Breaking News

Daily Archives: ಜನವರಿ 12, 2021

ಮೂರನೇ ಬಾರಿಗೆ ಕತ್ತಿ ಕೈ ಹಿಡಿದ ಸಿಎಂ ಬಿಎಸ್​ವೈ; ಶಾಸಕ ಉಮೇಶ್ ಕತ್ತಿಗೆ ಮಂತ್ರಿಗಿರಿ ಪಕ್ಕಾ?

ಬೆಂಗಳೂರು; ಸಿಎಂ ಬಿಎಸ್ ಯಡಿಯೂರಪ್ಪ ಸಚಿವ ಸಂಪುಟ ನಾಳೆ ವಿಸ್ತರಣೆಯಾಗಲಿದೆ. ಈಗಾಗಲೇ ನೂತನ ಸಚಿವ ಪಟ್ಟಿಯನ್ನು ಸಿಎಂ ಬಿಎಸ್​ವೈ ರಾಜ್ಯಪಾಲರಿಗೆ ಕಳುಹಿಸಿದ್ದು, ನಾಳೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಯಾರಿಗೆಲ್ಲಾ ಸಚಿವ ಸ್ಥಾನ ಸಿಕ್ಕಿದೆ ಎಂಬುದು ಈಗಲೂ ನಿಗೂಢವಾಗಿದೆ. ಏತನ್ಮಧ್ಯೆ, ಕಳೆದ ಎರಡು ಬಾರಿ ಸಂಪುಟ ವಿಸ್ತರಣೆಯಾದಾಗ ಅವಕಾಶ ವಂಚಿತರಾಗಿದ್ದ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಅವರಿಗೆ ಈ ಬಾರಿ ಸಚಿವ ಸ್ಥಾನ ಪಕ್ಕಾ ಎಂದು …

Read More »

ಜನವರಿ 16ರಿಂದ ಕೊರೊನಾ ಲಸಿಕೆ ನೀಡಿಕೆ ಆರಂಭ

ಬೆಂಗಳೂರು: ಕೊರೊನಾ ಮಹಾಮಾರಿಗೆ ಬ್ರಹ್ಮಾಸ್ತ್ರವಾಗಿರುವ ಕೋವಿಶೀಲ್ಡ್ ಲಸಿಕೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದು ತಲುಪಿದೆ. ಜನವರಿ 16ರಿಂದ ಕೊರೊನಾ ಲಸಿಕೆ ನೀಡಿಕೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪೂರೈಕೆ ಆರಂಭವಾಗಿದೆ. ಪುಣೆಯ ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯದಲ್ಲಿ ಎರಡು ಪ್ರಮುಖ ಸ್ಥಳಗಳಿಗೆ ರವಾನಿಸಲಾಗುತ್ತಿದ್ದು, ಈಗಾಗಲೇ ಪುಣೆಯಿಂದ ಸ್ಪೈಸ್ ಜೆಟ್ ವಿಶೇಷ ವಿಮಾನದಲ್ಲಿ Z+ ಭದ್ರತೆಯ ಮೂಲಕ ಕೋವಿಶೀಲ್ಡ್ ಲಸಿಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ …

Read More »

ಅಮಿತ್ ಶಾ ರಾಜ್ಯ ಪ್ರವಾಸ ಪಟ್ಟಿ ಪ್ರಕಟ: ಬೆಳಗಾವಿಯಲ್ಲಿ 4 ಕಾರ್ಯಕ್ರಮದಲ್ಲಿ ಭಾಗಿ

ನವದೆಹಲಿ – ಇದೇ 16 ಮತ್ತು 17ರಂದು ರಾಜ್ಯ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಯಲ್ಲಿ 4 ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬಿಜೆಪಿಯ ಜನಸೇವಕ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಅಮಿತ್ ಶಾ, ಕೆಎಲ್ಇ  ಆಸ್ಪತ್ರೆ ಮತ್ತು ದಿವಂಗತ ಸುರೇಶ ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ ಪಕ್ಷದ ಪದಾಧಿಕಾರಿಗಳ ಸಭೆಯನ್ನೂ ನಡೆಸಲಿದ್ದಾರೆ. ಜ.16ರಂದು ಬೆಳಗ್ಗೆ 9 ಗಂಟೆಗೆ ನವದೆಹಲಿಯಿಂದ ಹೊರಡುವ ಅಮಿತ್ ಶಾ 11.30ಕ್ಕೆ ಬೆಂಗಳೂರು ವಿಮಾನ …

Read More »

ಈ ಏಳು ಜನರು ಸಚಿವರಾಗುವುದು ಬಹುತೇಕ ಖಚಿತ ಆಗಿದೆ.

ಬೆಂಗಳೂರು; ಬಹುನಿರೀಕ್ಷೆಯ ಸಚಿವ ಸಂಪುಟ ವಿಸ್ತರಣೆ ಆಗಿದ್ದು, ನಾಳೆ ಮಧ್ಯಾಹ್ನ 3.55ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಏಳು ಮಂದಿ ಶಾಸಕರು ಸಿಎಂ ಬಿಎಸ್​ ಯಡಿಯೂರಪ್ಪ ಅವರ ಸಚಿವ ಸಂಪುಟ ಸೇರಲಿದ್ದಾರೆ. ಆದರೆ ಯಾರೆಲ್ಲಾ ಸಂಪುಟ ಸೇರಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕರು ಸೇರಿದಂತೆ ಬಿಜೆಪಿ ನಾಯಕರಲ್ಲಿಯೂ ಮೂಡಿದೆ. ಕಾರಣ ನೂತನ ಸಚಿವರ ಪಟ್ಟಿಯ ಗೌಪತ್ಯೆಯನ್ನು ಸಿಎಂ ಬಿಎಸ್​ ಯಡಿಯೂರಪ್ಪ ಅವರು ಕಾಯ್ದುಕೊಂಡಿದ್ದಾರೆ. ಅಲ್ಲದೇ , ನೂತನ ಸಚಿವರಿಗೆ ತಾವೇ ಖುದ್ದು …

Read More »

ಎಸಿಬಿ ಖೆಡ್ಡಾಗೆ ಬಿದ್ದ ಪಿಎಸ್‍ಐ, ಹೆಡ್‍ಕಾನ್‍ಸ್ಟೇಬಲ್..!

ಬೆಂಗಳೂರು, ಜ.12- ದೂರು ದಾಖಲಿಸಬಾರದು ಎಂದು ಮಹಿಳೆಯಿಂದ ಹಣದ ಬೇಡಿಕೆ ಇಟ್ಟಿದ್ದ ಪೊಲೀಸ್ ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಬಾರದು ಎಂದು ಹೇಳಿದ ಮಹಿಳೆಯೊಬ್ಬಳಿಂದ ಪಿಎಸ್‍ಐ ಸೌಮ್ಯ ಮತ್ತು ಹೆಡ್‍ಕಾನ್‍ಸ್ಟೇಬಲ್‍ ಜೆ.ಪಿ.ರೆಡ್ಡಿ ಅವರು 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು.ಈ ಬಗ್ಗೆ ಬಂದ ನಿಖರ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಧಿಕಾರಿಗಳನ್ನು ಬಲೆಗೆ ಬೀಳಿಸಿ ತನಿಖೆ …

Read More »

ರಾಗಿಣಿಗೆ ಜೈಲಿನಲ್ಲೇ ಸಂಕ್ರಾಂತಿ

ಮುಂಬೈ,ಜ. 12- ಡ್ರಗ್ಸ್ ನಂಟಿನ ಸಂಬಂಧ ಜೈಲುವಾಸ ಅನುಭವಿಸುತ್ತಿರುವ ನಟಿ ರಾಗಿಣಿಯ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿರುವುದರಿಂದ ತುಪ್ಪದ ಬೆಡಗಿ ಜೈಲಿನಲ್ಲೇ ಸಂಕ್ರಾಂತಿ ಅಚರಿಸಲಿದ್ದಾರೆ. ಜಾಮೀನು ಕೋರಿ ನಟಿ ರಾಗಿಣಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆಯನ್ನು ಜನವರಿ 19 ರಂದು ನಡೆಸುವುದಾಗಿ ಹೇಳಿರು ವುದರಿಂದ ಒಂದು ವಾರದ ಕಾಲ ರಾಗಿಣಿ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ. ಈ ಹಿಂದೆ ರಾಗಿಣಿ ಡ್ರಗ್ಸ್ ನಂಟಿನ ಸಂಬಂಧ ವಾಗಿಯೇ ಹೈಕೋರ್ಟ್‍ಗೆ …

Read More »

ವಾಟ್ಸಪ್ ‌ಅಪ್‌ಡೇಟ್ : ಗೌಪ್ಯತೆಮೇಲೆ ಪರಿಣಾಮ ಬೀರಲ್ಲ

ನವದೆಹಲಿ: ಜ.12-ಫೇಸ್‌ಬುಕ್‌ ಒಡೆತನದ ಕಂಪನಿಯ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರ ಡೇಟಾದ ಸುರಕ್ಷತೆಯ ಬಗೆಗಿನ ಕಳವಳ ಪರಿಹರಿಸಲುವಾಟ್ಸಾಪ್‌ ಪ್ರಯತ್ನಿಸುತ್ತಿದೆ.ಅದರ ಇತ್ತೀಚಿನ ನೀತಿ ನವೀಕರಣವು(ಅಪ್‌ಡೇಟ್) ಬಳಕೆದಾರರ ಸಂದೇಶಗಳ ಗೌಪ್ಯತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾಟ್ಸಾಪ್‌ಮೂಲಗಳು ಮಂಗಳವಾರ ತಿಳಿಸಿವೆ. ಕಳೆದ ವಾರ ವಾಟ್ಸಾಪ್ ‌ತನ್ನ ಸೇವಾ ನಿಯಮಗಳು ಹಾಗೂಗೌಪ್ಯತೆ ನೀತಿಯಲ್ಲಿ ಬಳಕೆದಾರರ ಡೇಟಾವನ್ನು ಮತ್ತು ಫೇಸ್‌ಬುಕ್ ಪಾಲುದಾರರನ್ನು ಸಾಮಾಜಿಕ ಮಾಧ್ಯಮದೈತ್ಯ ಉತ್ಪನ್ನಗಳ ಏಕೀಕರಣವನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದರಕುರಿತು ಬಳಕೆದಾರರಿಗೆ ತಿಳಿಸಿತ್ತು. ವಾಟ್ಸಾಪ್ ಸೇವೆಯನ್ನು …

Read More »

ತಾನೇ ಸಾಕಿದ್ದ ಹಸುವಿನಿಂದ ಬಾಲಕ ಪ್ರಾಣಬಿಟ್ಟಿದ್ದಾನೆ

ಮಂಡ್ಯ: ತಾನೇ ಸಾಕಿದ್ದ ಹಸು ಮುಂದೊಂದ್ದು ದಿನ ತನ್ನನ್ನೇ ಕೊಲ್ಲಬಹುದು ಎಂದು ಆ ಬಾಲಕ ಕನಸ್ಸಿನಲ್ಲೂ ಯೋಚಿಸಿರಲಿಲ್ಲ. ಆದರೆ ವಿಧಿಲಿಖಿತ ಅದೇ ಆಗಿತ್ತು. ಆ ಹಸುವಿನಿಂದಲೇ ಬಾಲಕ ಪ್ರಾಣಬಿಟ್ಟಿದ್ದಾನೆ. ಇಂತಹದ್ದೊಂದು ಮನಕಲಕುವ ಘಟನೆ ಮಳವಳ್ಳಿ ತಾಲೂಕಿನ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಯತ್ತಂಬಾಡಿ ಗ್ರಾಮದಲ್ಲಿ ಸಂಭವಿಸಿದ್ದು, 13 ವರ್ಷದ ಬಾಲಕ ಮಾದೇಶ್ (13) ಬಲಿಯಾಗಿದ್ದಾನೆ. ಸೋಮವಾರ ರಾತ್ರಿ ಹಸುವಿಗೆ ಹುಲ್ಲು ಹಾಕಲು ಹೋಗಿದ್ದ ಮಾದೇಶ್​ಗೆ ಕೊಂಬಿನಿಂದ ತಿವಿದಿದೆ. ಮಾರಣಾಂತಿಕವಾಗಿ ಗಾಯಗೊಂಡ ಬಾಲಕ …

Read More »

ಮಹೇಶ ಫೌಂಡೇಶನ್ ನೂತನ ವೆಬ್‌ಸೈಟ್ ಗೆ ಚಾಲನೆ ನೀಡಿದ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ

ಬೆಳಗಾವಿ: ಮಹೇಶ ಫೌಂಡೇಶನ ಸಂಸ್ಥೆಯ   ‘ಪ್ರಯತ್ನ’ ಎಂಬ ನೂತನ  ವೆಬ್‌ಸೈಟ್ ಅನ್ನು   ಸತೀಶ ಶುಗರ್ಸ್ ನಿರ್ದೇಶಕರಾದ  ರಾಹುಲ್  ಹಾಗೂ   ಪ್ರಿಯಾಂಕ್   ಜಾರಕಿಹೊಳಿ   ಬಿಡುಗಡೆಗೊಳಿಸಿದರು.   ಇಲ್ಲಿನ  ಕಣಬರ್ಗಿ ಮಹೇಶ ಪೌಂಡೇಶನ ಕಚೇರಿಯಲ್ಲಿ ಮಂಗಳವಾರ  ಹಮ್ಮಿಕೊಳ್ಳಲಾಗಿದ್ದ  ರಾಷ್ಟ್ರೀಯ ಯುವ ದಿನಾಚರಣೆ,  ಸ್ವಾಮಿ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ನೂತನ ವೆಬ್ ಸೈಟ್ ಗೆ ಚಾಲನೆ ನೀಡಿದರು.   ಬಳಿಕ ಮಾತನಾಡಿದ ರಾಹುಲ್ ಜಾರಕಿಹೊಳಿ, ಸಮಾಜದ ಸೌಲಭ್ಯ ವಂಚಿತ ಸಮುದಾಯಗಳನ್ನು ಬೆಂಬಲಿಸುವ ಉದ್ದೇಶದಿಂದ …

Read More »

ಗೋಹತ್ಯೆ ನಿಷೇಧ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ

ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಕುರಿತಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದ್ದು, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಹಾಗೂ ಸಚಿನ್ ಶಂಕರ್ ಮಗುದಂ ಅವರನ್ನೊಳಗೊಂಡ ಪೀಠ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಪಿಳ್ಳಣ್ಣ ಗಾರ್ಡನ್ ನಿವಾಸಿ ಮೊಹಮ್ಮದ್ ಆರಿಫ್ ಜಮೀಲ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಗೋಹತ್ಯೆ ನಿಷೇಧದಿಂದ ಭಾರತದ ಸಂವಿಧಾನದ 19 (ಜಿ) ವಿಧಿ ಖಾತರಿಪಡಿಸಿದ …

Read More »