Breaking News

Monthly Archives: ಸೆಪ್ಟೆಂಬರ್ 2026

ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ – 11 ಕಾರ್ಮಿಕರು ಸಾವು, ಹಲವರು ಗಂಭೀರ

ಲಕ್ನೋ: ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದಾಗಿ 11 ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಕೌಶಂಬಿ ಜಿಲ್ಲಾಧಾಕಾರಿ ಅಮಿತ್ ಕುಮಾರ್ ಪಾಲ್ ಅವರು ಮಾಹಿತಿ ನೀಡಿದ್ದಾರೆ. ಸ್ಫೋಟದತೀವ್ರತೆಗೆ ಇಡೀ ಕಾರ್ಖಾನೆ ಸಂಪೂರ್ಣವಾಗಿ ನೆಲಸಮವಾಗಿದೆ. ಪರಿಣಾಮ ಹನ್ನೊಂದು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಸ್ಥಳಕ್ಕೆ ರಕ್ಷಣಾ ತಂಡಗಳು ದೌಡಾಯಿಸಿದ್ದು, ಅವಶೇಷಗಳಡಿಯಿಂದ ಶವಗಳನ್ನು …

Read More »

ಮಹಿಳೆಯರು ಮನೆಯಲ್ಲೇ ಇರಬೇಕು, ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು: ಧರ್ಮಗುರು ಕಾಂತಪುರಂ ವಿವಾದಾತ್ಮಕ ಹೇಳಿಕೆ

ತಿರುವನಂತಪುರಂ: ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಮುಖ ಇಸ್ಲಾಮಿಕ್ ವಿದ್ವಾಂಸ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್  ಹೇಳಿಕೆ ನೀಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ಕೊಚ್ಚಿಯಲ್ಲಿ ನಡೆದ ಇಸ್ಲಾಮಿಕ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪವಿತ್ರ ಕುರಾನ್ ಪ್ರಕಾರ ಮಹಿಳೆಯರು ಮನೆಗಳಲ್ಲೇ ಇರಬೇಕು. ಮಹಿಳೆಯರ ಘನತೆಯನ್ನು ಗೌರವಿಸಲು ಮತ್ತು ರಕ್ಷಿಸಲು ಇಸ್ಲಾಂನಲ್ಲಿ ಪರ್ದಾ ಪದ್ಧತಿಯನ್ನು ಸೂಚಿಸಲಾಗಿದೆ. ಮಹಿಳೆಯರನ್ನು ಸಾರ್ವಜನಿಕ ಕ್ಷೇತ್ರಕ್ಕೆ ತರುವುದು ಭಾರೀ ವಿನಾಶಕ್ಕೆ ಕಾರಣವಾಗುತ್ತದೆ …

Read More »

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ 16ರ ಬಾಲಕಿ ಮೇಲೆ ಗ್ಯಾಂಗ್ ರೇಪ್ ಆರೋಪ – ಡ್ರೈವರ್, ಕಂಡಕ್ಟರ್ ಬಂಧನ

ನವದೆಹಲಿ: ಉತ್ತರ ಪ್ರದೇಶದ 16 ವರ್ಷದ ಬಾಲಕಿಯ ಮೇಲೆ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಸ್ ಚಾಲಕ  ಹಾಗೂ ಕಂಡಕ್ಟರ್‌ರನ್ನು  ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬಾಲಕಿಯನ್ನು ಸುಮಾರು 47 ಕಿಲೋಮೀಟರ್ ದೂರ ಕರೆದೊಯ್ದು ಬಳಿಕ ಕಾಶ್ಮೀರಿ ಗೇಟ್ ಬಸ್ ಟರ್ಮಿನಲ್ ಸಮೀಪದ ರಿಂಗ್ ರೋಡ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಆಗಸ್ಟ್ 4ರ ರಾತ್ರಿ ಕಾಶ್ಮೀರಿ ಗೇಟ್ …

Read More »

ಬೆಂಗ್ಳೂರು ಏರ್‌ಪೋರ್ಟ್‌ ರಸ್ತೆಯಲ್ಲಿ ಸರಣಿ ಅಪಘಾತ – ತಪ್ಪಿದ ಭಾರೀ ಅನಾಹುತ

ಬೆಂಗಳೂರು: ನಗರದ ಏರ್‌ಪೋರ್ಟ್‌ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್‌ ಭಾರೀ ಅನಾಹುತವೊಂದು ತಪ್ಪಿದೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಏರ್ಪೋರ್ಟ್ ರಸ್ತೆಯ ಫ್ಲೈ ಓವರ್ ಮೇಲೆ ಅಪಘಾತ (Accident) ಸಂಭವಿಸಿದ್ದು, 5 ವಾಹನಗಳು ಜಖಂಗೊಂಡಿವೆ. ಚಲಿಸುತ್ತಿದ್ದ ವೇಳೆ ಮುಂದಿನ ವಾಹನ ಇದ್ದಕ್ಕಿದ್ದಂತೆ ಬ್ರೇಕ್‌ ಹಾಕಿದ್ದರಿಂದ ಹಿಂದೆ ಬರುತ್ತಿದ್ದ ವಾಹನಗಳು ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದಿವೆ. ಪರಿಣಾಮ 1 ಟಿಪ್ಪರ್‌, 4 ಕಾರು ಹಾಗೂ 1 …

Read More »

ಬಳ್ಳಾರಿ ಚಲೋ’ಗೆ ಇಂದು ಚಾಲನೆ; ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಪಾದಯಾತ್ರೆ

ರಾಯಚೂರು: ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯಲಿರುವ ʼಬಿಜೆಪಿ ಬಳ್ಳಾರಿ ಚಲೋʼ ಪಾದಯಾತ್ರೆಗೆ ಇಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಚಾಲನೆ ಸಿಗಲಿದೆ. ಲಿಂಗಸುಗೂರಿನಲ್ಲಿ ಇಂದು ಬಹಿರಂಗ ಸಮಾವೇಶ ಮೂಲಕ ಹೋರಾಟ ಆರಂಭವಾಗಲಿದೆ. ಲಿಂಗಸುಗೂರಿನ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಬೆಳಗ್ಗೆ 10:30ಕ್ಕೆ ಬಹಿರಂಗ ಸಮಾವೇಶ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಪಾದಯಾತ್ರೆಗೂ ಮುನ್ನ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಜಿಲ್ಲೆಯ …

Read More »

ಗ್ಯಾರಂಟಿ ಹೊರೆ ಇಳಿಸಿದ ಜನ: 3 ಲಕ್ಷಕ್ಕೂ ಅಧಿಕ ಮಂದಿಯಿಂದ ‘ಗೃಹಜ್ಯೋತಿ’ ತ್ಯಾಗ!

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕ ಹೊರೆ ಅನುಭವಿಸುತ್ತಿದ್ದ ರಾಜ್ಯ ಸರ್ಕಾರಕ್ಕೆ ಸ್ವಲ್ಪ ರಿಲೀಫ್‌ ಸಿಕ್ಕಿದೆ. ಸರ್ಕಾರ ನೀಡಿದ ಗ್ಯಾರಂಟಿ ಗೀವ್ ಅಪ್ (ಯೋಜನೆ ತ್ಯಾಗ) ಕರೆಗೆ ರಾಜ್ಯದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತರಾಗಿ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯವನ್ನು ಬಿಟ್ಟುಕೊಟ್ಟಿದ್ದಾರೆ. ಗೃಹಜ್ಯೋತಿ ರೀ-ಸರ್ವೆ (ಮರು ಪರಿಶೀಲನೆ) ವೇಳೆ ಯೋಜನೆಯ ಲಾಭ ತಮಗೆ ಬೇಡವೆಂದು ಸಾರ್ವಜನಿಕರೇ ಮುಂದೆ ಬಂದು ತ್ಯಾಗ …

Read More »

ಒಂದೇ ದಿನ 830 ಕೋಳಿಗಳ ನಿಗೂಢ ಸಾವು – ದುಷ್ಕರ್ಮಿಗಳ ಕೈವಾಡದ ಶಂಕೆ

ದಾವಣಗೆರೆ: ಒಂದೇ ದಿನ ಇದ್ದಕ್ಕಿದ್ದಂತೆ 830 ನಾಟಿ ಕೋಳಿಗಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿಯಲ್ಲಿ ನಡೆದಿದೆ. ಪ್ರಕಾಶ್ ಹಾಗೂ ಅರ್ಜುನ್ ಎಂಬ ರೈತರಿಗೆ ಸೇರಿದ ನಾಟಿ ಕೋಳಿ ಸಾವನ್ನಪ್ಪಿವೆ. ಕೋಳಿಗಳಿಗೆ ಯಾವುದೇ ರೋಗ ಕೂಡಾ ಇರಲಿಲ್ಲ. ಜೊತೆಗೆ ಆಹಾರ ನೀಡುವಲ್ಲಿ ವ್ಯತ್ಯಾಸ ಆಗಿಲ್ಲ. ಬೆಳಗಾಗುವಷ್ಟರಲ್ಲಿ ನೂರಾರು ಕೋಳಿಗಳ ಸಾವನ್ನಪ್ಪಿದ್ದು, ದುಷ್ಕರ್ಮಿಗಳ ಕೈವಾಡದ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶು ವೈದ್ಯಾಧಿಕಾರಿಗಳು …

Read More »

ಕಾಫಿ ಎಸ್ಟೇಟ್‌ನಲ್ಲಿ ಗುಂಡೇಟಿನಿಂದ ರೈತ ಸಾವು – ಮಿಸ್‌ಫೈರ್‌ ಶಂಕೆ

ಹಾಸನ: ಕಾಫಿ ಎಸ್ಟೇಟ್‌ನಲ್ಲಿ ಗುಂಡೇಟಿನಿಂದ ರೈತ ಸಾವನ್ನಪ್ಪಿದ ಘಟನೆ ಬೇಲೂರು ತಾಲೂಕಿನ ಬಂದಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೇಶವಶೆಟ್ಟಿ (61) ಗುಂಡೇಟಿನಿಂದ ಸಾವನ್ನಪ್ಪಿದ ಕಾಫಿ ಬೆಳೆಗಾರ. ಭಾನುವಾರ (ಆ.30) ಸಂಜೆ ಬಂದೂಕು ಹಿಡಿದು ಅವರು ಕಾಫಿ ತೋಟಕ್ಕೆ ತೆರಳಿದ್ದರು. ಈ ವೇಳೆ ಕೈಯಲ್ಲಿದ್ದ ಬಂದೂಕಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಅವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದಿಂದ 300 ಮೀಟರ್ ದೂರದಲ್ಲಿ ಅವರ ಶವ ಪತ್ತೆಯಾಗಿದ್ದು, ಗುಂಡು ಹಾರಿದ ನಂತರ ಸ್ವಲ್ಪ …

Read More »

ಮತಕ್ಕಾಗಿ ಬಗೆಬಗೆಯ ನಾಟಕ – ರಾಯರೆಡ್ಡಿ ವಜಾಕ್ಕೆ ಭರತ್‌ ಶೆಟ್ಟಿ ಆಗ್ರಹ

ಮಂಗಳೂರು: ಇಸ್ಲಾಂ ಧರ್ಮ ಶ್ರೇಷ್ಠ ಮತ್ತು ಮಠ-ಮಂದಿರಗಳಿಗೆ ಹೋಗಬಾರದು ಎಂಬ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ಮಂಗಳೂರು ನಗರ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಹೊಟ್ಟೆಪಾಡಿಗಾಗಿ ಬಗೆಬಗೆಯ ವೇಷ ಎಂಬ ಮಾತು ಕಾಂಗ್ರೆಸ್ ನಾಯಕರಿಗೆ  ಸರಿಯಾಗಿ ಹೊಂದುತ್ತದೆ. ಕೇವಲ ಮತಕ್ಕಾಗಿ ಇವರು ಏನೆಲ್ಲಾ ನಾಟಕ …

Read More »

ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಶಿವಮೊಗ್ಗ: ಓದುವಂತೆ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣಾದ ಘಟನೆ ಶಿವಮೊಗ್ಗದಲ್ಲಿ  ನಡೆದಿದೆ. ಸೃಷ್ಟಿ (14) ನೇಣಿಗೆ ಶರಣಾದ ವಿದ್ಯಾರ್ಥಿನಿ. ಈಕೆ ನಗರದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದಳು. ಪೋಷಕರು ಚೆನ್ನಾಗಿ ಓದುವಂತೆ ಅವಳಿಗೆ ಬುದ್ಧಿವಾದ ಹೇಳಿದ್ದರು. ಇದರಿಂದ ಮನನೊಂದಿದ್ದ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೃಷ್ಟಿಯನ್ನ ಮನೆಯಲ್ಲಿಯೇ ಬಿಟ್ಟು ತಂದೆ-ತಾಯಿ ಇಬ್ಬರು ದೇವಸ್ಥಾನಕ್ಕೆ ತೆರಳಿದ್ದರು. ಈ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. …

Read More »