Breaking News

Daily Archives: ಅಕ್ಟೋಬರ್ 14, 2026

ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ- ಪ್ರಿಯತಮೆಗೆ ಕೈಕೊಟ್ಟು ಪ್ರಿಯಕರ ಎಸ್ಕೇಪ್

ಬೆಂಗಳೂರು: ಅಂತರ್ಜಾತಿ ವಿವಾಹಕ್ಕೆ  ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಪ್ರಿಯತಮೆಗೆ ಕೈಕೊಟ್ಟು ಪ್ರಿಯಕರ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ, ಕಲ್ಲೇಸೋಮಹಳ್ಳಿ ಗ್ರಾಮದ ಸೂರ್ಯ (26) ಹಾಗೂ ಕಾಸರಗೋಡು ಮೂಲದ ಯುವತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಐದು ತಿಂಗಳಿನಿಂದ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಈ ವಿಷಯವನ್ನು ಸೂರ್ಯ ಪೋಷಕರಿಗೂ ತಿಳಿಸಿದ್ದರು. ಇಬ್ಬರ ಮದುವೆಗೆ ಸೂರ್ಯ ಪೋಷಕರು ಒಪ್ಪಿದ್ದರು ಎನ್ನಲಾಗಿದೆ. ಆದರೆ ಯುವತಿ ತಾಯಿ ಮದುವೆಗೆ ನಿರಾಕರಿಸಿದ್ದು ಮಗಳ …

Read More »

ದೇವಸ್ಥಾನಗಳೇ ಟಾರ್ಗೆಟ್‌ – ವಿಗ್ರಹ ಕದಿಯುತ್ತಿದ್ದ ಖದೀಮರು ಅರೆಸ್ಟ್‌

ಬೆಂಗಳೂರು: ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ದೇವರ ವಿಗ್ರಹಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ತಲಘಟ್ಟಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಬನ್ನೇರುಘಟ್ಟ ಹಾಗೂ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆಸಿದ್ದರು. ಇತ್ತೀಚೆಗೆ ದೇವಸ್ಥಾನಗಳಿಂದ ಒಟ್ಟು ನಾಲ್ಕು ಬೆಲೆಬಾಳುವ ವಿಗ್ರಹಗಳನ್ನು ಕದ್ದು ಎಸ್ಕೇಪ್ ಆಗಿದ್ದರು. ಆರೋಪಿಗಳು ಗಣೇಶ, ಆಂಜನೇಯ ಹಾಗೂ ಲಕ್ಷ್ಮೀ ನಾಗರ ವಿಗ್ರಹಗಳನ್ನು ಕಳ್ಳತನ ಮಾಡಿದ್ದರು ಎಂದು ತಿಳಿದುಬಂದಿದೆ. ಕೇವಲ ದೇವಸ್ಥಾನಗಳಲ್ಲಷ್ಟೇ …

Read More »

ದಸರಾ ಮಹೋತ್ಸವದಲ್ಲಿ ವಿಂಟೇಜ್ ಕಾರುಗಳ ವೈಭವ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2026ರ ಸಂಭ್ರಮದಲ್ಲಿ ಹಳೆಯ ಕಾಲದ ವೈಭವ ಮರುಕಳಿಸಿದ್ದು, ಕರ್ನಾಟಕ ವಿಂಟೇಜ್ ಅಂಡ್ ಕ್ಲಾಸಿಕ್ ಕಾರ್ ಕ್ಲಬ್ ವತಿಯಿಂದ ಮೈಸೂರು ಅರಮನೆ ಮುಂಭಾಗ ವಿಂಟೇಜ್ ಕಾರ್ ಪ್ರದರ್ಶನ ಏರ್ಪಡಿಸಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿರುವ ಸುಮಾರು 100 ವರ್ಷಗಳಷ್ಟು ಹಳೆಯದಾದ ಅಪರೂಪದ ಕ್ಲಾಸಿಕ್ ಕಾರುಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ. ಒಂದು ಕಾಲದಲ್ಲಿ ಮಹಾರಾಜರು ಹಾಗೂ ಆಗರ್ಭ ಶ್ರೀಮಂತರು ಬಳಕೆ ಮಾಡುತ್ತಿದ್ದ ಈ ಐಷರಾಮಿ ವಾಹನಗಳನ್ನು ಸಾವಿರಾರು …

Read More »

ಸೌಜನ್ಯ ಪ್ರಕರಣದಲ್ಲಿ ತಂದೆ, ತಾಯಿ ಹಣ ಮಾಡಿಕೊಂಡಿದ್ದಾರೆ – ವಕೀಲ ಅಮೃತೇಶ್ ಗಂಭೀರ ಆರೋಪ

ಬೆಂಗಳೂರು: ಸೌಜನ್ಯ ಪ್ರಕರಣದಲ್ಲಿ ಆಕೆಯ ತಂದೆ, ತಾಯಿ ಹಣ ಮಾಡಿಕೊಂಡಿದ್ದಾರೆ ಎಂದು ಹೈಕೋರ್ಟ್  ವಕೀಲ ಅಮೃತೇಶ್ ಗಂಭೀರ ಆರೋಪ ಮಾಡಿದ್ದಾರೆ. ಸೌಜನ್ಯ ಪ್ರಕರಣ  ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು ಸುಪ್ರೀಂ ಕೋರ್ಟ್  ತೀರ್ಪಿಗೆ ಕಾರಣವಾದ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಕರಣದ ಮುಂದಿನ ತನಿಖೆ ಮತ್ತು ನ್ಯಾಯದ ನಿರೀಕ್ಷೆ ಬಗ್ಗೆ ಚರ್ಚೆ ನಡೆಸಿದ್ದಾರೆ ಹಾಗೂ ಪ್ರಕರಣದಲ್ಲಿ ಯರ‍್ಯಾರು ಎಷ್ಟು ಹಣ ಪಡೆದುಕೊಂಡರು ಎನ್ನುವ ಆಡಿಯೋ ರಿಲೀಸ್ ಮಾಡಿದ್ದಾರೆ.  …

Read More »

ಅಲೋಕ್ ಕುಮಾರ್, ದಿವ್ಯಾ ಗೋಪಿನಾಥ್ ಬದಲಾವಣೆಗೆ ಸುಪ್ರೀಂ ಒಪ್ಪಿಗೆ

ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣದ ತನಿಖೆಗೆ ಹೈಕೋರ್ಟ್ ರಚಿಸಿದ್ದ ವಿಶೇಷ ತನಿಖಾ ತಂಡದ  ಮುಖ್ಯಸ್ಥರಾದ ಡಿಜಿಪಿ ಅಲೋಕ್ ಕುಮಾರ್ ಹಾಗೂ ಡಿಐಜಿ ದಿವ್ಯಾ ಗೋಪಿನಾಥ್ ಅವರ ಬದಲಾವಣೆಗೆ ಸುಪ್ರೀಂ ಕೋರ್ಟ್  ಒಪ್ಪಿಗೆ ನೀಡಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠದಲ್ಲಿ ಸುದೀರ್ಘ ಹಾಗೂ ತೀವ್ರ ವಾದ-ಪ್ರತಿವಾದಗಳು ನಡೆದವು. ಅಂತಿಮವಾಗಿ ಇಬ್ಬರ ಅಧಿಕಾರಿಗಳ ಬದಲು ಹೊಸ ಅಧಿಕಾರಿಗಳ ಹೆಸರನ್ನು …

Read More »

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಮಾದಕ ವಸ್ತು ಜಪ್ತಿ – ಇಬ್ಬರು ಅರೆಸ್ಟ್

ಬೆಂಗಳೂರು: ನಗರದಲ್ಲಿ ಕುಂಬಳಗೋಡು ಪೊಲೀಸರು  ದಾಖಲೆ ಪ್ರಮಾಣದ ಗಾಂಜಾ ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ್ದಾರೆ. ಕೇರಳ ಮತ್ತು ಒಡಿಶಾ ರಾಜ್ಯದಿಂದ ಬೆಂಗಳೂರಿಗೆ ಬರ್ತಿದ್ದ ಸುಮಾರು 1.70 ಕೋಟಿ ರೂ. ಮೌಲ್ಯದ 317 ಕೆಜಿ ಮಾದಕ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಆರೋಪಿಗಳಾದ ಚಾಂದ್ ಪಾಷ, ವಿಷ್ಣುವನ್ನು ಬಂಧಿಸಿದ್ದಾರೆ.  ಇಬ್ಬರು ಆರೋಪಿಗಳು ಕಾರಿನ ಸೀಟ್‌ಗಳಲ್ಲಿ ಗಾಂಜಾವನ್ನು ಆಡಗಿಸಿ ನಗರಕ್ಕೆ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಹೊಂದಿದ್ದ …

Read More »

ಹೆಚ್‌ಡಿಕೆ ಒಳ್ಳೆಯ ವಿಚಾರದ ಬಗ್ಗೆ ರಾಜ್ಯದ ಗಮನ ಸೆಳೆದಿದ್ದಾರೆ – ಆರೋಪಗಳಿಗೆ ಕಾಲವೇ ಉತ್ತರಿಸಲಿದೆ: ಡಿಕೆಶಿ ವ್ಯಂಗ್ಯ

ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಒಳ್ಳೆಯ ವಿಚಾರದ ಬಗ್ಗೆ ರಾಜ್ಯದ ಗಮನ ಸೆಳೆದಿದ್ದಾರೆ. ಎಲ್ಲ ಆರೋಪಗಳಿಗೆ ಕಾಲವೇ ಉತ್ತರಿಸಲಿದೆ ಎಂದು ಸಿಎಂ ಡಿ.ಕೆ ಶಿವಕುಮಾರ್  ಅವರು ವ್ಯಂಗ್ಯವಾಡಿದರು. ದೆಹಲಿಯ (Delhi) ಕರ್ನಾಟಕ ಭವನದ ಬಳಿ ಮಾಧ್ಯಮಗಳಿಗೆ ಮಂಗಳವಾರ (ಅ.13) ಪ್ರತಿಕ್ರಿಯೆ ನೀಡಿದರು. ನಿಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಸ್ಟಿಂಗ್ ಆಪರೇಷನ್ ಹಿಂದೆಯೂ ನೀವೇ ಇದ್ದೀರಿ ಎನ್ನುವ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, ಬಹಳ ಸಂತೋಷ. ಕುಮಾರಸ್ವಾಮಿ ಅವರ ಆರೋಪಗಳಿಗೆ …

Read More »

ಅನ್ನಸೇವೆ ಆ್ಯಪ್ ರಾಜ್ಯಾದ್ಯಂತ ಲಭ್ಯ; ಅ.20ರೊಳಗೆ e-KYC ಕಡ್ಡಾಯ

ಬೆಂಗಳೂರು: ಅನ್ನಭಾಗ್ಯ ಸೇರಿದಂತೆ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳಿಗೆ ಸಿಹಿಸುದ್ದಿ. ಫಲಾನುಭವಿಗಳು ಮನೆಯಲ್ಲೇ ಕುಳಿತು e-KYC ಮಾಡಿಕೊಳ್ಳಲು ಅನುಕೂಲವಾಗುವ ‘ಅನ್ನಸೇವೆ’ ಮೊಬೈಲ್ ಆ್ಯಪ್ ಅಕ್ಟೋಬರ್ 14ರಿಂದ ರಾಜ್ಯಾದ್ಯಂತ ಲಭ್ಯವಾಗಲಿದೆ. e-KYC ಪೂರ್ಣಗೊಳಿಸಲು ಅಕ್ಟೋಬರ್ 20 ಕೊನೆಯ ದಿನವಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಮತ್ತು ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಈ ಆ್ಯಪ್‌ ಅನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅಕ್ಟೋಬರ್ 1ರಂದು ಬಿಡುಗಡೆ ಮಾಡಿದ್ದರು. …

Read More »

ಕರ್ಲಾನ್ ಹಾಸಿಗೆ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ; ಮುಗಿಲೆತ್ತರಕ್ಕೆ ದಟ್ಟ ಹೊಗೆ

ಬೆಂಗಳೂರು: ನಗರದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕರ್ಲಾನ್  ಹಾಸಿಗೆ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹಾಸಿಗೆ ತಯಾರಿಸಲು ಸಂಗ್ರಹಿಸಿಟ್ಟಿದ್ದ ಕಚ್ಚಾ ವಸ್ತುಗಳ ಶೆಡ್‌ಗೆ ಶಾರ್ಟ್ ಸರ್ಕ್ಯೂಟ್‌ನಿಂದ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಬೆಂಕಿ ತಗುಲಿದೆ. ಅಗ್ನಿ ಅವಘಡದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಎರಡು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ …

Read More »

ಚಿಕಿತ್ಸೆ ಫಲಿಸದೆ ಗಾಯಗೊಂಡ ಚಿರತೆ ಸಾವು; ಅರಣ್ಯ ಇಲಾಖೆ ಅಧಿಕಾರಿಗಳಿಂದ ಅಂತ್ಯಕ್ರಿಯೆ

ಗದಗ: ಕೃಷಿ ಹೊಂಡದ ಪೈಪ್‌ನಲ್ಲಿ ಅವಿತು ಕುಳಿತಿದ್ದ ಗಾಯಗೊಂಡ ಗಂಡು ಚಿರತೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹನುಮಂತ ಪವಾರ್ ಎಂಬುವವರ ಜಮೀನಿನ ಪೈಪ್‌ನಲ್ಲಿ ಸುಮಾರು 8ರಿಂದ 9 ವರ್ಷ ವಯಸ್ಸಿನ ಗಂಡು ಚಿರತೆ ಕುಳಿತಿರುವುದು ಕುರಿಗಾಹಿಗಳ ಕಣ್ಣಿಗೆ ಬಿದ್ದಿದೆ. ಚಿರತೆಯನ್ನು ಕಂಡು ಭಯಭೀತರಾದ ಕುರಿಗಾಹಿಗಳು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ …

Read More »