Breaking News

Daily Archives: ಅಕ್ಟೋಬರ್ 30, 2026

ಬ್ಯಾಲೆಟ್ ಪೇಪರ್‌ನಲ್ಲೇ ಕಾಂಗ್ರೆಸ್ ಸೋತಿದೆ, ಪತನದ ದಿನಗಳು ಹತ್ತಿರ ಬರ್ತಿದೆ: ನಿಖಿಲ್ ಕುಮಾರಸ್ವಾಮಿ

ರಾಮನಗರ: ಕಾಂಗ್ರೆಸ್  ಇವಿಎಂ ಮೇಲೆ ಅನುಮಾನ ಪಟ್ಟು, ಬ್ಯಾಲೆಟ್ ಪೇಪರ್  ಚುನಾವಣೆ ಬೇಕು ಅಂತಿದ್ದರು. ಈಗ ಬ್ಯಾಲೆಟ್ ಪೇಪರ್‌ನಲ್ಲೇ ಕಾಂಗ್ರೆಸ್ ಸೋತಿದೆ ಎಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ  ಹೇಳಿದ್ದಾರೆ. ಪರಿಷತ್ ಚುನಾವಣೆ ಫಲಿತಾಂಶ ವಿಚಾರವಾಗಿ ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಲ್ಕು ರಾಜ್ಯಗಳಲ್ಲಿ ನಡೆದ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆದ್ದಿದ್ದಾರೆ. ನಮ್ಮ ರಾಜ್ಯದ ನಾಲ್ಕು ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆದ್ದಿದ್ದಾರೆ. ಇದು ಎರಡೂ ಪಕ್ಷಗಳ ಕಾರ್ಯಕರ್ತರ ಶ್ರಮ. …

Read More »

3 ತಿಂಗಳಲ್ಲಿ 17.78 ಲಕ್ಷ ಕೆಜಿ ಪಡಿತರ ವಶಕ್ಕೆ – ಕಳ್ಳ ಸಾಗಣೆ ಮಾಡುತ್ತಿದ್ದ 215 ಜನ ಅರೆಸ್ಟ್

ಬೆಂಗಳೂರು: ಪಡಿತರ ಕಳ್ಳ ಸಾಗಣೆ ವಿರುದ್ಧ ಆಹಾರ, ಸಾರ್ವಜನಿಕ ವಿತರಣೆ ಹಾಗೂ ಗ್ರಾಹಕ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದ್ದು, ಮೂರು ತಿಂಗಳಲ್ಲಿ 17.78 ಲಕ್ಷ ಕೆಜಿ ಪಡಿತರ ಅಕ್ಕಿ, ಕಾಳು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 215 ಜನರನ್ನು ಅರೆಸ್ಟ್ ಮಾಡಿದ್ದಾರೆ. ಸಚಿವ ರಿಜ್ವಾನ್ ಅರ್ಷದ್  ಅವರ ನಿರ್ದೇಶನದ ಮೇರೆಗೆ, ಕಳೆದ ಆಗಸ್ಟ್ 1ರಿಂದ ಪಡಿತರ ಸಾಗಣೆ ವಾಹನಗಳ ನಿರಂತರ ತಪಾಸಣೆ ಹಾಗೂ ಖಾಸಗಿ ಗೋಡೌನ್‌ಗಳ ಪರಿಶೀಲನೆ ನಡೆಸಲಾಗಿದೆ. ಈ ವೇಳೆ 17.78 …

Read More »

SSLC, ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ  ಪಬ್ಲಿಕ್ ಪರೀಕ್ಷೆ-1 ಮತ್ತು ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪರೀಕ್ಷಾ ಮಂಡಳಿ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಪರೀಕ್ಷೆ-1 ಮಾರ್ಚ್ 22 ರಿಂದ ಏಪ್ರಿಲ್ 5ರವರೆಗೆ ಹಾಗೂ ಪರೀಕ್ಷೆ-2 ಮೇ 24 ರಿಂದ ಮೇ 31ರ ವರೆಗೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಂಡಳಿಯ ಈ ವೇಳಾಪಟ್ಟಿ ಮಹತ್ವದ್ದಾಗಿದೆ. ಮಾರ್ಚ್ 22- …

Read More »

ಪಿಜಿಸಿಇಟಿ ಎರಡನೇ ಸುತ್ತಿನ ಕೌನ್ಸೆಲಿಂಗ್‌ಗೆ ಸುಪ್ರೀಂ ಅನುಮತಿ

ನವದೆಹಲಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2026ನೇ ಸಾಲಿನ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (ಪಿಜಿಸಿಇಟಿ) ಮೂಲಕ ನಡೆಯುವ ಪ್ರವೇಶಾತಿ ಪ್ರಕ್ರಿಯೆಯ ಎರಡನೇ ಸುತ್ತಿನ ಕೌನ್ಸೆಲಿಂಗ್ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಅಲೋಕ್ ಅರಾಧೆ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ಈ ಮೂಲಕ ಕರ್ನಾಟಕದಲ್ಲಿ ಎಂಬಿಎ, ಎಂಸಿಎ, ಎಂ.ಇ. ಮತ್ತು ಎಂ.ಟೆಕ್ ಸೇರಿದಂತೆ ವಿವಿಧ ಸ್ನಾತಕೋತ್ತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕಾಯುತ್ತಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ …

Read More »

15 ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ – ಗ್ರಾಪಂ ಕಚೇರಿ ಮುಂದೆ ಬಿಂದಿಗೆ ಹಿಡಿದು ಹೋರಾಟ

ರಾಯಚೂರು: ಜಿಲ್ಲೆಯ ಲಿಂಗಸುಗೂರು  ತಾಲೂಕಿನ ಮಾಕಾಪೂರ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿಲ್ಲದೆ ಜನರು ಪರದಾಟ ನಡೆಸಿದ್ದಾರೆ. ಹೀಗಾಗಿ ಕೂಡಲೇ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಹೊನೂರು ಗ್ರಾಮ ಪಂಚಾಯತಿ  ಕಚೇರಿ ಮುಂದೆ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ಮಾಕಾಪೂರ ಗ್ರಾಮದಲ್ಲಿ ಕುಡಿಯುವ ನೀರನ ಸಮಸ್ಯೆ ಹೆಚ್ಚಾದ ಹಿನ್ನೆಲೆ ಟ್ರ‍್ಯಾಕ್ಟರ್‌ನಲ್ಲೇ ಬಿಂದಿಗೆ ತಂದು ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರಿನ ಮೋಟಾರ್ ಕೆಟ್ಟು 15 ದಿನ …

Read More »

ಪ್ರತಿ ಲೀಟರ್‌ ಹಾಲಿನ ದರ 8 ರೂ. ಹೆಚ್ಚಳ – ನ.1 ರಿಂದಲೇ ಪರಿಷ್ಕೃತ ದರ ಜಾರಿ

ಬೆಂಗಳೂರು: ರಾಜ್ಯ ಸರ್ಕಾರ  ಕೊನೆಗೂ ಜನತೆಗೆ ಬೆಲೆ ಏರಿಕೆ ಶಾಕ್‌ ಕೊಟ್ಟಿದೆ. ಪ್ರತಿ ಲೀಟರ್‌ ಹಾಲಿನ ದರ 8 ರೂ. ಹೆಚ್ಚಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಪರಿಷ್ಕೃತ ದರ ನವೆಂಬರ್‌ 1 ರಿಂದಲೇ ಜಾರಿಯಾಗಲಿದೆ ಎಂದು ಸಚಿವ ಕೃಷ್ಣಭೈರೇಗೌಡ  ತಿಳಿಸಿದ್ರು. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಹಾಲು ಒಕ್ಕೂಟಗಳು ಪ್ರತಿ ಲೀಟರ್‌ ಹಾಲಿಗೆ 10 ರೂ. ಏರಿಕೆ  ಮಾಡುವಂತೆ ಒತ್ತಾಯ ಮಾಡಿದ್ದವು. ಸರ್ಕಾರ 8 ರೂ. ಏರಿಕೆ ಮಾಡಿದ್ದು, …

Read More »

2,500 ರೂ. ಬರ ಪರಿಹಾರಕ್ಕೆ 17 ಷರತ್ತು ವಿಧಿಸಿದ ರಾಜ್ಯ ಸರ್ಕಾರ – ಯಾರು ಪರಿಹಾರಕ್ಕೆ ಅರ್ಹರು?

ಬೆಂಗಳೂರು: ರಾಜ್ಯದಲ್ಲಿ 226 ತಾಲ್ಲೂಕುಗಳಲ್ಲಿ ಬರ ಘೋಷಣೆಯಾಗಿದೆ. ಹೀಗಾಗಿ ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ  ಘೋಷಣೆ ಮಾಡಿದ್ದ ತಲಾ 2,500 ರೂ. ಪರಿಹಾರವನ್ನ ಒಂದೂವರೆ ತಿಂಗಳಲ್ಲೇ ವಿತರಣೆ ಮಾಡೋಕೆ ಮುಂದಾಗಿದೆ. ಆದ್ರೆ ಪರಿಹಾರ ಪಡೆದುಕೊಳ್ಳಲು ಸರ್ಕಾರ ರೈತರಿಗೆ (Farmers) 17 ಷರತ್ತುಗಳನ್ನು ವಿಧಿಸಿದೆ. ತಾಲ್ಲೂಕುವಾರು ಬೆಳೆಹಾನಿಗೆ ನಮೂದಾಗಿರುವ ಜಮೀನುಗಳ ರೈತರಿಗೆ ಮಾತ್ರ ಪರಿಹಾರ ನೀಡಲಾಗುವುದು. ಕಡಿಮೆ ಜಮೀನುಳ್ಳ ರೈತರಿಂದ ಪರಿಹಾರ ವಿತರಣೆ ಆರಂಭಿಸಲಾಗುವುದು, ಮೊದಲು ಮಳೆಯಾಶ್ರಿತ, ನಂತರ ನೀರಾವರಿ ಬೆಳೆ, …

Read More »

ಗೃಹಿಣಿ ಅನುಮಾನಾಸ್ಪದ ಸಾವು: ಕೊಲೆ ಆರೋಪ

ತುಮಕೂರು: ಗೃಹಿಣಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಪತಿ ವಿರುದ್ಧವೇ ಪೋಷಕರು ಕೊಲೆ ಆರೋಪ ಮಾಡಿರುವ ಘಟನೆ ನಡೆದಿದೆ ತುಮಕೂರು  ತಾಲೂಕಿನ ಯಲ್ಲಾಪುರದಲ್ಲಿ ನಡೆದಿದೆ. ಮೃತ ಗೃಹಿಣಿಯನ್ನು ಮಾಗಡಿ ತಾಲೂಕಿನ ತಾವರೆಕೆರೆ ಹೊನ್ನಗನಹಟ್ಟಿ ಮೂಲದ ಸುಷ್ಮಿತಾ (24) ಎಂದು ಗುರುತಿಸಲಾಗಿದೆ. ಸುಷ್ಮಿತಾ ಮಂಗಳವಾರ ರಾಮನಗರ ಜಿಲ್ಲೆಯ ಮಾಗಡಿಯಲ್ಲಿರುವ ಚಿಕ್ಕಪ್ಪನ ಮನೆಗೆ ಹೋಗಿದ್ದರು. ನಿನ್ನೆ ಖುಷಿಯಾಗಿ ಗಂಡನ ಮನೆಯಾದ ಯಲ್ಲಾಪುರಕ್ಕೆ ವಾಪಸ್ ಬಂದಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ನಿನ್ನೆ ಸಂಜೆ ಮನೆಯಲ್ಲಿ ಗಲಾಟೆಯಾಗಿದೆ, …

Read More »

5,431 FDA-SDA ಹುದ್ದೆಗಳಿಗೆ ಅರ್ಜಿ ಆಹ್ವಾನ – ನಾಳೆಯಿಂದಲೇ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು: ರಾಜ್ಯ ಸರ್ಕಾರದ ಒಟ್ಟು 33 ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 5,431 ಪ್ರಥಮ ದರ್ಜೆ ಸಹಾಯಕರು ಹಾಗೂ ದ್ವೀತಿಯ ದರ್ಜೆ ಸಹಾಯಕರ  ಹುದ್ದೆಗಳ ನೇಮಕಾತಿಗೆ ಕೆಇಎ ಇಂದು ಅಧಿಸೂಚನೆ ಹೊರಡಿಸಿದೆ. ನಾಳೆಯಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ನವೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ನ.26 ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ. ಉಳಿಕ ಮೂಲ ವೃಂದಕ್ಕೆ ಸಂಬಂಧಿಸಿದಂತೆ 2,163 FDC ಹಾಗೂ 2,070 SDC ಹಾಗೂ‌ ಕಲ್ಯಾಣ …

Read More »

ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬುಗೆ ಸಂಕಷ್ಟ – ಜಾಮೀನು ರಹಿತ ವಾರಂಟ್ ಜಾರಿ

ಬಳ್ಳಾರಿ: ಮಾಜಿ ಸಚಿವ ಶ್ರೀರಾಮುಲು ಸೋದರಳಿಯ ಸುರೇಶ್ ಬಾಬು ಅವರಿಗೆ ಬಿಹಾರದ  ಈಸ್ಟ್ ಚಂಪಾರಣ್ ಕೋರ್ಟ್‌ನಿಂದ ನಾನ್ ಬೇಲೇಬಲ್ ವಾರಂಟ್  ಜಾರಿಯಾಗಿದೆ. ಸುರೇಶ್ ಬಾಬು ಅವರ ಬಂಧನಕ್ಕಾಗಿ ಬಿಹಾರ ಪೊಲೀಸರ ತಂಡ ಬಳ್ಳಾರಿಗೆ ಆಗಮಿಸಿದ್ದು, ಬಳ್ಳಾರಿ ಎಸ್ಪಿ ಅವರ ಸಹಕಾರ ಕೋರಿದೆ. ಈ ಬಗ್ಗೆ ಬಳ್ಳಾರಿ ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಈವರೆಗೂ ಯಾವ ಪ್ರಕರಣ ಸಂಬಂಧ ನಾನ್ ಬೇಲೇಬಲ್ ವಾರಂಟ್ ಜಾರಿಯಾಗಿದೆ …

Read More »