ಹ್ಯಾಟ್ರಿಕ್ ಹೀರೋ ನಟ ಶಿವರಾಜುಕುಮಾರ್ ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ತಿದ್ದುಪಡಿ ಮಾಡುವಂತೆ ಕೋರಿ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಅಪರ ಜಿಲ್ಲಾ ಚುನಾವಣಾಧಿಕಾರಿ ಕಾಂತರಾಜ್ ಅವರು, ನಟ ಶಿವರಾಜ್‌ಕುಮಾರ್ ಅವರಿಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ, ಬದಲಾಗಿ ಅವರ ಪಾಸ್‌ಪೋರ್ಟ್‌ನಲ್ಲಿರುವಂತೆ `ಪುಟ್ಟಸ್ವಾಮಿ ಶಿವರಾಜ್ ಕುಮಾರ್’ ಎಂದು ಮತದಾರರ ಪಟ್ಟಿಯಲ್ಲೂ ಹೆಸರು ತಿದ್ದುಪಡಿ ಮಾಡುವಂತೆ ಅವರೇ ಸ್ವಯಂಪ್ರೇರಿತರಾಗಿ ಮನವಿ ಮಾಡಿಕೊಂಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಈ ಬೆಳವಣಿಗೆಯ ಭಾಗವಾಗಿ ಬೆಂಗಳೂರು ನಗರ ಡಿಸಿ ಕಾಂತರಾಜ್ ಅವರು ಖುದ್ದು ನಟ ಶಿವರಾಜ್‌ಕುಮಾರ್ ಅವರ ಮನೆಗೆ ಭೇಟಿ ನೀಡಿ, ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಟನ ಮನವಿಯ ಮೇರೆಗೆ ಚುನಾವಣಾಧಿಕಾರಿಗಳು ಈಗ ಫಾರಂ 8ರ ಅಡಿ ಅವರ ಹೆಸರನ್ನು ಅಧಿಕೃತವಾಗಿ ತಿದ್ದುಪಡಿ ಮಾಡಲಿದ್ದಾರೆ.
Laxmi News 24×7