Breaking News

Daily Archives: ಜನವರಿ 27, 2021

ರಾಜಮೌಳಿಯ RRR ಚಿತ್ರಕ್ಕೆ ಎದುರಾಗಿ ಅಜಯ್ ದೇವಗನ್ ಸಿನಿಮಾ?

ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13, 2021 ರಂದು ತೆರೆಗೆ ಬರ್ತಿದೆ. ಜೂನಿಯರ್ ಎನ್‌ ಟಿ ಆರ್ ಹಾಗೂ ರಾಮ್ ಚರಣ್ ತೇಜ ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾದ ಮೇಲೆ ಎಲ್ಲ ಚಿತ್ರರಂಗದ ಕಣ್ಣಿದೆ. ‘ಬಾಹುಬಲಿ’ ಸರಣಿ ಬಳಿಕ ರಾಜಮೌಳಿ ಕೈಗೆತ್ತಿಕೊಂಡಿರುವ ಸಿನಿಮಾ ಇದಾಗಿದ್ದು, ಸ್ವಾತಂತ್ರ್ಯ ವೀರರ ಜೀವನದ ಕಥೆಯನ್ನು ಹೇಳುತ್ತಿದ್ದಾರೆ. ಭಾರಿ ಬಜೆಟ್ ಹಾಗೂ ಅದ್ಧೂರಿ ದೃಶ್ಯ ವೈಭವದೊಂದಿಗೆ ಸಿದ್ಧವಾಗುತ್ತಿರುವ …

Read More »

ವಿರಾಟ್ ಕೊಹ್ಲಿ, ತಮನ್ನಾ ಭಾಟಿಯಾಗೆ ನ್ಯಾಯಾಲಯದ ನೊಟೀಸ್

ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ತಮನ್ನಾ ಭಾಟಿಯಾಗೆ ಕೇರಳ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ. ಆನ್‌ಲೈನ್ ಗೇಮ್‌ಗಳ ಕುರಿತಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ವಿರಾಟ್ ಕೊಹ್ಲಿ, ತಮನ್ನಾ ಭಾಟಿಯಾ ಜೊತೆಗೆ ಮಲಯಾಳಂ ನಟ ಅಜು ವರ್ಗೀಸ್‌ ಗೆ ಸಹ ನೊಟೀಸ್ ನೀಡಿದೆ. ಆರೋಪದ ಬಗ್ಗೆ ಉತ್ತರ ನೀಡುವಂತೆ ಕೇರಳ ಹೈಕೋರ್ಟ್‌ ಸೂಚಿಸಿದೆ. ವಿರಾಟ್ ಕೊಹ್ಲಿ, ತಮನ್ನಾ ಭಾಟಿಯಾ, ಅಜು ವರ್ಗೀಸ್ ಅವರುಗಳು ಆನ್‌ಲೈನ್‌ ರಮ್ಮಿ …

Read More »

ದುಬೈಗೆ ಬಂದಿಳಿದ ಅಭಿನಯ ಚಕ್ರವರ್ತಿ ಸುದೀಪ್‌ಗೆ ಭರ್ಜರಿ ಸ್ವಾಗತ

ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು (ಜನವರಿ 27) ದುಬೈ ತಲುಪಿದ್ದಾರೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸುದೀಪ್ ಅವರನ್ನು ದುಬೈ ಸಂಸ್ಕೃತಿಯಂತೆ ಸ್ವಾಗತ ಕೋರಿ ಬರಮಾಡಿಕೊಂಡಿದ್ದಾರೆ. ಕಿಚ್ಚ ಸುದೀಪ್ ದುಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದೀಪ್ ಅವರು ವಿಮಾನ ಇಳಿದು ಬರುತ್ತಿದ್ದಂತೆ ಹೂವಿನ ಮಾಲೆ ಹಾಕಿ, ಹೂಗುಚ್ಛ ನೀಡಿ ಹಾಗೂ ವಿಶೇಷವಾದ ಉಡುಗೊರೆಯನ್ನು ನೀಡಿ ಸ್ವಾಗತ …

Read More »

ಸೇವೆಯ ಜೊತೆ ಪ್ರಾಮಾಣಿಕತೆ ಮೆರೆದ 108 ಆಂಬ್ಯುಲೆನ್ಸ್ ಸಿಬ್ಬಂದಿ

ವಿಜಯಪುರ: ಅಪಘಾತದ ಸಂದರ್ಭದಲ್ಲಿ ಗಾಯಾಳುವನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸುವ ಕರ್ತವ್ಯ ಪ್ರಜ್ಞೆ ಜೊತೆಗೆ 108 ಆಂಬ್ಯುಲೆನ್ಸ್ ಸಿಬ್ಬಂದಿ ಪ್ರಾಮಾಣಿಕತೆಯನ್ನೂ ಮೆರೆದಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ. ಕೊಲ್ಹಾರ ಸಮೀಪದ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಹತ್ತಿರದ ರಾಣಿ ಚನ್ನಮ್ಮ ಶಾಲೆ ಬಳಿ ದ್ವಿಚಕ್ರ ವಾಹನ ಸ್ಕಿಡ್ ಆಗಿ ಸವಾರ ಸ್ಕಿಡ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಘಟನೆಯಲ್ಲಿ ಕಾಖಂಡಕಿ ಗ್ರಾಮದ ಬಸಲಿಂಗಯ್ಯ ಗುರುಸ್ವಾಮಿ ಎಂಬವರು ತೀವ್ರವಾಗಿ ಗಾಯಗೊಂಡಿದ್ದರು. ವಿಷಯ ತಿಳಿದು ತಕ್ಷಣ …

Read More »

FDA ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಪೊಲೀಸ್ ಕಾನ್ಸ್ ಸ್ಟೇಬಲ್ ಸಿಸಿಬಿ ವಶಕ್ಕೆ

ಹಾವೇರಿ : ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರು ಶಂಕೆ ಹಿನ್ನೆಲೆ ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಆಗಿರುವ ತಾಲೂಕಿನ ಅಗಡಿ ಗ್ರಾಮದ ಕಾನ್ಸ್ ಸ್ಟೇಬಲ್ ಒಬ್ಬರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದಿದ್ದಾರೆ. ಹಾವೇರಿ ತಾಲೂಕಿನ ಅಗಡಿ ಗ್ರಾಮದ ನಿವಾಸಿ ಆಗಿರೋ ಕಾನಸ್ಟೇಬಲ್ ಮಸ್ತಾಕ ಕ್ವಾಟಿ ನಾಯಕ ಬೆಂಗಳೂರಿನ ಸಿಟಿ ರಿಸರ್ವ್ ಪೊಲೀಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಬುಧವಾರ ತಡರಾತ್ರಿ ಅಗಡಿ ಗ್ರಾಮದ ಮನೆಯಿಂದ ವಶಕ್ಕೆ ಪಡೆದುಕೊಂಡು ಹೋಗಿ …

Read More »

ರಾಜ್ಯದ ಎಲ್ಲ ಅಂಗಡಿಗಳ ನಾಮಫ‌ಲಕ ಕನ್ನಡದಲ್ಲೇ ಇರಬೇಕು : ನಾಗಾಭರಣ

ಬೆಂಗಳೂರು: ರಾಜ್ಯದ ಎಲ್ಲ ಕಡೆಗಳಲ್ಲಿ ಅಂಗಡಿ-ಮುಂಗಟ್ಟುಗಳ ನಾಮಫ‌ಲಕಗಳು ಕಡ್ಡಾಯವಾಗಿ ಕನ್ನದಲ್ಲಿ ಇರಲೇಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಹೇಳಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮೂರು ದಿನಗಳ ಶುದ್ಧ ಕನ್ನಡ ನಾಮಫ‌ಲಕ ಅಭಿಯಾನಕ್ಕೆ ಮಂಗಳವಾರ ಕಮರ್ಷಿಯಲ್‌ ಸ್ಟ್ರೀಟ್‌ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಅಂಗಡಿ, ಮಾಲ್‌ಗ‌ಳಲ್ಲಿ ಕನ್ನಡ ಮಾಯಾವಾಗುತ್ತಿದೆ. ಕನ್ನಡ ಅಕ್ಷರದ ಬದಲಾಗಿ ಬೇರೆ-ಬೇರೆ ಭಾಷೆಯ ಅಕ್ಷರಗಳು ದೊಡ್ಡದಾಗಿ ಕಾಣಿಸುತ್ತಿವೆ.ಇದನ್ನು ಯಾವುದೇ ಕಾರಣಕ್ಕೂ …

Read More »

ಗಣರಾಜ್ಯೋತ್ಸವಕ್ಕೆ ಹೊಸ ಪೋಸ್ಟರ್‌ ಮೂಲಕ ರಾಬರ್ಟ್‌ ವಿಶ್‌

ರಾಬರ್ಟ್‌’ ಚಿತ್ರದ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದ್ದು, ಮಾ.11ರಂದು ಚಿತ್ರ ಅದ್ದೂರಿಯಾಗಿ ತೆರೆ ಕಾಣುತ್ತಿದೆ. ಇದರ ನಡುವೆಯೇ ಚಿತ್ರತಂಡ ಭರದಿಂದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ “ರಾಬರ್ಟ್‌’ ಚಿತ್ರದ ಹೊಸ ಪೋಸ್ಟರ್‌ನ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ವಿಶ್ವಾದ್ಯಂತ ನೆಲೆಸಿರುವ ಎಲ್ಲ ಭಾರತೀಯರಿಗೆ ಗಣರಾಜ್ಯೋತ್ಸವದ ಶುಭಾಶಯಗಳು. ಮಾರ್ಚ್‌ 11ರಂದು ಚಿತ್ರಮಂದಿರಕ್ಕೆ ಬರಲು “ರಾಬರ್ಟ್‌’ ಸಿನಿಮಾ ಸಿದ್ಧವಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ಎಂದಿನಂತೆ …

Read More »

ಸೌಜನ್ಯ ಕೊಲೆ ಪ್ರಕರಣ: ಸಿಬಿಐ ಮರು ತನಿಖೆಗೆ ಹೈಕೋರ್ಟ್‌ ನಕಾರ

ಬೆಂಗಳೂರು: ಧರ್ಮಸ್ಥಳದ ಉಜಿರೆಯ ಎಸ್‌ಡಿಎಂ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐಗೆ ಮರು ತನಿಖೆಗೆ ವಹಿಸಲು ಹೈಕೋರ್ಟ್‌ ನಿರಾಕರಿಸಿದೆ. ಪ್ರಕರಣವನ್ನು ಸಿಬಿಐಗೆ ಮರು ತನಿಖೆಗೆ ವಹಿಸಬೇಕು ಎಂದು ಕೋರಿ ಸೌಜನ್ಯ ತಂದೆ ಚಂದಪ್ಪಗೌಡ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಕೆ. ಸೋಮಶೇಖರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಆದೇಶ ಹೊರಡಿಸಿದೆ. ಈಗಾಗಲೇ ಪ್ರಕರಣವನ್ನು ಸ್ಥಳೀಯ ಪೊಲೀಸರು, ಸಿಐಡಿ ಬಳಿಕ ಸಿಬಿಐ ತನಿಖೆ ನಡೆಸಿದೆ. ಸಂತೋಷ್‌ ರಾವ್‌ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ …

Read More »

5A ಕಾಲುವೆ ಅನುಷ್ಠಾನ ಜಾರಿಗಾಗಿ ಮಾಜಿ ಶಾಸಕರಿಂದ ಆಣೆ ಪ್ರಮಾಣ ಪ್ರಹಸನ

ಮಸ್ಕಿ (ರಾಯಚೂರು): ಎನ್‌ಆರ್‌ಬಿಸಿಯ 5A ಕಾಲುವೆ ಅನುಷ್ಠಾನ ಸಾಧ್ಯವಿದ್ದರೆ ಎಲ್ಲ ಪ್ರಯತ್ನಗಳಿಗೂ ನಾವು ಬದ್ಧವಿದ್ದು, ಯಾವ ದೇವರ ಮೇಲೆ ಬೇಕಾದರೂ ಪ್ರಮಾಣ ಮಾಡುವುದಾಗಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ತಿಳಿಸಿದರು. ಯೋಜನೆ ಜಾರಿ ಬೇಡಿಕೆಯೊಂದಿಗೆ ಕಳೆದ 69 ದಿನಗಳಿಂದ ರೈತರು ಧರಣಿ ನಡೆಸಿದ ಸ್ಥಳಕ್ಕೆ ಭೇಟಿ ನೀಡಿದ ಅವರು, ಯೋಜನೆ ಜಾರಿಗೆ ನಾವು ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಬೇಕಾದರೆ ಇನ್ನೂ ಯಾರನ್ನಾದರೂ ಭೇಟಿ ಮಾಡಬೇಕಿದ್ದರೆ ಕರೆಯಿರಿ …

Read More »

ಬಿ.ಸಿ.ಪಾಟೀಲ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ : ಉಗ್ರಪ್ಪ ಆರೋಪ

ಬೆಂಗಳೂರು: ರೈತರನ್ನು ಭಯೋತ್ಪಾದಕರು ಎಂದು ಹೇಳಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಂಸದ ಉಗ್ರಪ್ಪ ಹಾಗೂ ವಿಧಾನಪರಿಷತ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಯಾವಾಗ ಭಯೋತ್ಪಾದಕರಾದರು. ಕೃಷಿ ಸಚಿವರಾಗಿ ಈ ರೀತಿಯ ಮಾತು ಆಡಬಹುದೇ ಎಂದು ಪ್ರಶ್ನಿಸಿದರು. ಬಿ.ಸಿ.ಪಾಟೀಲ್‌ ರೈತರ ಕ್ಷಮೆಯಾಚಿಸಬೇಕು. ಸಂಪುಟದಿಂದ ಅವರನ್ನು ಕೈ ಬಿಡಬೇಕು. ರೈತ ಸಮುದಾಯಕ್ಕೆ ಅವರು ಅವಮಾನ ಮಾಡಿದ್ದಾರೆ …

Read More »