Breaking News

ತಾನೇ ಸಾಕಿದ್ದ ಹಸುವಿನಿಂದ ಬಾಲಕ ಪ್ರಾಣಬಿಟ್ಟಿದ್ದಾನೆ

Spread the love

ಮಂಡ್ಯ: ತಾನೇ ಸಾಕಿದ್ದ ಹಸು ಮುಂದೊಂದ್ದು ದಿನ ತನ್ನನ್ನೇ ಕೊಲ್ಲಬಹುದು ಎಂದು ಆ ಬಾಲಕ ಕನಸ್ಸಿನಲ್ಲೂ ಯೋಚಿಸಿರಲಿಲ್ಲ. ಆದರೆ ವಿಧಿಲಿಖಿತ ಅದೇ ಆಗಿತ್ತು. ಆ ಹಸುವಿನಿಂದಲೇ ಬಾಲಕ ಪ್ರಾಣಬಿಟ್ಟಿದ್ದಾನೆ.

ಇಂತಹದ್ದೊಂದು ಮನಕಲಕುವ ಘಟನೆ ಮಳವಳ್ಳಿ ತಾಲೂಕಿನ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಯತ್ತಂಬಾಡಿ ಗ್ರಾಮದಲ್ಲಿ ಸಂಭವಿಸಿದ್ದು, 13 ವರ್ಷದ ಬಾಲಕ ಮಾದೇಶ್ (13) ಬಲಿಯಾಗಿದ್ದಾನೆ. ಸೋಮವಾರ ರಾತ್ರಿ ಹಸುವಿಗೆ ಹುಲ್ಲು ಹಾಕಲು ಹೋಗಿದ್ದ ಮಾದೇಶ್​ಗೆ ಕೊಂಬಿನಿಂದ ತಿವಿದಿದೆ. ಮಾರಣಾಂತಿಕವಾಗಿ ಗಾಯಗೊಂಡ ಬಾಲಕ ತೀವ್ರ ರಕ್ತಸ್ರಾವವಾಗಿ ಅಸುನೀಗಿದ್ದಾನೆ.ಮನೆಯಲ್ಲೇ ಸಾಕಿದ್ದ ಹಸುಗೆ ಮನೆಮಗ ಬಲಿಯಾಗಿರುವುದು ಇಡೀ ಕುಟುಂಬವನ್ನು ಶೋಕದಲ್ಲಿ ಮುಳುಗಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.


Spread the love

About Laxminews 24x7

Check Also

ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಸೈಬರ್ ತರಬೇತಿ

Spread the loveಬೆಂಗಳೂರು : ಸಿಐಡಿ ಕರ್ನಾಟಕ, ಇನ್ಫೋಸಿಸ್ ಫೌಂಡೇಶನ್ ಆ್ಯಂಡ್ ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿಎಸ್‌ಸಿಐ) ದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ