Breaking News

ಸ್ಮಶಾನದಿಂದ ಮೃತದೇಹ ತೆಗೆದು ಖಾಸಗಿ ಮೆಡಿಕಲ್ ಕಾಲೇಜಿಗೆ ಮಾರಾಟ – ಮೂವರು ಆರೋಪಿಗಳು ವಶಕ್ಕೆ

Spread the love

ರಾಯಚೂರು: ಮಂತ್ರಾಲಯ ರಸ್ತೆ ಬಳಿಯ ಸ್ಮಶಾನದಿಂದ ಶವ ಮಾರಾಟ ದಂಧೆ ಬೆಳಕಿಗೆ ಬಂದಿದೆ. ಸ್ಮಶಾನದಿಂದ ಮೃತದೇಹಗಳನ್ನ ಹೊರತೆಗೆದು ಖಾಸಗಿ ಮೆಡಿಕಲ್ ಕಾಲೇಜಿಗೆ ಮಾರಾಟ ಮಾಡ್ತಿದ್ದ ಮೂವರು ಆರೋಪಿಗಳನ್ನು ರಾಯಚೂರಿನ  ನೇತಾಜಿ ನಗರ ಠಾಣೆ ಪೊಲೀಸರು ವಶಕ್ಕೆಪಡೆದಿದ್ದಾರೆ.

ಮೃತದೇಹ ಪಡೆಯುತ್ತಿದ್ದ ವೇಳೆಯೇ ತಳವಾರ ಈರೇಶ್, ರಾಜು, ಅಪ್ಸರ್ ಎನ್ನುವವರು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. 1 ತಿಂಗಳು, 2 ತಿಂಗಳ ಹಿಂದೆ ಹೂತು ಹಾಕಿರುವ ಮೃತ ದೇಹಗಳನ್ನ ಹೊರತೆಗೆದು, ದೇಹದ ಭಾಗಗಳನ್ನ ಇವರು ಮೆಡಿಕಲ್ ಕಾಲೇಜ್‌ಗೆ  300, 500, 1,000 ರೂಪಾಯಿಗೆ ಮಾರಾಟ ಮಾಡ್ತಿದ್ದರು ಎಂದು ತಿಳಿದುಬಂದಿದೆ.

ನಾವು ಬೇಡ ಅಂದ್ರೂ ಮೃತದೇಹಗಳನ್ನು ತರುತ್ತಿದ್ದರು. ಎಲ್ಲಿಂದ ತರುತ್ತಿದ್ದರು ನನಗೆ ಗೊತ್ತಿಲ್ಲ. ಮೆಡಿಕಲ್ ವಿದ್ಯಾರ್ಥಿಗಳಿಗೆ  ಕೊಡುತ್ತಿದ್ದೇವು 500, 300 ರೂಪಾಯಿ ಕೊಡತ್ತಾ ಇದ್ದೇವು. ಅವರೇ ತಂದು ಕೊಡುತ್ತಿದ್ದರು ಅಂತ ಮೆಡಿಕಲ್ ಕಾಲೇಜ್ ಸಿಬ್ಬಂದಿ ಅಪ್ಸರ್ ಹೇಳಿದ್ರು.

ಒಣಗಿದ ಮೂಳೆಗಳು, ಕೈ-ಕಾಲುಗಳನ್ನು ತಂದು ಕೊಡುತ್ತಿದ್ದರು. ಅವರಿಗೆ ನಾವು 500 ಕೊಡತ್ತಾ ಇದ್ದೇವು ಅಂತ ಕಾಲೇಜ್‌ನ ಅಟೆಂಡರ್ ರಾಜು ಹೇಳಿದ್ದಾರೆ. ಈ ಮಧ್ಯೆ, ಇದು ಮಾರುತಿ ಬಡಾವಣೆಯ ಸ್ಮಶಾನದ ಶವಗಳು. ಈಗ ನಾವು ವಿಡಿಯೋ ಮಾಡಿ ಕೊಟ್ಟಿದ್ದೇವೆ ಅಂತ ಸ್ಥಳೀಯರ ಬಸವರಾಜ್ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಉಡುಪಿ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ

Spread the loveಉಡುಪಿ: ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ ಅವರಿಂದು (ಅ.24) ಕುಟುಂಬ ಸಮೇತರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ