂಡಿಬಂದ ಕಲಾಕೃತಿ: …
Read More »ಖಾಸಗಿ ದರ್ಬಾರ್ – ಮೈಸೂರು ಅರಮನೆಯಲ್ಲಿ ಮರುಕಳಿಸಿದ ಗತವೈಭವ
ಒಂದು ಕಡೆ ನಾಡಹಬ್ಬ ದಸರಾಗೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ಸಿಕ್ಕಿದ್ರೆ. ಇತ್ತ ಅಂಬಾ ವಿಲಾಸ ಅರಮನೆಯಲ್ಲಿ ನಡೆದ ಖಾಸಗಿ ದರ್ಬಾರ್ ಗತಕಾಲದ ವೈಭವವನ್ನು ಮರುಕಳಿಸಿತ್ತು. ಇನ್ನು ಯದುವೀರ್ ಒಡೆಯರ್ ಇಡೀ ಕುಟುಂಬ ಖಾಸಗಿ ದರ್ಬಾರ್‌ನಲ್ಲಿ ಪಾಲ್ಗೊಂಡಿದ್ರು. ರಾಜಾಧೀರಾಜ…….. ರಾಜ ಮಾರ್ತಾಂಡ………. ರಾಜ ಕುಲತಿಲಕ…….. ರಾಜ ಮಾರ್ತಾಂಡ…… ಯದುವೀರ ಪರಾಕ್………. ಬಹು ಪರಾಕ್………………… ಹೀಗೆ ವಂಧಿ ಮಾಗಧರು ಬಹುಪರಾಕ್ ಕೂಗ್ತಾ ಇದ್ರೆ ಇತ್ತ ರಾಜಗಾಂಭೀರ್ಯದಿಂದ ಸಿಂಹಾನದ ಕಡೆ ಯದುವಂಶದ ಮಹರಾಜ ಯದುವೀರ …
Read More »ಗೃಹಜ್ಯೋತಿ ಫಲಾನುಭವಿಗಳ ಮರುಪರಿಶೀಲನೆ – ಮತ್ತೆ ಒಂದು ತಿಂಗಳ ಗಡುವು ವಿಸ್ತರಣೆ
ಬೆಂಗಳೂರು: ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನೆಗೆ ಮತ್ತೆ ಒಂದು ತಿಂಗಳ ಗಡುವು ವಿಸ್ತರಣೆ ಮಾಡಲಾಗಿದ್ದು, ಅ.31ರವರೆಗೆ ಅವಕಾಶ ನೀಡಲಾಗಿದೆ. ಜುಲೈ 1ರಿಂದ ಗೃಹಜ್ಯೋತಿ ಫಲಾನುಭವಿಗಳ ಮರುಪರಿಶೀಲನೆಗೆ ಆರಂಭವಾಗಿತ್ತು. ಮೊದಲಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಅದಾದ ಬಳಿಕ ಮನೆ ಮಾಲೀಕರು ಮತ್ತು ಬಾಡಿಗೆದಾರರ ಹೆಚ್ಚುವರಿ ದಾಖಲೆ ಸಂಗ್ರಹ ಹಿನ್ನೆಲೆ ಗಡುವನ್ನು ವಿಸ್ತರಣೆ ಮಾಡಲಾಗಿತ್ತು. ಇದೀಗ ಮತ್ತೆ ಒಂದು ತಿಂಗಳ ಕಾಲ ಸಮಯ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಮರುಪರಿಶೀಲನೆಗೆ ಒಟ್ಟು ನಾಲ್ಕು …
Read More »
Laxmi News 24×7