Breaking News

ಒಂದು ಕಡೆ ಪುಟಿನ್‌, ಮತ್ತೊಂದು ಕಡೆ ಪೆಜೆಶ್ಕಿಯಾನ್ ಕೈಹಿಡಿದು ಬಂದ ಮೋದಿ – ವಿಶ್ವದ ಗಮನ ಸೆಳೆದ ಫೋಟೋ

Spread the love

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನವದೆಹಲಿಯಲ್ಲಿ ನಡೆದ ಬ್ರಿಕ್ಸ್‌  ಬಿಸಿನೆಸ್ ಫೋರಂನ ರೆಡ್‌ಕಾರ್ಪೆಟ್‌ ಮೇಲೆ ವಿಶ್ವ ನಾಯಕರೊಂದಿಗೆ ಹೆಜ್ಜೆ ಹಾಕಿದ ದೃಶ್ಯ ಗಮನ ಸೆಳೆಯಿತು.

ಹೌದು. ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್‌ ಹಾಗೂ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಸೇರಿದಂತೆ ಹಲವು ಬ್ರಿಕ್ಸ್‌ ನಾಯಕರೊಂದಿಗೆ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದರು. ನಾಯಕರು ಒಟ್ಟಿಗೆ ಸಾಗುವ ವೇಳೆ ಪ್ರಧಾನಿ ಮೋದಿ, ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ಕೈ ಹಿಡಿದುಕೊಂಡು ನಡೆದ ದೃಶ್ಯ ಗಮನ ಸೆಳೆಯಿತು. ಪ್ರಸ್ತುತ ಭೌಗೋಳಿಕ-ರಾಜಕೀಯ ಪರಿಸ್ಥಿತಿಯಲ್ಲಿ BRICS ಸದಸ್ಯ ರಾಷ್ಟ್ರಗಳ ನಡುವಿನ ನಿಕಟ ಬಾಂಧವ್ಯ ಮತ್ತು ಸಹಕಾರವನ್ನ ಈ ಚಿತ್ರ ಪ್ರತಿಬಿಂಬಿಸುವಂತಿತ್ತು.

ಪ್ರಸ್ತುತ ಬ್ರಿಕ್ಸ್‌ ಒಕ್ಕೂಟದಲ್ಲಿ ಬ್ರೆಜಿಲ್‌, ಚೀನಾ, ಈಜಿಪ್ಟ್‌, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಇರಾನ್‌, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಮತ್ತು ಯುಎಇ ಸೇರಿದಂತೆ 11 ರಾಷ್ಟ್ರಗಳಿವೆ.

ಫೋಟೋ ಗಮನ ಸೆಳೆದಿದ್ದೇಕೆ?
ಪ್ರಸ್ತುತ ಜಾಗತಿಕ ರಾಜಕೀಯ ಪರಿಸ್ಥಿತಿ ಗಮನಿಸಿದ್ರೆ, ಈ ಚಿತ್ರ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಇರಾನ್‌ ಸಂಘರ್ಷದ ಕೇಂದ್ರಬಿಂದುವಾಗಿದ್ದು, ಇದರಿಂದ ಇಂಧನ ಪೂರೈಕೆ ಮತ್ತು ಸಮುದ್ರ ಮಾರ್ಗದ ವ್ಯಾಪಾರದ ಮೇಲೆ ಪರಿಣಾಮ ಉಂಟಾಗಿದೆ. ಮತ್ತೊಂದೆಡೆ, ಉಕ್ರೇನ್‌ ಯುದ್ಧದ ಹಿನ್ನೆಲೆ ರಷ್ಯಾ ಪಾಶ್ಚಿಮಾತ್ಯ ರಾಷ್ಟ್ರಗಳ ವ್ಯಾಪಕ ನಿರ್ಬಂಧಗಳನ್ನ ಎದುರಿಸುತ್ತಿದೆ. ಇಂತಹ ಸಂಕೀರ್ಣ ಭೌಗೋಳಿಕ-ರಾಜಕೀಯ ಪರಿಸ್ಥಿತಿಯ ನಡುವೆಯೂ ಭಾರತವು ಇರಾನ್‌ ಮತ್ತು ರಷ್ಯಾ ಎರಡೂ ರಾಷ್ಟ್ರಗಳೊಂದಿಗೆ ತನ್ನ ರಾಜತಾಂತ್ರಿಕ ಸಂಪರ್ಕ ಮುಕ್ತವಾಗಿರಿಸಿಕೊಂಡಿದೆ. ಇದೇ ವೇಳೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ತನ್ನ ಕಾರ್ಯತಂತ್ರದ ಪಾಲುದಾರಿಕೆಯನ್ನ ಭಾರತ ಮತ್ತಷ್ಟು ಬಲಪಡಿಸುತ್ತಿದೆ.

ಹೀಗಾಗಿ ಪುಟಿನ್‌ ಮತ್ತು ಪೆಜೆಶ್ಕಿಯನ್‌ ಅವರೊಂದಿಗೆ ಪ್ರಧಾನಿ ಮೋದಿ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವು ಜಾಗತಿಕ ದಕ್ಷಿಣದ ರಾಷ್ಟ್ರಗಳೊಂದಿಗೆ ಭಾರತದ ಬಾಂಧವ್ಯ ಹಾಗೂ ಸಮತೋಲಿತ ವಿದೇಶಾಂಗ ನೀತಿಯ ಸಂದೇಶವನ್ನು ಸಾರುವಂತಿದೆ.


Spread the love

About Laxminews 24x7

Check Also

8,000 ಕ್ಯೂಸೆಕ್ ನೀರು ಹರಿಯುತ್ತಿದ್ರೂ 6,000 ಕ್ಯೂ. ನೀರು ಬಿಡ್ತಿಲ್ಲ ಎಂದ ಚಲುವರಾಯಸ್ವಾಮಿ

Spread the loveಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ಪ್ರಸ್ತುತ 8 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಯುತ್ತಿದ್ದರೂ, 6 ಸಾವಿರ ಕ್ಯೂಸೆಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ