Breaking News

ಪಿಂಕ್ ಲೈನ್ ಲೋಕಾರ್ಪಣೆಗೆ ಬೆಂಗಳೂರಿಗೆ ಮೋದಿ: ಡಿಕೆಶಿ

Spread the love

ಬೆಂಗಳೂರು: ನಮ್ಮ ಮೆಟ್ರೋ  ಪ್ರಯಾಣಿಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಪಿಂಕ್ ಲೈನ್ ಮೆಟ್ರೋ ಇದೇ ನವೆಂಬರ್‌ನಲ್ಲಿ ಲೋಕಾರ್ಪಣೆಯಾಗಲಿದ್ದು,  ಇದಕ್ಕಾಗಿ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ನಮ್ಮ ಮೆಟ್ರೋ ಉದ್ಘಾಟಿಸಿದ್ದ ಮೋದಿ ಇದೀಗ ಗುಲಾಬಿ ಮಾರ್ಗದ ಲೋಕಾರ್ಪಣೆಗೂ ಬೆಂಗಳೂರಿಗೆ ಬರ್ತಿದ್ದಾರೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮೆಟ್ರೋ ಪಿಆರ್‌ಒ ಯಶವಂತ್ ಚೌವ್ಹಾಣ್ ಮಾತನಾಡಿ, ಬಿಎಂಆರ್‌ಸಿಎಲ್‌ನಿಂದ ಪಿಂಕ್ ಲೈನ್ ಉದ್ಘಾಟನೆಗೆ ಯಾವುದೇ ಅಡೆತಡೆ ಇಲ್ಲ ಎಂದು ಹೇಳಿದ್ದಾರೆ.

ಪಿಂಕ್ ಲೈನ್‌ನ ಎಲಿವೇಟೆಡ್ ಮಾರ್ಗದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ನಿಲ್ದಾಣಗಳು ಕಾರ್ಯಾಚರಣೆಗೆ ಸಜ್ಜಾಗಿವೆ. ಪಿಂಕ್ ಲೈನ್ ಆರಂಭವಾದರೆ ನಗರದ ದಕ್ಷಿಣ ಮತ್ತು ಉತ್ತರ ಭಾಗಗಳ ನಡುವಿನ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ.


Spread the love

About Laxminews 24x7

Check Also

ವಿಷಗಾಳಿ ಸೇವಿಸಿ ಮೂವರು ಮೀನುಗಾರರ ಸಾವು – ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

Spread the loveಕಾರವಾರ: ಗೋಕರ್ಣ  ತದಡಿ ಮೀನುಗಾರಿಕಾ ಬಂದರಿನಲ್ಲಿ ಮೀನಿನ ತ್ಯಾಜ್ಯ ತೆರವುಗೊಳಿಸುವ ವೇಳೆ ವಿಷಗಾಳಿ ಸೇವಿಸಿ ಮೂವರು ಮೀನುಗಾರರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ