Breaking News

ವಿರಾಜಪೇಟೆ | ಹೇರೂರು ಎಸ್ಟೇಟ್ ಬಳಿ ಹುಲಿ ಪ್ರತ್ಯಕ್ಷ – ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಚ್ಚರಿಕೆ

Spread the love

ಮಡಿಕೇರಿ: ವಿರಾಜಪೇಟೆ  ತಾಲೂಕಿನ ಘಟ್ಟತಳ ಹೇರೂರು ಎಸ್ಟೇಟ್ ಬಳಿ ಹುಲಿಯೊಂದು ಕಾಣಿಸಿಕೊಂಡಿದೆ. ಸಿದ್ದಾಪುರ – ಮೈಸೂರು ಮುಖ್ಯ ರಸ್ತೆಯ ಬದಿಯಲ್ಲಿ ಹುಲಿ  ಓಡಾಡುವ ದೃಶ್ಯ ವಾಹನ ಸವಾರರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಹುಲಿ, ಬಳಿಕ ಸಮೀಪದಲ್ಲಿರುವ ಟಾಟಾ ಎಸ್ಟೇಟ್ ಕಡೆಗೆ ತೆರಳಿದೆ ಎಂದು ತಿಳಿದುಬಂದಿದೆ. ಈ ಭಾಗದಲ್ಲಿ ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಕಾಫಿ ತೋಟದ ಕಾರ್ಮಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಕಾಫಿ ತೋಟಗಳಿಗೆ ಒಂಟಿಯಾಗಿ ತೆರಳದಂತೆ ಮನವಿ ಮಾಡಲಾಗಿದ್ದು, ರಾತ್ರಿ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಓಡಾಡದಂತೆಯೂ ಎಚ್ಚರಿಸಲಾಗಿದೆ.

ಹುಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಅದರ ಸಮೀಪಕ್ಕೆ ತೆರಳುವುದು, ಹಿಂಬಾಲಿಸುವುದು ಅಥವಾ ಪ್ರಚೋದಿಸುವಂತಹ ಕೆಲಸಗಳನ್ನು ಮಾಡಬಾರದು ಎಂದು ಸೂಚಿಸಲಾಗಿದೆ. ಹುಲಿ ಕಂಡುಬಂದಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.


Spread the love

About Laxminews 24x7

Check Also

ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರಲು ಧನಂಜಯನ ಆಯ್ಕೆ ಬಹುತೇಕ ಖಚಿತ

Spread the loveಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಅನ್ನೋ ಕುತೂಹಲಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ