ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ, ಫಾರ್ಮ್ 7 ಸಲ್ಲಿಕೆಗೆ ಸಂಬಂಧಿಸಿದಂತೆ ಬಿಜೆಪಿಯ ಬೂತ್ ಮಟ್ಟದ ಏಜೆಂಟ್ ಗಳ ಮೇಲೆ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಎಫ್‌ಐಆರ್ ರದ್ದು ಕೋರಿ ಗುಟ್ಟಳ್ಳಿಯ ಜಿ.ಎಸ್ ವಸಂತಲಕ್ಷ್ಮಿ, ಯಶವಂತಪುರದ ಆರ್. ದೀಪಕ್ ಸಿಂಗ್, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಹಾಜರಾಗಿ, ಪರಿಷ್ಕರಣೆ ವೇಳೆ ಬಿಎಲ್ಎಗಳು …
Read More »Daily Archives: ಅಕ್ಟೋಬರ್ 10, 2026
ಬಾಯಿ ಚಪಲಕ್ಕೆ ಏನಾದ್ರೂ ಹೇಳೋದು ಸರಿಯಲ್ಲ – ಗಣಿಗ ರವಿಗೆ ವಿಜಯೇಂದ್ರ ಟಾಂಗ್
ವಿಜಯಪುರ:ಬಾಯಿ ಚಪಲಕ್ಕೆ ಏನಾದ್ರೂ ಹೇಳೋದು ಸರಿಯಲ್ಲ ಎಂದು ಶಾಸಕ ಗಣಿಗ ರವಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಸ್ಟಿಂಗ್ ಆಪರೇಷನ್‌ಗೆ ಸುಪಾರಿ ನೀಡಿದ್ದಾರೆ ಎಂಬ ಶಾಸಕ ಗಣಿಗ ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಾಯಿ ಚಪಲಕ್ಕೆ ಏನಾದ್ರೂ ಹೇಳೋದು ಸರಿಯಲ್ಲ. ಚಪಲಕ್ಕಾಗಿ ಹೇಳಿಕೆ ಕೊಡೋದು ಸರಿಯಲ್ಲ. ಅದು ಪಕ್ಷಕ್ಕೂ ಹಾಗೂ ಅವರಿಗೂ ಒಳ್ಳೆಯದಲ್ಲ ಎಂದಿದ್ದಾರೆ. ಇದು ಮೂರ್ಖತನದ ಹೇಳಿಕೆ. ಜವಾಬ್ದಾರಿಯುತ ಸ್ಥಾನದಲ್ಲಿರುವವ ಶಾಸಕರು …
Read More »980 ರೂಪಾಯಿ ಶಾಲ್‌ಗೆ ಟೆಂಡರ್ ಬೇಡ, ಬೆಂಗ್ಳೂರಿಂದ ಹೋಲ್‌ಸೇಲ್‌ಗೆ ತನ್ನಿ – ಸಚಿವ ಶಿವಲಿಂಗೇಗೌಡ ಗರಂ
ಹಾಸನ: ಅ.29ರಿಂದ ನ.11ರ ವರೆಗೆ ನಡೆಯಲಿರುವ ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಿವಲಿಂಗೇಗೌಡ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಶಾಸಕ ಹೆಚ್.ಪಿ ಸ್ವರೂಪ್‌ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಎಸ್ಪಿ ಶುಭನ್ವಿತಾ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ವಿವಿಧ ಕಾಮಗಾರಿಗಳನ್ನ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಜಾತ್ರಾ ಮಹೋತ್ಸವಕ್ಕೆ ಖರ್ಚು ವೆಚ್ಚ …
Read More »ಸ್ಟಿಂಗ್ ಆಪರೇಷನ್ ತನಿಖೆ ಮುಖ್ಯಮಂತ್ರಿಗಳೇ ನಿರ್ಧರಿಸಬೇಕು: ಪರಮೇಶ್ವರ್
ಬೆಂಗಳೂರು: ಸ್ಟಿಂಗ್ ಆಪರೇಷನ್ ಕುರಿತು ತನಿಖೆ ನಡೆಸುವ ಬಗ್ಗೆ ಮುಖ್ಯಮಂತ್ರಿಗಳೇ ನಿರ್ಧರಿಸಬೇಕು ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತಾಡಿದ ಅವರು, ಸಿಎಂ ಅವರು ಒಂದು ಎಚ್ಚರಿಕೆ ಕೊಟ್ಟಿದ್ದಾರೆ. ಅವರ ಹತ್ತಿರವೇ ಗುಪ್ತಚರ ಇಲಾಖೆ ಇದೆ. ಅವರಿಗೆ ಒಂದಷ್ಟು ಮಾಹಿತಿ ಬಂದಿರುತ್ತೆ. ಹಾಗಾಗಿ ಹೇಳಿದ್ದಾರೆ. ಆದರೆ, ಸಿಎಂ ಮೇಲೆ ಸ್ಟಿಂಗ್ ಆಪರೇಷನ್ ಆಗಿರೋದು ನಮ್ಮ ಗಮನಕ್ಕೆ ಬಂದಿಲ್ಲ. ನಾವು ಯಾವುದೇ ಸಮಸ್ಯೆಗಳನ್ನು ಕಡೆಗಣಿಸಿಲ್ಲ. ಡೈವರ್ಟ್ ರಾಜಕಾರಣ ಮಾಡ್ತಿಲ್ಲ. ಸ್ಟಿಂಗ್ ಆಪರೇಷನ್‌ನಲ್ಲಿ …
Read More »ರಸ್ತೆಬದಿ ಸಸಿ ಕಿತ್ತಿದ್ದಕ್ಕೆ ರೈತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ
ರಾಯಚೂರು: ರಸ್ತೆ ಬದಿಯ ಸಸಿಗಳನ್ನು ಕಿತ್ತು ಹಾಕಿದ್ದಾನೆ ಅಂತ ರೈತನ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಾಯಚೂರು ಜಿಲ್ಲೆಯ ಮಸ್ಕಿತಾಲೂಕಿನ ಯರದೊಡ್ಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಸಸಿ ಹಚ್ಚಲು ಬಿಟ್ಟಿಲ್ಲಾ, ಹಚ್ಚಿದ ಸಸಿಗಳನ್ನ ಕಿತ್ತಿದ್ದಾನೆ ಅಂತ ರೈತ ರಮೇಶ ಮೇಲೆ ಹಲ್ಲೆ ಮಾಡಲಾಗಿದೆ. ಯರದೊಡ್ಡಿ ಗ್ರಾಮದ ಸರ್ವೆ ನಂ 29ರ ಜಮೀನಿನ ರಸ್ತೆ ಬದಿಯಲ್ಲಿ ಸಸಿ ಹಚ್ಚುವ ವಿಚಾರಕ್ಕೆ …
Read More »ಇನ್ಶೂರೆನ್ಸ್ ಹಣದ ಆಸೆಗೆ ಪತಿಯನ್ನೇ ಕೊಂದ ಪತ್ನಿ – ಮೂವರು ಅರೆಸ್ಟ್
ಕೊಪ್ಪಳ: ಮನೆ ನಿರ್ಮಾಣಕ್ಕೆ ಮಾಡಿದ್ದ ಸಾಲ ಮನ್ನಾ ಆಗುತ್ತದೆ ಹಾಗೂ ವಿಮೆ ಹಣ ಕೈ ಸೇರುತ್ತದೆ ಎಂಬ ತಪ್ಪು ಮಾಹಿತಿ ನಂಬಿ ಪತ್ನಿಯೇ ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಕಾರಟಗಿ ತಾಲೂಕಿನ ಮುಸ್ಟೂರು ಕ್ಯಾಂಪ್‌ನಲ್ಲಿ ನಡೆದಿದೆ. ಕಾರಟಗಿ ತಾಲೂಕಿನ ಮುಸ್ಟೂರು ಕ್ಯಾಂಪ್ ನಿವಾಸಿ ರಾಘವೇಂದ್ರ ಹನುಮಂತಪ್ಪ ಸಾಳುಂಕೆ (38) ಕೊಲೆಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಉಮಾ, ಆಕೆಯ ಸಂಬಂಧಿ ಶಿವಾಜಿ ಹಾಗೂ ಶಿವಾಜಿಯ ಸ್ನೇಹಿತ ಖಲೀಲ್‌ನನ್ನು ಗಂಗಾವತಿ …
Read More »ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್! ಮೊಬೈಲ್ ಟಾರ್ಚ್ ಬೆಳಕಲ್ಲೇ ರಾತ್ರಿ ಕಳೆದ ಬಾಣಂತಿಯರು, ಹಸುಗೂಸುಗಳು
ಬಳ್ಳಾರಿ: ಸರ್ಕಾರಿ ಆಸ್ಪತ್ರೆ ಅಂದರೆ ಬಡ ರೋಗಿಗಳಿಗೆ ಸಂಜೀವಿನಿ ಆಗಬೇಕು. ಆದರೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಇಲ್ಲದೆ ಬಾಣಂತಿಯರು, ನವಜಾತ ಶಿಶುಗಳು ಮೊಬೈಲ್ ಟಾರ್ಚ್ನಲ್ಲಿ ಇಡೀ ರಾತ್ರಿ ಕಳೆಯುವಂತಾಗಿದೆ. ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಟಾರ್ಚ್ ಬೆಳಕೆ ಆಸರೆ; ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಪೋಷಕರು ಆಕ್ರೋಶ ಬಳ್ಳಾರಿ ಜಿಲ್ಲೆಯ …
Read More »ಇಂದು ಈ 3 ಗಿಡ ನೆಡಿ; ತಲೆಮಾರುಗಳಿಂದ ಬಂದ ಪಿತೃದೋಷದಿಂದ ಮುಕ್ತಿ ಪಡೆಯುವಿರಿ
ಹಿಂದೂ ಧರ್ಮದಲ್ಲಿ, ಪಿತೃ ಪಕ್ಷದ ಅಮಾವಾಸ್ಯೆಯ ದಿನವು ವಿಶೇಷ ಮಹತ್ವವನ್ನು ಹೊಂದಿದೆ ಮತ್ತು ಇದನ್ನು ಸರ್ವ ಪಿತೃ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಪವಿತ್ರ ದಿನದಂದು, ಎಲ್ಲಾ ಪೂರ್ವಜರ ಶ್ರಾದ್ಧವನ್ನು ಒಟ್ಟಾಗಿ ಆಚರಿಸುವ ಮೂಲಕ ಅವರಿಗೆ ವಿದಾಯ ಹೇಳಲಾಗುತ್ತದೆ. ಯಾವುದೇ ಕಾರಣದಿಂದಾಗಿ, ತಮ್ಮ ಪೂರ್ವಜರಿಗೆ ಆಯಾ ನಿರ್ದಿಷ್ಟ ದಿನಾಂಕಗಳಲ್ಲಿ ಶ್ರಾದ್ಧ ಮಾಡಲು ಸಾಧ್ಯವಾಗದವರು, ಈ ಶುಭ ದಿನದಂದು ತಮ್ಮ ಎಲ್ಲಾ ಪಿತೃಗಳಿಗೆ ಒಟ್ಟಾಗಿ ತರ್ಪಣ ಹಾಗೂ ಶ್ರಾದ್ಧ ಕಾರ್ಯಗಳನ್ನು ನೆರವೇರಿಸುತ್ತಾರೆ. …
Read More »ರೈಲಿನಲ್ಲಿ ʻನನ್ನ ಸುತ್ತಲೂ ಪುರುಷರೇ ಇದ್ದಾರೆʼ ಎಂದು ಕೊನೆಯ ಮೆಸೇಜ್ ಕಳಿಸಿದ್ದ ಅಸ್ಸಾಂ ಡ್ಯಾನ್ಸರ್ ಶವವಾಗಿ ಪತ್ತೆ
ಅಮರಾವತಿ: ರೈಲಿನಲ್ಲಿ ‘ನನ್ನ ಸುತ್ತಲೂ ಪುರುಷರೇ ಇದ್ದಾರೆ’ ಎಂದು ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಕೊನೆಯ ಮೆಸೇಜ್ ಕಳಿಸಿದ್ದ ಅಸ್ಸಾಂನ ಡ್ಯಾನ್ಸರ್ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಅಸ್ಸಾಂನ ಕಾಮರೂಪ್ ಜಿಲ್ಲೆಯ 20 ವರ್ಷದ ಯುವತಿ ವಿಶಾಖಪಟ್ಟಣದಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಕಾರ್ಯಕ್ರಮ ಮುಗಿಸಿ, ಅ.10 ರಂದು ಗುವಾಹಟಿಯಲ್ಲಿ ಬ್ಯಾಂಕ್ ಪರೀಕ್ಷೆ ಇದ್ದಿದ್ದರಿಂದ ಮನೆಗೆ ಮರಳಲು ನಿರ್ಧರಿಸಿದ್ದಳು. ‘ದಿಬ್ರುಗಢ್ ವಿವೇಕ್ ಎಕ್ಸ್‌ಪ್ರೆಸ್’ ರೈಲಿನಲ್ಲಿ ವಾಪಸ್ ಆಗುವಾಗ ನಾಪತ್ತೆಯಾಗಿದ್ದಳು. ಆಕೆಯ ಶವ …
Read More »ಅಕ್ರಮವಾಗಿ ಸಂಗ್ರಹಿಸಿದ್ದ 150 ನಾಡಬಾಂಬ್, ಬಂದೂಕು ವಶ – 35 ವರ್ಷದ ವ್ಯಕ್ತಿಯ ಬಂಧನ
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 150ಕ್ಕೂ ಹೆಚ್ಚು ನಾಡಬಾಂಬ್‌ಗಳು ಹಾಗೂ ನಾಡಬಂದೂಕೊಂದನ್ನ ಜಪ್ತಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 35 ವರ್ಷದ ನರಸಿಂಹಪ್ಪ ಎಂಬ ವ್ಯಕ್ತಿಯನ್ನ ಬಟ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ ಖಚಿತ ಮಾಹಿತಿ ಆಧರಿಸಿ ಬಟ್ಲಹಳ್ಳಿ ಪೊಲೀಸರು ದಾಳಿ ನಡೆಸಿದ್ದು, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 150 ನಾಡಬಾಂಬ್‌ಗಳು ಹಾಗೂ ಒಂದು ನಾಡಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯು ಇಷ್ಟೊಂದು …
Read More »
Laxmi News 24×7