Breaking News

Daily Archives: ಜನವರಿ 30, 2021

ನಾಳೆ ಪೋಲಿಯೋ ಲಸಿಕೆ ಅಭಿಯಾನ; ಹತ್ತಿರದ ಲಸಿಕಾ ಕೇಂದ್ರದ ಬಗ್ಗೆ ಮಾಹಿತಿಗೆ ಈ ಆಪ್ ಬಳಸಿ

ನಾಳೆ ಭಾನುವಾರ, ಜನವರಿ 31ರಂದು ರಾಜ್ಯಾದ್ಯಂತ ಪೋಲಿಯೋ ಲಸಿಕೆ ಅಭಿಯಾನ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ. ನಿಮ್ಮ ಹತ್ತಿರದ ಲಸಿಕಾ ಕೇಂದ್ರದ ಬಗ್ಗೆ ಮಾಹಿತಿ ಪಡೆಯಲು ಈ ಆಪ್ ಬಳಸಿ.

Read More »

ಗೋಕಾಕ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಗೋಕಾಕ ಆಯ್ಕೆ

ಗೋಕಾಕ: ಇಲ್ಲಿನ ನಗರಸಭೆ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಕುತ್ಬುದ್ಧೀನ್ ಗೋಕಾಕ ಶನಿವಾರ ಆಯ್ಕೆಯಾಗಿದ್ದಾರೆ. ಕುತ್ಬುದ್ಧೀನ್ ಅವರು ಮೂರು ಬಾರಿ ನಗರಸಭೆಗೆ ಆಯ್ಕೆಯಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮುಖಂಡರಾದ ಲಖನ್ ಜಾರಕಿಹೊಳಿ ಹಾಗೂ ಅಂಬಿರಾವ್ ಪಾಟೀಲ ಅವರ ಸೂಚನೆಯ ಮೇರೆಗೆ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಂಚ್ಯಾಳ, ನಗರ ಸೇವಕರಾದ ಅಬ್ಬಾಸ ದೇಸಾಯಿ, ಸಂತೋಷ …

Read More »

ಕರ್ತವ್ಯದ ಸಮಯದಲ್ಲಿ ಕ್ರಿಮಿನಲ್ ಜತೆಗೆ ಸಿಸಿಬಿ ಪೊಲೀಸರ ಎಣ್ಣೆ ಪಾರ್ಟಿ

ಮಂಗಳೂರು : ಕರ್ತವ್ಯದ ವೇಳೆಯಲ್ಲಿ ಬಾರಿನಲ್ಲಿ ಕ್ರಿಮಿನಲ್ ಹಿನ್ನಲೆ ಹೊಂದಿರುವ ವ್ಯಕ್ತಿಯೊಬ್ಬನೊಂದಿಗೆ ಮಂಗಳೂರು ಸಿಸಿಬಿ ಪೊಲೀಸರು ಎಣ್ಣೆ ಪಾರ್ಟಿ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪುಲ್ ವೈರಲ್ ಆಗಿದೆ. ಮಂಗಳೂರು ಸಿಸಿಬಿ ವಿಭಾಗದ ಎಂಟು ಮಂದಿ ಪೊಲೀಸರು ಮಂಗಳೂರು ಹೊರವಲಯದ ಕುತ್ತಾರು ಬಳಿಯ ಬಾರ್ ನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ಬಾರ್ ಹೊರಗೆ ಸರಕಾರಿ ಟಿ.ಟಿ ವಾಹನ ನಿಲ್ಲಿಸಿ ಪಾರ್ಟಿ ನಡೆಸುತ್ತಿದ್ದರು ಎನ್ನಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ …

Read More »

ಗಾಂಧಿಯನ್ನು ಕೊಂದವರ ಪ್ರತಿಮೆ ಮಾಡಿ ಪೂಜಿಸುವ ಕೆಲಸ,ಇದಕ್ಕಿಂತ ದೇಶದ್ರೋಹ ಮತ್ತೊಂದಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ಯಾವುದಕ್ಕಾಗಿ ಗಾಂಧೀಜಿ ಹೋರಾಟ ಮಾಡಿದ್ರು ಅದು ಈಗ ದೇಶದಲ್ಲಿ ನೆಲೆಸುತ್ತಿಲ್ಲ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ರೈತ ಸಂಘಟನೆಗಳು ಆಚರಿಸುತ್ತಿರುವ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಾಂಧೀಜಿ ದೇಶದಲ್ಲಿ ಶಾಂತಿ ನೆಲೆಸಬೇಕು, ಎಲ್ಲರೂ ನೆಮ್ಮದಿಯಿಂದ ಬಾಳಬೇಕು, ಸೌಹಾರ್ದತೆ ನೆಲೆಸಬೇಕು ಎಂದುಕೊಂಡವರು. ಸ್ವಾತಂತ್ರ್ಯಕ್ಕಾಗಿ ಎಷ್ಟು ಹೋರಾಡಿದ್ರೋ ಅದಕ್ಕಿಂತಲೂ ಹೆಚ್ಚು ಶಾಂತಿ ಸೌಹಾರ್ದತೆಗಾಗಿ ಹೋರಾಡಿದವರು. ಗಾಂಧೀಜಿ ಜೊತೆಗೆ ಬಹಳಷ್ಟು ಜನ ಹೋರಾಟ ಮಾಡಿದ್ದಾರೆ, ಅವರನ್ನೂ ನಾವು ಸ್ಮರಿಸಬೇಕು …

Read More »

ರೈತ, ಸೈನಿಕನಿಗೆ ಗೌರವ ಇಲ್ಲದಿರುವ ದೇಶ, ಅದು ದೇಶವೇ ಅಲ್ಲ; ಕೇಂದ್ರದ ವಿರುದ್ಧ ರಮೇಶ್​ ಕುಮಾರ್

ಕೋಲಾರ (ಜನವರಿ 29); ಜನವರಿ 26ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದಿರುವ ಗಲಭೆಯನ್ನು ಮುಂದಿಟ್ಟು ಕೇಂದ್ರ ಸರ್ಕಾರ ಇಡೀ ರೈತ ಹೋರಾಟವನ್ನೇ ಮರೆ ಮಾಚುವ ಕೆಲಸ ಮಾಡುತ್ತಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿರುವ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​, “ರೈತರು ಹಾಗೂ ಸೈನಿಕರನ್ನು ಗೌರವಿಸದ ದೇಶ ದೇಶವೇ ಅಲ್ಲ. ಭಾರತದಲ್ಲಿ ಇದೀಗ ಇಂತಹ ಪರಿಸ್ಥಿತಿ ಬಂದೊದಗಿದೆ. ಪೋಲಿ ಪುಂಡರು ಕೆಂಪುಕೋಟೆ ಮೇಲೆ ಏನೋ ಮಾಡಿದ್ರೆ ಮಾಧ್ಯಮಗಳು ಅದನ್ನೆ ತೋರಿಸ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರದ …

Read More »

ಯುಗಾದಿಗೆ ಉತ್ತರ ಕರ್ನಾಟಕದವರೇ ಸಿಎಂ :ಯತ್ನಾಳ್ ಹೊಸ ಬಾಂಬ್

ವಿಜಯಪುರ (ಜನವರಿ.30); ಯುಗಾದಿ ಹಬ್ಬದ ವೇಳೆಗೆ ಮಂತ್ರಿ ಸ್ಥಾನವನ್ನು ಕೊಡುವವರ ಜಾಗದಲ್ಲಿ ನಮ್ಮವರೆ ಬರ್ತಾರೆ ಎಂದು ಹೇಳುವ ಮೂಲಕ ಶಾಸಕ ಹಿರಿಯ ಬಿಜೆಪಿ ನಾಯಕ ಬಸನಗೌಡ ಯತ್ನಾಳ್ ಸಿಎಂ ಯಡಿಯೂರಪ್ಪ ಸ್ಥಾನ ಬದಲಾಗಲಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಈ ಕುರಿತು ಮಾತನಾಡಿರುವ ಅವರು, “ಈ ಹಿಂದೆ ಮೂರು ತಿಂಗಳಲ್ಲಿ ಬದಲಾವಣೆಯಾಗಲಿದೆ ಎಂದು ಬೇರೆ ವಿಚಾರವಾಗಿ ಹೇಳಿದ್ದೆ.  ಈಗ ನೋಡ್ತಾ ಇರಿ, ಯುಗಾದಿಗೆ ಎಲ್ಲವೂ ಬದಲಾಗಲಿದೆ. ಮಂತ್ರಿಗಳನ್ನು ಕೊಡುವವರ ಜಾಗದಲ್ಲಿ ನಮ್ಮವರೆ …

Read More »

ಜಯಲಲಿತಾ ಬಳಿಕ ಮತ್ತೊಂದು ಪ್ರಮುಖ ರಾಜಕಾರಣಿ ಪಾತ್ರದಲ್ಲಿ ಕಂಗನಾ ರಣಾವತ್.​..!

ತಮಿಳುನಾಡು ಸಿಎಂ ಆಗಿದ್ದ ದಿವಂಗತ ಜಯಲಲಿತಾರ ಆತ್ಮಚರಿತ್ರೆ ಆಧಾರಿತ ಸಿನಿಮಾ ʼತಲೈವಿʼಯಲ್ಲಿ ಕಂಗನಾ ರಣಾವತ್​ ನಟಿಸ್ತಾ ಇರೋದು ನಿಮಗೆಲ್ಲಾ ಗೊತ್ತೇ ಇದೆ. ಈ ಸಿನಿಮಾ ಬಳಿಕ ಕಂಗನಾ ದೇಶ ಕಂಡ ಮತ್ತೊಬ್ಬ ಪ್ರಬಲ ಮಹಿಳಾ ರಾಜಕಾರಣಿಯ ಪಾತ್ರವನ್ನ ನಿರ್ವಹಿಸೋಕೆ ಸಜ್ಜಾಗಿದ್ದಾರೆ. ತಮ್ಮ ಮುಂಬರುವ ಸಿನಿಮಾದಲ್ಲಿ ನಟಿ ಕಂಗನಾ ರಣಾವತ್​​ ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದ ಹಾಗೆ ಈ ಸಿನಿಮಾ ಇಂದಿರಾ ಗಾಂಧಿ ಆತ್ಮಚರಿತ್ರೆಯಲ್ಲ. ದೇಶದಲ್ಲಿ …

Read More »

ಕುದುರೆ ರೇಸ್ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಕುದುರೆ ರೇಸ್ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಸ್. ಮಿಥುನ್ (33), ವಿ ರಘು (47), ಶಿವರಾಜು ಕೆ (30) ಬಂಧಿತ ಆರೋಪಿಗಳು. ಬಂಧಿತರಿಂದ 5. 5 ಲಕ್ಷ ರೂ. ಸೇರಿ 5 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಆರೋಪಿಗಳು, ಲೈಸೆನ್ಸ್ ಇಲ್ಲದೆ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡು ಜೂಜಾಟ ನಡೆಸಿದ್ದರು. ಪೋಲೀಸರು ಖಚಿತ ಮಾಹಿತಿ …

Read More »

‘ಕೆಜಿಎಫ್ ಚಾಪ್ಟರ್-2” ರಿಲೀಸ್ ಗೆ ಡೇಟ್ ಫಿಕ್ಸ್..!

ರಾಕಿಂಗ್ ಸ್ಟಾರ್​ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್​-2 ಚಿತ್ರ ಬಿಡುಗಡೆ ದಿನಾಂಕ ಕೊನೆಗೂ ಫಿಕ್ಸ್ ಆಗಿದ್ದು, ಚಿತ್ರತಂಡದಿಂದ ದಿನಾಂಕ ಘೋಷಣೆಯಾಗಿದೆ. ದೇಶಾದ್ಯಂತ ಈ ಚಿತ್ರ ಜುಲೈ 16ರಂದು ರಿಲೀಸ್ ಆಗಲಿದೆ. ಇದಕ್ಕೆ ಸಂಬಂಧಿಸಿದಂತೆ ಹೊಂಬಾಳೆ ಫಿಲಂಸ್, ಯಶ್ ಹಾಗೂ ಪ್ರಶಾಂತ್ ನೀಲ್​‌​ ಟ್ವಿಟರ್​ ಅಕೌಂಟ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. Fasten your seat belt coz the date is set.. ? pic.twitter.com/LsmIvf7SSz – Yash (@TheNameIsYash) January …

Read More »

ರಾಮಮಂದಿರ ನಿರ್ಮಾಣ | ತಾಂತ್ರಿಕ ಉಸ್ತುವಾರಿಯಾಗಿ ಕೋಟೆ ನಾಡಿನ ಎಂಜಿನಿಯರ್ ನೇಮಕ ; ಸಚಿವ ರಮೇಶ್ ಜಾರಕಿಹೊಳಿ‌ ಹರ್ಷ

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀ ರಾಮಚಂದ್ರನ ದೇವಾಲಯದ ತಾಂತ್ರಿಕ ಉಸ್ತುವಾರಿಯಾಗಿ ನೇಮಕವಾಗಿರುವ ದೇಶದ ಹಿರಿಯ ಜಿಯೋ ಟೆಕ್ನಿಕಲ್ ಎಂಜಿನಿಯರ್, ಕನ್ನಡಿಗ ಪ್ರೊ. ಟಿಜಿ ಸೀತಾರಾಮ್‌ ಅವರಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಶುಭಾಶಯ ತಿಳಿಸಿದ್ದಾರೆ. ಗುವಾಹಟಿ ಐಐಟಿ ನಿರ್ದೇಶಕರಾಗಿರುವ ಚಿತ್ರದುರ್ಗ ಮೂಲದ ಪ್ರೊ. ಟಿಜಿ ಸೀತಾರಾಮ್, ಜಿಯೋ ಟೆಕ್ನಿಕಲ್ ಎಂಜಿನಿಯರಿಂಗ್ ನಲ್ಲಿ ನುರಿತ ತಜ್ಞರಾಗಿದ್ದು, ಇವರ ತಂಡದ ಸಲಹೆಯಂತೆಯೇ ‘ಶ್ರೀ ರಾಮ ಮಂದಿರ’ ದ ತಳಪಾಯದ ಕೆಲಸ ನಡೆಯುತ್ತದೆ. …

Read More »