Breaking News

ರಾಂಚಿಯಲ್ಲಿ ರನ್‌ ಮಳೆ – ಭಾರತಕ್ಕೆ ಹೀನಾಯ ಸೋಲು; ವಿಂಡೀಸ್‌ಗೆ 6 ವಿಕೆಟ್‌ಗಳ ಭರ್ಜರಿ ಜಯ

Spread the love

ರಾಂಚಿ: ಆರಂಭದಲ್ಲಿ ಪ್ರಮುಖ ವಿಕೆಟ್‌ ಕಳೆದುಕೊಂಡರೂ ಪುಟಿದೆದ್ದ ವಿಂಡೀಸ್‌ ತಂಡ ಸಿಕ್ಸರ್‌ – ಬೌಂಡರಿಗಳ ಮಳೆ ಸುರಿಸಿ ಭಾರತದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ನಾಯಕ ಶಾಯ್‌ ಹೋಪ್‌ ಮತ್ತೊಮ್ಮೆ ಟೀಂ ಇಂಡಿಯಾ ವಿರುದ್ಧ ಅಜೇಯ ಶತಕ ಸಿಡಿಸುವ ಮೂಲಕ ವಿಂಡೀಸ್‌ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತ ಕಳಪೆ ಬೌಲಿಂಗ್‌ನಿಂದ ರನ್‌ ತಡೆಯುವಲ್ಲಿ ವಿಫಲವಾದ ಟೀಂ ಇಂಡಿಯಾ, ಎದುರಾಳಿಗಳ ಅಬ್ಬರಕ್ಕೆ ಕಡಿವಾಣ ಹಾಕಲಾಗದೆ ಹೀನಾಯ ಸೋಲು ಕಂಡಿದೆ.

ಜೆಎಸ್‌ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 249 ರನ್‌ ಬಾರಿಸಿತ್ತು. ಈ ಗುರಿ ಬೆನ್ನಟ್ಟಿದ ವಿಂಡೀಸ್‌ ಕೇವಲ 18.3 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ 252 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಸಿಕ್ಸರ್‌ ಬೌಂಡರಿಗಳ ಸುರಿಮಳೆ
ಸಿಕ್ಸರ್‌ ಬೌಂಡರಿ ಸುರಿಮಳೆಯ ಈ ಆಟದಲ್ಲಿ ಒಟ್ಟು 33 ಸಿಕ್ಸರ್‌, 44 ಬೌಂಡರಿಗಳು ಸಿಡಿದವು. ಟೀಂ ಇಂಡಿಯಾ ಪರ 13 ಸಿಕ್ಸರ್‌, 23 ಬೌಂಡರಿ ದಾಖಲಾದರೆ, ವಿಂಡೀಸ್‌ ಪರ ಬರೋಬ್ಬರಿ 20 ಸಿಕ್ಸರ್‌ ಹಾಗೂ 21 ಬೌಂಡರಿಗಳು ಸಿಡಿದವು.

ವಿಂಡೀಸ್‌ಗೆ ಗೆಲುವಿನ ಹೋಪ್‌
ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ವಿಂಡೀಸ್‌ ತಂಡ ಮೊದಲ ಓವರ್‌ನಲ್ಲೇ 5 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 53 ರನ್‌ಗಳಿದ್ದಾಗ ರೋವ್ಮನ್‌ ಪೋವೆಲ್‌ ಅವರ ವಿಕೆಟ್‌ (3ನೇ) ಕಳೆದುಕೊಂಡಿತು. ಇದರಿಂದ ಗೆಲವು ಭಾರತದತ್ತ ವಾಲಿದೆ ಅಂದುಕೊಂಡಿದ್ದರು ಫ್ಯಾನ್ಸ್.‌ ಆದ್ರೆ 4 ವಿಕೆಟ್‌ನಿಂದ ಪಂದ್ಯದ ದಿಕ್ಕೇ ಬದಲಾಯಿತು.

ವಿಂಡೀಸ್‌ಗೆ ಹೋಪ್‌ ಟಾನಿಕ್‌
ಸಂಕಷ್ಟದಲ್ಲಿದ್ದ ವಿಂಡೀಸ್‌ಗೆ ನಾಯಕ ಶಾಯ್‌ ಹೋಪ್‌ ಹಾಗೂ ಶರ್ಫೇನ್ ರುದರ್‌ಫೋರ್ಡ್ ಆಸೆರೆಯಾದರು. 4ನೇ ವಿಕೆಟ್‌ಗೆ ಈ ಜೋಡಿ 54 ಎಸೆತಗಳಲ್ಲಿ ಬರೋಬ್ಬರಿ 120 ರನ್‌ ಜೊತೆಯಾಟ ನೀಡಿತು. ಇನ್ನೂ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ ರುದರ್‌ಫೋರ್ಡ್ 37 ಎಸೆತಗಳಲ್ಲಿ 84 ರನ್‌ ಚಚ್ಚಿ ಔಟಾದರು. ಬಳಿಕ ಹೋಪ್‌ ಅಬ್ಬರಿಸಲು ಶುರು ಮಾಡಿದ್ರು. 45 ಎಸೆತಗಳಲ್ಲಿ ಹೋಪ್‌ 9 ಸಿಕ್ಸರ್‌, 6 ಬೌಂಡರಿಗಳೊಂದಿಗೆ ಅಜೇಯ 102 ರನ್‌ ಚಚ್ಚಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಇದರೊಂದಿಗೆ ರೊಮಾರಿಯೋ ಶೆಫರ್ಡ್‌ 13 ಎಸೆತಗಳಲ್ಲಿ ಸ್ಫೋಟಕ 34 ರನ್‌, ಪೋವೆಲ್‌ 24 ರನ್‌ ಕೊಡುಗೆ ನೀಡಿದರು.

ಟೀಂ ಇಂಡಿಯಾ ಪರ ಮಯಾಂಕ್‌ ಯಾದವ್‌ 3 ವಿಕೆಟ್‌, ಕುಲ್ದೀಪ್‌ ಯಾದವ್‌ 1 ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್‌ 82 ರನ್‌, ಇಶಾನ್‌ ಕಿಶನ್‌ 43 ರನ್‌, ತಿಲಕ್‌ ವರ್ಮಾ 44 ರನ್‌, ಶ್ರೇಯಸ್‌ ಅಯ್ಯರ್‌ 40 ರನ್‌, ಅಭಿಷೇಕ್‌ ಶರ್ಮಾ 20 ರನ್‌, ಶಿವಂ ದುಬೆ 7 ರನ್‌ ಗಳಿಸಿದರು.

ವಿಂಡೀಸ್‌ ಪರ ರೋಸ್ಟನ್‌ ಚೇಸ್‌ 3 ವಿಕೆಟ್‌, ಶಾಮರ್‌ ಸ್ಪ್ರಿಂಗರ್‌ 2 ವಿಕೆಟ್‌ ಕಿತ್ತರು.


Spread the love

About Laxminews 24x7

Check Also

ಬಿಜೆಪಿಯ ಬಿಎಲ್ಎಗಳ ಮೇಲೆ ಎಫ್ಐಆರ್‌; ಹೈಕೋರ್ಟ್‌ನಿಂದ ಮಧ್ಯಂತರ ತಡೆ

Spread the loveಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಸಮಗ್ರ ಪರಿಷ್ಕರಣೆ  ಪ್ರಕ್ರಿಯೆಯಲ್ಲಿ, ಫಾರ್ಮ್ 7 ಸಲ್ಲಿಕೆಗೆ ಸಂಬಂಧಿಸಿದಂತೆ ಬಿಜೆಪಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ