ಬೆಳಗಾವಿ: ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಅಕ್ಟೋಬರ್ 26ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯಲ್ಲಿ ಸಭೆ ನಡೆಸಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಸಕ್ಕರೆ ಕಾರ್ಖಾನೆ ಮಾಲಿಕರ ಸಭೆ ಹಾಗೂ ಮಧ್ಯಾಹ್ನ 3.30ಕ್ಕೆ ಕಬ್ಬು ಬೆಳೆಗಾರರ ಸಭೆ ನಡೆಸಲಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಈ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸೂಕ್ತ ಸ್ಪಂದನೆ ಸಿಗದಿದ್ದರೆ, ಅಕ್ಟೋಬರ್ 27ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ …
Read More »Monthly Archives: ಅಕ್ಟೋಬರ್ 2026
ಬೆಳಗಾವಿಯ ಹೈವೇ ಮೇಲೆ ವಾಹನ ಅಡ್ಡಗಟ್ಟಿ ದರೋಡೆ: ಮೂವರು ಆರೋಪಿಗಳ ಬಂಧನ
ಬೆಳಗಾವಿ: ನಗರದ ಹಿಂಡಲಗಾ ಬ್ರಿಡ್ಜ್ ಸಮೀಪದ ಹೈವೇ ಮೇಲೆ ಬುಲೆರೋ ವಾಹನವನ್ನು ಅಡ್ಡಗಟ್ಟಿ, ಚಾಲಕನ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 15ರಂದು ನಸುಕಿನ ಜಾವ ಸುಮಾರು 2 ಗಂಟೆಗೆ ಈ ಘಟನೆ ನಡೆದಿತ್ತು. ಬೊಲೆರೋ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದ ಆರೋಪಿಗಳು, ಚಾಲಕನಿಗೆ ಹಲ್ಲೆ ನಡೆಸಿ ಆತನ ಬಳಿ ಇದ್ದ ಹಣ ಮತ್ತು ಮೊಬೈಲ್ …
Read More »ಬೆಳಗಾವಿ | ಫುಟ್ಪಾತ್ ತೆರವಿಗೆ ಹೋಗಿದ್ದ ಪಾಲಿಕೆ ಎಂಜಿನಿಯರ್ ಮೇಲೆ ಹಲ್ಲೆ – ಸ್ಥಳದಲ್ಲಿ ಬಿಗುವಿನ ವಾತಾವರಣ
ಬೆಳಗಾವಿ: ಫುಟ್ಪಾತ್ ತೆರವಿಗೆ ಹೋಗಿದ್ದ ಪಾಲಿಕೆ ಎಂಜಿನಿಯರ್ ಮೇಲೆ 40ಕ್ಕೂ ಹೆಚ್ಚು ಜನರ ಗುಂಪು ಹಲ್ಲೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನಗರದ (Belagavi) ನಾಥಪೈ ಸರ್ಕಲ್ ಬಳಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಪಾಲಿಕೆಯ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಅಲ್ಲಿನ ಅಂಗಡಿ ಮಾಲೀಕರು ಜೆಸಿಬಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಜೆಸಿಬಿಯ ಗಾಜು ಒಡೆದು ಹೋಗಿದೆ. ಅಲ್ಲದೇ ಎಂಜಿನಿಯರ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯಿಂದ …
Read More »ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟ – ಮೂವರಿಗೆ ಗಂಭೀರ ಗಾಯ
ಬೆಂಗಳೂರು: ಆರ್.ಆರ್ ನಗರದ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಬ್ಲು, ಲಕ್ಷ್ಮಮ್ಮ ಮತ್ತು ಮತ್ತೋರ್ವ 9 ವರ್ಷದ ಬಾಲಕ ಗಾಯಗೊಂಡ ದುರ್ದೈವಿಗಳು. ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಯ ಛಾವಣಿಗೆ ಹಾಕಿದ್ದ ಸಿಮೆಂಟಿನ ಶೀಟ್ಗಳು ಛಿದ್ರ ಛಿದ್ರವಾಗಿವೆ. ಪೊಲೀಸರು ಗಾಯಾಳುಗಳನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಆರ್.ಆರ್.ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ – 22 ದಿನದಲ್ಲಿ 3.46 ಕೋಟಿ ಸಂಗ್ರಹ
ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಅಕ್ಟೋಬರ್ ತಿಂಗಳಿನ 22 ದಿನದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾ 22 ದಿನದಲ್ಲಿ 3,46,53,864 ರೂ. ಕಾಣಿಕೆ ಸಂಗ್ರಹವಾಗಿದೆ. ಪ್ರತೀ ತಿಂಗಳಿನಂತೆ ಈ ಬಾರಿಯೂ ಭಕ್ತರ ದಂಡು ಮಠಕ್ಕೆ ಹರಿದು ಬಂದಿದ್ದು, ಭಾರೀ ಪ್ರಮಾಣದ ಕಾಣಿಕೆ ಸಂಗ್ರವಾಗಿದೆ. ಗುರುರಾಘವೇದ್ರ ಸ್ವಾಮಿ ಮಠಕ್ಕೆ 22 ದಿನಗಳಲ್ಲೇ 3 ಕೋಟಿ 46 ಲಕ್ಷ 53,864 ರೂ. ಕಾಣಿಕೆ ಹರಿದು ಬಂದಿದ್ದು, ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ …
Read More »ಪ್ರತಿ ಪ್ರಯಾಣಿಕನಿಗೆ 3.5 ರಿಂದ 4.4 ಲಕ್ಷ ರೂ. ಟಿಕೆಟ್ ದರ; ರಾಜವೈಭವದ ಸುವರ್ಣ ರಥ ಮತ್ತೆ ಸಂಚಾರ
ಬೆಂಗಳೂರು: ರಾಜವೈಭವದ ಸುವರ್ಣ ರಥ ಮತ್ತೆ ಸಂಚಾರ ಆರಂಭಿಸಿದೆ. ಪ್ರವಾಸೋದ್ಯಮ ಇಲಾಖೆಯ ಈ ವಿಶೇಷ ರೈಲಿಗೆ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ರೈಲ್ವೆ ಸಚಿವ ವಿ.ಸೋಮಣ್ಣ ಚಾಲನೆ ನೀಡಿದ್ದಾರೆ. ಹೊಸ ರೂಪದ ಗೋಲ್ಡನ್ ಚಾರಿಯೆಟ್ ರೈಲು ಇದಾಗಿದೆ. ಪ್ರತಿ ಪ್ರಯಾಣಿಕರಿಗೆ 3.5 ಲಕ್ಷ ರಿಂದ 4.4 ಲಕ್ಷದವರೆಗೆ ಟಿಕೆಟ್ ದರ ನಿಗದಿಪಡಿಸಲಾಗಿದೆ. ಮೊದಲ ಪ್ರಯಾಣದ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಕರ್ನಾಟಕದ ಹೆಮ್ಮೆಯ ಹಾಗೂ ಪ್ರಮುಖ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ …
Read More »ಜೈಶ್ ಉಗ್ರ ಸಂಘಟನೆ ಜೊತೆ ನಂಟು ಶಂಕೆ, ಮೋದಿ ವಿರುದ್ಧ ಹೇಳಿಕೆ – ಮುಂಬೈ ರ್ಯಾಪಿಡೋ ಚಾಲಕ ಅರೆಸ್ಟ್
ಮುಂಬೈ: ಜೈಶ್ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆ ಹಾಗೂ ಪ್ರಧಾನಿಯ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ಮುಂಬೈನಲ್ಲಿ ರ್ಯಾಪಿಡೋ ಚಾಲಕನನ್ನು ಬಂಧಿಸಲಾಗಿದೆ. ಮುಂಬೈನ ಮಾಹಿಮ್ ನಿವಾಸಿಯಾದ ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ ಎಂಬಾತನನ್ನು, ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ಮಾಹಿಮ್ ಮೆಟ್ರೋ ನಿಲ್ದಾಣದ ಬಳಿ ಪತ್ತೆಹಚ್ಚಿದೆ. ಮುಂಬೈನಲ್ಲಿ ‘ರಾಪಿಡೋ’ ಚಾಲಕನಾಗಿ ಈತ ಕೆಲಸ ಮಾಡುತ್ತಿದ್ದ. ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ‘ಜೈಶ್-ಎ-ಮೊಹಮ್ಮದ್’ ಜೊತೆಗೆ ಶಂಕಿತ …
Read More »ಪುಷ್ಪಾರ್ಚನೆ, ನಂದಿಧ್ವಜ ಪೂಜೆಗೆ ಕಡಿಮೆ ಜನ ಇದಷ್ಟು ಒಳ್ಳೆಯದು: ಯದುವೀರ್
ಮೈಸೂರು: ಅಂಬಾರಿಗೆ ಪುಷ್ಪಾರ್ಚನೆ ಹಾಗೂ ನಂದಿಧ್ವಜ ಪೂಜೆಗೆ ಕಡಿಮೆ ಜನ ಇದಷ್ಟು ಒಳ್ಳೆಯದು ಎಂದು ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಒಡೆಯರ್ ಅವರು ತಿಳಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ದಸರಾ ಶಿಷ್ಟಾಚಾರ ವಿಚಾರವಾಗಿ ಮಾತನಾಡಿದ ಅವರು, ಮೊದಲು ಶಿಷ್ಟಾಚಾರ ಏನು ಎಂಬುದು ಸ್ಪಷ್ಟಪಡಿಸಿ. ಇಲ್ಲಿ ಶಿಷ್ಟಾಚಾರ ಇದೆಯೋ ಇಲ್ಲವೋ ಗೊತ್ತಿಲ್ಲ. ಪುಷ್ಪಾರ್ಚನೆ ಮತ್ತು ನಂದಿ ಧ್ವಜ ಪೂಜೆಗೆ ಕಡಿಮೆ ಜನ ಇದಷ್ಟು ಒಳ್ಳೆಯದು. ಸಿಎಂ ಜೊತೆಗೆ ಒಂದಿಬ್ಬರು ಇದ್ದರೆ ಸಾಕು. …
Read More »KSOU ವಿರುದ್ಧ ಭುಗಿಲೆದ್ದ ಆಕ್ರೋಶ – ABVPಯಿಂದ ಕಚೇರಿಗೆ ಮುತ್ತಿಗೆ ಯತ್ನ
ಶಿವಮೊಗ್ಗ: ನಗರದ ಕೆಎಸ್ಓಯು ಪ್ರಾದೇಶಿಕ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಪರೀಕ್ಷಾ ಅಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೊಬೈಲ್, ಪುಸ್ತಕ ಇಟ್ಟುಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರ ಬೆನ್ನಲ್ಲೇ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಆಲ್ಕೋಳ ಸರ್ಕಲ್ ಸಮೀಪವಿರುವ KSOU ಪ್ರಾದೇಶಿಕ ಕಚೇರಿ ಎದುರು ಎಬಿವಿಪಿ ಪ್ರತಿಭಟನೆ ನಡೆಸುತ್ತಿದೆ. ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ಹೊರಹಾಕಿದ್ದಾರೆ. ಪ್ರಾದೇಶಿಕ ನಿರ್ದೇಶಕರ ವಿರುದ್ಧ ತನಿಖೆಯ ಜೊತೆಗೆ ಕಠಿಣ ಕ್ರಮಕೈಗೊಳ್ಳಬೇಕು. ಶುಲ್ಕ ಪಡೆಯದೇ …
Read More »ಉಡುಪಿಯ ಉದ್ಯಮಿಗಳು, ಗಣ್ಯರಿಗೆ ಜೀವ ಬೆದರಿಕೆ ಹಾಕುತ್ತಿದ್ದ ದುಷ್ಕರ್ಮಿ ಅರೆಸ್ಟ್
ಉಡುಪಿ: ಜಿಲ್ಲೆಯ ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಪು ತಾಲೂಕಿನ ಎರ್ಮಾಳು ಬಡಾ ಗ್ರಾಮದ ಬಟ್ರತೋಟ ಹೌಸ್ನ ಸುರೇಶ್ ಅಮೀನ್ (38) ಬಂಧಿತ ಆರೋಪಿ. ಭೂಗತ ಪಾತಕಿ ಹೇಮಂತ್ ಪೂಜಾರಿಗೆ ಬೆದರಿಕೆಗೆ ಒಳಗಾದ ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳ ಮೊಬೈಲ್ ಸಂಖ್ಯೆಗಳು ಮತ್ತು …
Read More »
Laxmi News 24×7