Breaking News

ಅಪ್ಪಟ ಸುಳ್ಳುಗಾರ ಮಿಸ್ಟರ್ ಬಿದರಿ, ಜಪಾನ್‌ನಿಂದ ಬಂದು ಉತ್ತರ ಕೊಡ್ತೀನಿ: ಎಂ.ಬಿ. ಪಾಟೀಲ್

Spread the love

ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ  ವಿರುದ್ಧ ಸಚಿವ ಎಂ.ಬಿ. ಪಾಟೀಲ್  ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ವಿರುದ್ಧ ಬಿದರಿ ಮಾಡಿರುವ ಆರೋಪಗಳಿಗೆ ಟ್ವೀಟ್‌ ಮೂಲಕ ಖಾರವಾಗಿ ಪ್ರತಿಕ್ರಿಯಿಸಿರುವ ಪಾಟೀಲ್, ಅಪ್ಪಟ ಸುಳ್ಳುಗಾರ ಮಿಸ್ಟರ್ ಬಿದರಿ, ನಾನು ಜಪಾನ್ ಪ್ರವಾಸ ಮುಗಿಸಿ ಬಂದ ನಂತರ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ನೇರ ಸವಾಲು ಹಾಕಿದ್ದಾರೆ.

ಬಸವಣ್ಣನವರನ್ನು ಹೀಯಾಳಿಸಿದ ವ್ಯಕ್ತಿಯ ಜೊತೆ ಕೈಜೋಡಿಸಿರುವ ಇವರು, ವೀರಶೈವ ಮಹಾಸಭೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳುವ ಕನಿಷ್ಠ ಸೌಜನ್ಯವೂ ಇಲ್ಲದೆ ಅಸಂಬದ್ಧವಾಗಿ ಮಾತನಾಡುತ್ತಾರೆ ಎಂದು ಎಂ.ಬಿ. ಪಾಟೀಲ್ ಕಿಡಿಕಾರಿದ್ದಾರೆ. ಮೂರ್ನಾಲ್ಕು ಪಕ್ಷಗಳನ್ನು ಬದಲಾಯಿಸಿ, ಚುನಾವಣೆಗೆ ನಿಂತು ಠೇವಣಿ ಕಳೆದುಕೊಂಡಿರುವ ಇವರಿಂದ ನಮ್ಮ ಸಮಾಜಕ್ಕೆ ಉಪದೇಶ ಬೇಕಿಲ್ಲ ಎಂದಿದ್ದಾರೆ.

ನಮ್ಮ ಪೂರ್ವಜರಾದ ಸಿರಸಂಗಿ ಲಿಂಗರಾಜರು ತಮ್ಮ ಸಮಸ್ತ ಆಸ್ತಿಯನ್ನು ಶಿಕ್ಷಣಕ್ಕಾಗಿ ದಾನ ನೀಡಿದವರು. ಅದೇ ಲಿಂಗರಾಜ ಫಂಡ್ ಮೂಲಕ ಶಿಕ್ಷಣ ಪಡೆದ ಬಿದರಿಯವರ ಎಲ್ಲಾ ದಾನಗಳೂ ನಮಗೆ ಗೊತ್ತಿವೆ. ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಕುರಿತು ನಾನು ಮಾಡಿರುವ ಕೆಲಸವನ್ನು ಇಡೀ ನಾಡೇ ನೋಡುತ್ತಿದೆ, ಇವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಗಂಭೀರ ಎಚ್ಚರಿಕೆ ನೀಡಿರುವ ಸಚಿವರು, ತಾನು ಸತ್ಯವಂತ, ಬಸವಣ್ಣನ ಅನುಯಾಯಿ ಅಂತ ಬೆನ್ನು ತಟ್ಟಿಕೊಳ್ಳುವ ಬಿದರಿ, ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ಮಾಡಿರುವ ಅನಾಚಾರ, ಅನೈತಿಕ ಅವಾಂತರ ಮತ್ತು ಅಕ್ರಮಗಳನ್ನು ಮುಂದಿನ ದಿನಗಳಲ್ಲಿ ಜನರ ಮುಂದೆ ಇಡುತ್ತೇನೆ. ಅಷ್ಟೇ ಅಲ್ಲ, ಸಿದ್ದಗಂಗಾ ಹಿರಿಯ ಶ್ರೀಗಳ ವಿಷಯದಲ್ಲಿ ನಡೆದ ಷಡ್ಯಂತ್ರದ ಸತ್ಯದರ್ಶನವನ್ನೂ ಮಾಡಿಸುತ್ತೇನೆ ಎಂದಿದ್ದಾರೆ.

ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿಸುವಂತೆ ನಾನು ಬಿದರಿ ಆಫೀಸಿಗೆ ಹೋಗಿದ್ದೆ ಅನ್ನೋದು ಅಪ್ಪಟ ಕಟ್ಟುಕಥೆ, ಹಸಿಸುಳ್ಳು. ನಾನು ಯಾರ ಮನೆಯ ಬಾಗಿಲಿಗೂ ಹೋಗಿ ಸ್ವಾಭಿಮಾನ ಬಿಟ್ಟುಕೊಟ್ಟವನಲ್ಲ, ಆತ್ಮಗೌರವ ಬದಿಗಿಟ್ಟು ತಲೆತಗ್ಗಿಸುವ ಪ್ರಶ್ನೆಯೇ ಇಲ್ಲ ಎಂದು ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.


Spread the love

About Laxminews 24x7

Check Also

ಅಪ್ರಾಪ್ತೆ ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದವ ಜೈಲಿಗೆ

Spread the loveಕೋಲಾರ: ಅಪ್ರಾಪ್ತೆಯನ್ನು ಮದುವೆಯಾಗಿ 3 ಮಕ್ಕಳ ತಂದೆಯಾಗಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ  ಜಿಲ್ಲೆ ಕೆಜಿಎಫ್ ತಾಲ್ಲೂಕು ಬೇತಮಂಗಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ