Breaking News

ಶೆಡ್ ಬಳಿ ದರ್ಶನ್, ಪವಿತ್ರಾ ಗೌಡ ಬಂದಿರಲಿಲ್ಲ – ಉಲ್ಟಾ ಹೊಡೆದ ಐ ವಿಟ್ನೆಸ್‌ ಪುನೀತ್

Spread the love

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  ಪ್ರತ್ಯಕ್ಷ ಸಾಕ್ಷಿ ಪುನೀತ್‌ ಉಲ್ಟಾ ಹೊಡೆದಿದ್ದು, ಕುತೂಹಲ ಕೆರಳಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪ್ರಮುಖ ಸಾಕ್ಷಿಗಳಾದ ಕಿರಣ್ ಹಾಗೂ ಪುನೀತ್‌ ಅವರಿಂದು ಸಾಕ್ಷಿ ನುಡಿಯುವಂತೆ 59ನೇ ಸೆಷನ್ಸ್ ಕೋರ್ಟ್ ಸಮನ್ಸ್‌ ನೀಡಿತ್ತು. ನಿನ್ನೆ ಗೈರಾಗಿದ್ದ ಪುನೀತ್‌ ವಿರುದ್ಧ ಕೋರ್ಟ್‌ ಎನ್‌ಬಿಡಬ್ಲ್ಯೂ ಜಾರಿ ಮಾಡಿತ್ತು.

ಇಂದು 59ನೇ ಸಿಸಿಹೆಚ್‌ ಕೋರ್ಟ್‌ಗೆ ಹಾಜರಾಗಿ ಸಾಕ್ಷಿ ನುಡಿದ ಪುನೀತ್‌ ಉಲ್ಟಾ ಹೊಡೆದಿದ್ದಾನೆ. ಐ ವಿಟ್ನೇಸ್‌ ಆಗಿರುವ ಪುನೀತ್‌, ಶೆಡ್‌ ಬಳಿ ದರ್ಶನ್‌  ಮತ್ತು ಪವಿತ್ರಾಗೌಡ ಬಂದೇ ಇರಲಿಲ್ಲ. ಯಾವುದೇ ಆರೋಪಿಗಳೂ ಬಂದಿರಲಿಲ್ಲ. ನಾನು ಘಟನಾ ಸ್ಥಳದಲ್ಲಿ ಅವರನ್ನು ನೋಡಿಲ್ಲ ಅಂತಾ ಉಲ್ಟಾ ಹೊಡೆದಿದ್ದು, ತನ್ನ ಹಿಂದಿನ ಹೇಳಿಕೆಗೆ ವಿರುದ್ಧವಾಗಿ ಸಾಕ್ಷಿ ನುಡಿದಿದ್ದಾನೆ.

ಇದೇ ಪುನೀತ್‌ ಈ ಹಿಂದೆ ಜಡ್ಜ್ ಮುಂದೆ 164ರ ಅಡಿಯಲ್ಲಿ ಹೇಳಿಕೆ ನೀಡಿದ್ದಾಗ, ಇದಕ್ಕೆ ವಿರುದ್ಧವಾಗಿ ಹೇಳಿದ್ದ. ಈ ಹಿನ್ನೆಲೆ ಪುನೀತ್‌ ಶಾಕ್ಷಿಯನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲು ಎಸ್‌ಪಿಪಿ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ವಿಷಗಾಳಿ ಸೇವಿಸಿ ಮೂವರು ಮೀನುಗಾರರ ಸಾವು – ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

Spread the loveಕಾರವಾರ: ಗೋಕರ್ಣ  ತದಡಿ ಮೀನುಗಾರಿಕಾ ಬಂದರಿನಲ್ಲಿ ಮೀನಿನ ತ್ಯಾಜ್ಯ ತೆರವುಗೊಳಿಸುವ ವೇಳೆ ವಿಷಗಾಳಿ ಸೇವಿಸಿ ಮೂವರು ಮೀನುಗಾರರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ