Breaking News

Daily Archives: ಅಕ್ಟೋಬರ್ 17, 2026

ಗಂಗಾರತಿ ಮಾದರಿ ಕಾವೇರಿ ಮಾತೆಗೆ ಆರತಿ; ಪೂಜೆ ನೆರವೇರಿಸಿದ ಸಿಎಂ ಡಿಕೆಶಿ

ಮಂಡ್ಯ: ವಾರಣಾಸಿಯ ಗಂಗಾರತಿಯ ಮಾದರಿಯಲ್ಲೇ ಕರ್ನಾಟಕದಲ್ಲೂ ಕಾವೇರಿ ನದಿಗೆ ಪೂಜೆ ಸಲ್ಲಿಸುವ ಮಹತ್ವಾಕಾಂಕ್ಷೆಯ ಕಾವೇರಿ ಆರತಿ ಕಾರ್ಯಕ್ರಮದ ಎರಡನೇ ವರ್ಷದ ಸಂಭ್ರಮಕ್ಕೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಕೆಆರ್‌ಎಸ್‌ಗೆ ಆಗಮಿಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರು ಆರತಿ ಮಾಡುವ ಮೂಲಕ ಕಾವೇರಿ ಆರತಿಗೆ ಚಾಲನೆ ನೀಡಿದರು. ಡಿಕೆಶಿ ಪತ್ನಿ ಉಷಾ ಅವರು ಕೂಡ ಕಾವೇರಿ ಆರತಿಯಲ್ಲಿ ಭಾಗವಹಿಸಿದ್ದರು. ಸುತ್ತೂರು ಶ್ರೀಗಳುವ, ನಿಶ್ಚಲಾನಂದನಾಥ ಸ್ವಾಮಿ, ಚುಂಚನಗಿರಿ ಮೈಸೂರು ಶಾಖ ಮಠದ ಸೋಮನಾಥ ಸ್ವಾಮೀಜಿ …

Read More »

ಕ್ಷೇತ್ರ ಪುನರ್‌ವಿಂಗಡನೆ ಮಸೂದೆ ಮಂಡನೆಗೆ ಮುನ್ನ ಸರ್ವಪಕ್ಷ ಸಭೆ ನಡೆಸಿ – ಮೋದಿಗೆ 4ನೇ ಬಾರಿಗೆ ಖರ್ಗೆ ಪತ್ರ

ನವದೆಹಲಿ: ಕ್ಷೇತ್ರ ಪುನರ್‌ವಿಂಗಡನೆ ಕುರಿತಾದ ಹೊಸ ಪ್ರಸ್ತಾಪಗಳನ್ನು ಅಂತಿಮಗೊಳಿಸಿ ಸಂಸತ್ತಿನಲ್ಲಿ ಮಂಡಿಸುವ ಮುನ್ನ ಸರ್ವಪಕ್ಷ ಸಭೆ ಕರೆಯುವಂತೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಲ್ಕನೇ ಬಾರಿಗೆ ಪತ್ರ ಬರೆದಿದ್ದಾರೆ. ಶುಕ್ರವಾರ ಪ್ರಧಾನಿಗೆ ಕಳುಹಿಸಿರುವ ಸುದೀರ್ಘ ಪತ್ರದಲ್ಲಿ, ಮುಂಗಾರು ಅಧಿವೇಶನ ಮುಗಿದು ತಿಂಗಳುಗಳೇ ಕಳೆದರೂ ಸಂಸತ್ತನ್ನು ಸಾಂವಿಧಾನಿಕವಾಗಿ ಸಂಪೂರ್ಣ ಮುಕ್ತಾಯಗೊಳಿಸದೆ ವಿಳಂಬ ಮಾಡುತ್ತಿರುವ ಬಗ್ಗೆ ಅವರು …

Read More »

ಕೆಂಪೇಗೌಡ ಏರ್‌ಪೋರ್ಟ್‌ನಲ್ಲೂ ಭಿಕ್ಷಾಟನೆ ಕಾಟ; ಇಬ್ಬರ ಬಂಧನ

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭಿಕ್ಷಾಟನೆ ಕಾಟ ಹೆಚ್ಚಾಗಿದೆ. ಏರ್‌ಪೋರ್ಟ್‌ನಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಇಬ್ಬರನ್ನು ಏರ್‌ಪೋರ್ಟ್‌ ಪೊಲೀಸರು ಬಂಧಿಸಿದ್ದಾರೆ. ಎರಡು ದಿನದಲ್ಲಿ ಇಬ್ಬರು ಅರೆಸ್ಟ್‌ ಮಾಡಲಾಗಿದೆ. ಒಳಬರುವ ಪ್ರಯಾಣಿಕರಿಂದ ಹಣ ಕೇಳುತ್ತಿದ್ದ ಪ್ರತೀಕ್ ಭಾಟಿಯಾ ಎಂಬ ವ್ಯಕ್ತಿ ಬಂಧನವಾಗಿದೆ. ಈ ಹಿಂದೆಯೂ ಪ್ರತೀಕ್ ಭಾಟಿಯಾ ಟರ್ಮಿನಲ್ 2ರಲ್ಲೂ ಇದೇ ರೀತಿ ಮಾಡಿ ಬಂಧನವಾಗಿದ್ದ. ಬಳಿಕ ಮತ್ತೆ ಅದೇ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ. ಅಕ್ಟೋಬರ್ 15 ರಂದು ಏರ್ಪೋಟ್ ಲ್ಯಾಂಡ್‌ಸೈಡ್ ಭದ್ರತಾ …

Read More »

ಬಿಜೆಪಿ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ನವದೆಹಲಿ: ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಶುಕ್ರವಾರ ತಡರಾತ್ರಿ ಸಮಸ್ಯೆ ಕಾಣಿಸಿಕೊಂಡಿದ್ದು, ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆ ಸೋಂಕು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನ ರಾತ್ರಿ ಸುಮಾರು 7.30ಕ್ಕೆ ಆಸ್ಪತ್ರೆಗೆ ಕರೆತರಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಕಳೆದ ಮೇ ತಿಂಗಳಲ್ಲಿಯೂ ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣದಿಂದ ಅಡ್ವಾಣಿ ಅವರು ಇದೇ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳ …

Read More »

3 ಲಕ್ಷ ಲಂಚ ಪಡೆಯುವಾಗ ʻಲೋಕಾʼ ದಾಳಿ – ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ

ರಾಯಚೂರು: ಭೂ ಪರಿವರ್ತನೆಗೆ 3.5 ಲಕ್ಷ ರೂ. ಲಂಚ  ಪಡೆಯುತ್ತಿದ್ದ ಮಾನ್ವಿ ನಗರ ಯೋಜನಾ ಪ್ರಾಧಿಕಾರ ಸಹಾಯಕ ನಿರ್ದೇಶಕ ಕಚೇರಿಯ ಪ್ರಭಾರ ನಗರ ಯೋಜನಾ ಸದಸ್ಯ ಕಾರ್ಯದರ್ಶಿಯನ್ನು ಲೋಕಾಯುಕ್ತ  ಪೊಲೀಸರು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಯಾದಗಿರಿ  ಹಾಗೂ ಮಾನ್ವಿ ಎರಡು ಕಡೆ ಶರಣಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಎನ್‌ಎ ಭೂಮಿಯನ್ನ ಕಮರ್ಷಿಯಲ್ ಭೂಮಿಗೆ ಬದಲಾವಣೆ ಮಾಡಲು 3.5 ಲಕ್ಷ ರೂ. ಲಂಚಕ್ಕೆ ಅವರು ಬೇಡಿಕೆ ಇಟ್ಟಿದ್ದರು. ಲೇಔಟ್‌ನ ಕೆಲ ಭಾಗವನ್ನ ಕಮರ್ಷಿಯಲ್ ಮಾಡಲು …

Read More »

ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಎಸ್‌ಐಟಿ ತನಿಖೆಯಾಗಲಿ: ಪ್ರಹ್ಲಾದ್ ಜೋಶಿ ಆಗ್ರಹ

ಗದಗ: ಸ್ಟಿಂಗ್ ಆಪರೇಷನ್ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾದರೆ ಎಸ್‌ಐಟಿ ತನಿಖೆಯಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ  ಆಗ್ರಹಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಅಭಿವೃದ್ಧಿ ಭಾಗ್ಯಕ್ಕಿಂತ ಡ್ರಾಮಾ ಭಾಗ್ಯವೇ ಹೆಚ್ಚಾಗಿದೆ. ಎಲ್ಲವನ್ನೂ ಮರೆಮಾಚಲು ಸ್ಟಿಂಗ್ ಆಪರೇಷನ್ ವಿಚಾರ ಮುನ್ನೆಲೆಗೆ ಬಂದಿದೆ ಎಂದು ಟೀಕಿಸಿದರು. ಯಾರು ಶೂಟಿಂಗ್ ಮಾಡಿಸಿದರು, ಯಾರು ಸ್ಟಿಂಗ್ ಆಪರೇಷನ್ ನಡೆಸಿದರು ಎಂಬ ಚರ್ಚೆಗಿಂತ ಪ್ರಕರಣದ ಸತ್ಯ ಹೊರಬರುವುದು ಮುಖ್ಯ …

Read More »

ಪಿಜಿಸಿಇಟಿ ಫಲಿತಾಂಶ ಪ್ರಕಟ, ಶುಲ್ಕ ಕಟ್ಟಲು ಅ.19 ಕೊನೆ ದಿನ: ಕೆಇಎ

ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್ ಮತ್ತು ಎಂ.ಆರ್ಕ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ಮಹತ್ವದ ಮಾಹಿತಿ ನೀಡಿದೆ. ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಸೀಟು ಪಡೆದ ಅಭ್ಯರ್ಥಿಗಳು ಅಕ್ಟೋಬರ್ 19ರೊಳಗೆ ಶುಲ್ಕ ಪಾವತಿಸಬೇಕು. ಅಕ್ಟೋಬರ್ 23ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ. ಪಿಬಿ ಬಿಎಸ್ಸಿ ನರ್ಸಿಂಗ್ ಪ್ರವೇಶಕ್ಕೆ ಆಯ್ಕೆ ದಾಖಲಿಸಲು ಅವಕಾಶ ಪಿಬಿ …

Read More »

ರಾಜ್ಯಕ್ಕೆ 2ನೇ ಮಹಿಳಾ ರಾಜ್ಯಪಾಲರ ನೇಮಕ – ಹೊಸ ಉತ್ಸಾಹದೊಂದಿಗೆ ಒಟ್ಟಾಗಿ ಕೆಲಸ ಮಾಡೋಣ: ಸಿಎಂ

ಬೆಂಗಳೂರು: ಕರ್ನಾಟಕ ಎರಡನೇ ಮಹಿಳಾ ರಾಜ್ಯಪಾಲರನ್ನು ಪಡೆದಿದ್ದು ಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನವಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ನಡೆದ ನೂತನ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರ ಸ್ವಾಗತ ಹಾಗೂ ನಿಕಟಪೂರ್ವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು. “ಈ ಮೊದಲು ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರಾಗಿದ್ದ ರಮಾದೇವಿಯವರೊಂದಿಗೆ …

Read More »

ಹಾವು ಕಚ್ಚಿ ಎರಡು ವರ್ಷದ ಮಗು ದುರ್ಮರಣ

ಶಿವಮೊಗ್ಗ: ಮನೆಯ ಬಳಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಹಾವು ಕಚ್ಚಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಾಗರ  ತಾಲೂಕಿನ ಕಲಸಿಪೇಟೆ ಗ್ರಾಮದಲ್ಲಿ ನಡೆದಿದೆ. ಯುನೈ (2) ಹಾವು ಕಚ್ಚಿ ಮೃತಪಟ್ಟ ಬಾಲಕ. ನಾಡಕಲಸಿ ಗ್ರಾ.ಪಂ ವ್ಯಾಪ್ತಿಯ ಕಲಸಿಪೇಟೆಯ ನಿವಾಸಿಗಳಾದ ಅನಿಲ್ ಹಾಗೂ ರೂಪ ದಂಪತಿಯ ಪುತ್ರ ಯುನೈ ಮನೆಯ ಬಳಿ ಆಟವಾಡುತ್ತಿದ್ದ. ಈ ವೇಳೆ ಮಗುವಿಗೆ ಹಾವು ಕಚ್ಚಿದೆ. ಇದನ್ನ ಗಮನಿಸಿ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಗು …

Read More »

ನೆಲಮಂಗಲ ಹೆದ್ದಾರಿಯಲ್ಲಿ ಹಿಟ್‌ & ರನ್‌ಗೆ ಕೇರಳದ ಯುವತಿ ಬಲಿ

ಬೆಂಗಳೂರು: ಸ್ನೇಹಿತನ ಜೊತೆ ಟ್ರಕ್ಕಿಂಗ್‌ಗೆ ಹೋಗಿ ವಾಪಸ್‌ ಆಗುತ್ತಿದ್ದ ಯುವತಿಯೊಬ್ಬಳು ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ವೀರನಂಜಿಪುರ ಬಾರೆ ಬಳಿ ನಡೆದಿದೆ. ಮೃತ ಯುವತಿಯನ್ನು 23 ವರ್ಷದ ಅಲೀನಾ ಎಂದು ಗುರುತಿಸಲಾಗಿದೆ. ಅಲೀನಾ ತನ್ನ ಸ್ನೇಹಿತ ಆಲ್ಬಿನ್‌ ಜೊತೆ ಬೈಕ್‌ನಲ್ಲಿ ತುಮಕೂರಿನ ದೇವರಾಯನದುರ್ಗ ಬೆಟ್ಟಕ್ಕೆ ಟ್ರಕ್ಕಿಂಗ್‌ಗೆ ಹೋಗಿದ್ದರು. ಅಲ್ಲಿಂದ ವಾಪಸ್‌ ಬೆಂಗಳೂರಿಗೆ ಬರುತ್ತಿದ್ದಾಗ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. …

Read More »