Breaking News
Home / 2021 / ಜನವರಿ / 12 (page 2)

Daily Archives: ಜನವರಿ 12, 2021

BIG BREAKING : ನಾಳೆ 3.50ಕ್ಕೆ ನೂತನ ಸಚಿವರ ಪ್ರಮಾಣವಚನ : 8 ಶಾಸಕರು ಸಂಪುಟ ಸೇರ್ಪಡೆ – ಸಿಎಂ ಯಡಿಯೂರಪ್ಪ

ಬೆಂಗಳೂರು : 7 ರಿಂದ 8 ಶಾಸಕರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವ ಬಗ್ಗೆ ನಾಳೆ 3.50 ಗಂಟೆಗೆ ತೀರ್ಮಾನ ಕೈಗೊಳ್ಳಲಾಗುವುದು. ನಾಳೆ 7 ರಿಂದ 8 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ. ಒಬ್ಬರನ್ನು ಕೈಬಿಡುವ ಚರ್ಚೆ ಕೂಡ ನಡೆದಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಿಎಂ ಯಡಿಯೂರಪ್ಪ ಅವರು, ನಾಳೆ ಸಂಜೆ 3.50ಕ್ಕೆ ನೂತನ ಸಚಿವರು ಸಂಪುಟ ಸೇರ್ವಡೆಗೊಳ್ಳಲಿದ್ದಾರೆ. 7 ರಿಂದ …

Read More »

ಬಳೋಬಾಳ : 27 ಲಕ್ಷ ರೂ. ವೆಚ್ಚದ ಪಶು ಚಿಕಿತ್ಸಾಲಯದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಾಗಪ್ಪ ಶೇಖರಗೋಳ

ಬಳೋಬಾಳ : 27 ಲಕ್ಷ ರೂ. ವೆಚ್ಚದ ಪಶು ಚಿಕಿತ್ಸಾಲಯದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಾಗಪ್ಪ ಶೇಖರಗೋಳ ಗೋಕಾಕ : ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಪಶು ಚಿಕಿತ್ಸಾಲಯದ ನೂತನ ಕಟ್ಟಡಕ್ಕೆ ಸೋಮವಾರದಂದು ಅಡಿಗಲ್ಲು ಸಮಾರಂಭ ನೆರವೇರಿತು. ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಬಳೋಬಾಳ ಪಶು ಚಿಕಿತ್ಸಾಲಯ ಹೊಸ ಕಟ್ಟಡಕ್ಕೆ 27 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಉತ್ತಮ ಗುಣಮಟ್ಟದ ಕಾಮಗಾರಿ ನಿಗದಿತ …

Read More »

ಎಫ್‌ಐಆರ್ ದಾಖಲಿಸಲು ₹ 1 ಲಕ್ಷ ಲಂಚ: ಬೈಯಪ್ಪನಹಳ್ಳಿ ಠಾಣೆ ಪಿಎಸ್‌ಐ ಸೌಮ್ಯಾ ಬಂಧನ

ಬೆಂಗಳೂರು: ಪ್ರಕರಣವೊಂದರಲ್ಲಿ‌ ಎಫ್‌ಐಆರ್ ದಾಖಲಿಸಲು ದೂರುದಾರರಿಂದ ₹ 1 ಲಕ್ಷ ಲಂಚ ಪಡೆಯುತ್ತಿದ್ದ ನಗರದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸೌಮ್ಯಾ ಮತ್ತು ಹೆಡ್ ಕಾನ್ ಸ್ಟೆಬಲ್ ಜೆ.ಪಿ. ರೆಡ್ಡಿ ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಂಗಳವಾರ ಬಂಧಿಸಿದೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲೇ ಲಂಚದ ಹಣ ಪಡೆಯುತ್ತಿದ್ದಾಗ ದಾಳಿಮಾಡಿದ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಎಸಿಬಿ ಕಾರ್ಯಾಚರಣೆ ವೇಳೆ …

Read More »

ತಾಲೂಕು ಪಂಚಾಯತಿ ವ್ಯವಸ್ಥೆಯನ್ನೇ ರದ್ದು ಮಾಡುತ್ತೇವೆ: ಗೋವಿಂದ ಕಾರಜೋಳ

ಬಾಗಲಕೋಟೆ: ರಾಮಕೃಷ್ಣ ಹೆಗಡೆ ಅವರ ದೂರದೃಷ್ಠಿಯ ಫಲವಾಗಿ ಇಡೀ ದೇಶಕ್ಕೆ ಮಾದರಿಯಾದ ಪಂಚಾಯತ್ ರಾಜ್ ವ್ಯವಸ್ಥೆ ನಮ್ಮ ರಾಜ್ಯದಲ್ಲಿತ್ತು. ಆದರೆ ವೀರಪ್ಪ ಮೋಯ್ಲಿ ಅವರು ಮುಖ್ಯಮಂತ್ರಿಯಾದ ಬಳಿಕ ಪಂಚಾಯತ್ ವ್ಯವಸ್ಥೆಯ ಅರಿವಿಲ್ಲದೆ ಅವಿವೇಕಿತನದ ನಿರ್ಧಾರದಿಂದ ಈ ವ್ಯವಸ್ಥೆಯೇ ಕುಲಗೆಟ್ಟಿತು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಎರಡು ಹಂತದ ವ್ಯವಸ್ಥೆಗೊಳಿಸಲು ಚರ್ಚೆ ನಡೆಸುತ್ತಿದ್ದು, ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದುಗೊಳಿಸುವ ಚಿಂತನೆ ನಡೆದಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. ನಗರದಲ್ಲಿ ಬುಧವಾರ ಜಿಲ್ಲಾ …

Read More »

ಅಭಿಮಾನಿಯ ಮನದಾಸೆ ಈಡೇರಿಸಿದ ಪವರ್ ಸ್ಟಾರ್ ಪುನೀತ್

ಡಾ.ರಾಜ್‌ಕುಮಾರ್ ಕುಟುಂಬದವರನ್ನು ಸುಮ್ಮನೆ ‘ದೊಡ್ಮನೆಯರು’ ಎನ್ನುವುದಿಲ್ಲ. ಅವರ ವಿಶಾಲ ಮನೋಭಾವಕ್ಕೆ ಅನ್ವರ್ಥವಾಗಿ ಆ ಹೆಸರು ಬಂದಿದೆ. ಶಿವಣ್ಣ, ಬೀದಿ ಬದಿಯಲ್ಲಿ ಚಹ ಕುಡಿದ, ಉಪ್ಪಿಟ್ಟು ತಿಂದ, ಅಭಿಮಾನಿಗಳಿಗೆ ಸಹಾಯ ಮಾಡಿದ ಸುದ್ದಿಗಳು, ಚಿತ್ರಗಳು ನೋಡಿಯೇ ಇರುತ್ತೀರಾ. ಪುನೀತ್ ರಾಜ್‌ಕುಮಾರ್ ಸಹ ಸರಳತೆಯಲ್ಲಿ ಅಣ್ಣನಂತೆಯೇ. ಇತ್ತೀಚೆಗಷ್ಟೆ ತಮ್ಮ ಕಚೇರಿಯ ಉದ್ಯೋಗಿಯೊಬ್ಬರ ಮದುವೆಗಾಗಿ ಕರಾವಳಿಗೆ ಬಂದಿದ್ದ ಪುನೀತ್ ರಾಜ್‌ಕುಮಾರ್, ಇದೀಗ ಮತ್ತೊಮ್ಮೆ ತಮ್ಮ ವಿಶಾಲ ಹೃದಯಕ್ಕೆ, ಮನುಷ್ಯ ಪ್ರೀತಿಗೆ ಉದಾಹರಣೆಯೊಂದನ್ನು ನೀಡಿದ್ದಾರೆ. ಅಭಿಮಾನಿಯೊಬ್ಬ …

Read More »

ಕತ್ರಿನಾ ಕೈಫ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ತಮಿಳಿನ ಸ್ಟಾರ್ ನಟ

ನಟಿ ಕತ್ರಿನಾ ಕೈಫ್ ಈ ಹಿಂದೆ ಕೆಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಬಾಲಿವುಡ್‌ ನಲ್ಲಿ ಸ್ಥಾನ ಭದ್ರವಾದ ಬಳಿಕ ಅವರು ದಕ್ಷಿಣದತ್ತ ತಲೆ ಹಾಕಿಲ್ಲ. ಆದರೆ ಹೊಸ ಸಿನಿಮಾ ಒಂದರಲ್ಲಿ ನಟಿ ಕತ್ರಿನಾ ಕೈಫ್ ಜೊತೆಗೆ ದಕ್ಷಿಣದ ಖ್ಯಾತ ನಟನೊಬ್ಬ ತೆರೆ ಹಂಚಿಕೊಳ್ಳಲಿದ್ದಾರೆ. ನಟ ವಿಜಯ್ ಸೇತುಪತಿ ಹಿಂದಿ ಸಿನಿಮಾದಲ್ಲಿ ಕತ್ರಿನಾ ಕೈಫ್ ಜೊತೆಗೆ ನಟಿಸಲಿದ್ದಾರೆ. ‘ಅಂಧಾದುನ್’ ಎಂಬ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಶ್ರೀರಾಮ್ ರಾಘವ್ …

Read More »

ಭಂಡಾರ ಆಸ್ಪತ್ರೆಯ ಬೆಂಕಿ ಅವಘಢದಲ್ಲಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಮಹಾರಾಷ್ಟ್ರದ ಭಂಡಾರಾದಲ್ಲಿ ಸಂಭವಿಸಿದ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನೂ ಘೋಷಿಸಲಾಗಿದೆ. ಪಿಎಂ ಮೋದಿ ಈ ಹಿಂದೆ ಟ್ವೀಟ್ ಮಾಡಿ ‘ಮಹಾರಾಷ್ಟ್ರದ ಭಂಡಾರಾದಲ್ಲಿ ನಾವು ಅಮೂಲ್ಯ ಯುವ ಜೀವಗಳನ್ನು ಕಳೆದುಕೊಂಡಿದ್ದೇವೆ. …

Read More »

ಮಗಳ ಮದುವೆಗೆ ಸಿಎಂ ಬಿಎಸ್ ವೈಗೆ ಆಹ್ವಾನ ನೀಡಿದ ಜಮೀರ್ ಅಹ್ಮದ್ ಖಾನ್

ಬೆಂಗಳೂರು : ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ತಮ್ಮ ಮಗಳ ಮದುವೆಗೆ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡುಉತ್ತಿದ್ದು, ನಿನ್ನೆ ಜಮೀರ್ ಅಹ್ಮದ್ ಖಾನ್ ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಭೇಟಿಯಾಗಿ ಆಹ್ವಾನ ನೀಡಿದ್ದಾರೆ. ನಿನ್ನೆ ರಾತ್ರಿ ಸಿಎಂ ನಿವಾಸ ಕಾವೇರಿಗೆ ಆಗಮಿಸಿದ ಜಮೀರ್ ಅಹ್ಮದ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಗಳ ಮದುವೆಗೆ ಆಮಂತ್ರಣ ನೀಡಿ ಮದುವೆಗೆ ದಯಮಾಡಿ ಬರಬೇಕು ಸಾರ್ ಎಂದರು. ಇದೇ ವೇಳೆ ಯಡಿಯೂರಪ್ಪ ಪುತ್ರ …

Read More »

ಮಹತ್ವದ ಬೆಳವಣಿಗೆ: ಗಡಿಯಿಂದ 10 ಸಾವಿರ ಸೈನಿಕರ ವಾಪಸ್ ಪಡೆದ ಚೀನಾ

ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಚೀನಾ ವಾಸ್ತವಿಕ ನಿಯಂತ್ರಣ ರೇಖೆ(ಎಲ್‌ಎಸಿ) ಪ್ರದೇಶದಿಂದ 10 ಸಾವಿರ ಸೈನಿಕರನ್ನು ಹಿಂಪಡೆದುಕೊಂಡಿದೆ. ಲಡಾಖ್ ನ ಭಾರತೀಯ ಗಡಿ ಪ್ರದೇಶಕ್ಕೆ ಸಮೀಪವಿರುವ ಚೀನಾ ಸೈನ್ಯದ ಸಾಂಪ್ರದಾಯಿಕ ತರಬೇತಿ ಪ್ರದೇಶಗಳಲ್ಲಿ ಇದ್ದ 10 ಸಾವಿರ ಸೈನಿಕರನ್ನು ಹಿಂಪಡೆದುಕೊಂಡಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಇಡೀ ಜಗತ್ತು ಹೋರಾಟ ನಡೆಸುತ್ತಿದ್ದಾಗ ಚೀನಾ 50 ಸಾವಿರ ಸೈನಿಕರನ್ನು …

Read More »

ಕಲ್ಲಿದ್ದಲು ಗಣಿಗಾರಿಕೆಗೆ ಆನ್ ಲೈನ್ ಮೂಲಕ ಅನುಮತಿ ಒದಗಿಸುವ ಏಕ ಗವಾಕ್ಷಿ ಅನುಮೋದನೆ ಪಡೆಯುವ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ

ನವದೆಹಲಿ: ಕಲ್ಲಿದ್ದಲು ಗಣಿಗಾರಿಕೆಗೆ ಆನ್ ಲೈನ್ ಮೂಲಕ ಅನುಮತಿ ಒದಗಿಸುವ ಏಕ ಗವಾಕ್ಷಿ ಅನುಮೋದನೆ ಪಡೆಯುವ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು. ಈ ಕುರಿತು ಮಾತನಾಡಿದ ಅವರು ಕಲ್ಲಿದ್ದಲು ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವಿದ್ದರೂ ಅದರ ಸದ್ಬಳಕೆ ಆಗುತ್ತಿರಲಿಲ್ಲ, ಇದೀಗ ಕಲ್ಲಿದ್ದಲು ಕ್ಷೇತ್ರದಲ್ಲಿ ಪಾರದರ್ಶಕತೆ ತರುವ ಮತ್ತು ಅದರ ಕ್ಷಮತೆಯನ್ನು ಹೆಚ್ಚಿಸುವ ಹಾಗೂ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ಈ ಏಕ …

Read More »