Home / ರಾಷ್ಟ್ರೀಯ / ಶಾಲೆಗಳು ನವೆಂಬರ್​ 2ರಿಂದ ರೀ ಓಪನ್​​

ಶಾಲೆಗಳು ನವೆಂಬರ್​ 2ರಿಂದ ರೀ ಓಪನ್​​

Spread the love

ಆಂಧ್ರಪ್ರದೇಶ ಮಹಾಮಾರಿ ಕೊರೊನಾ ವೈರಸ್​​ನಿಂದಾಗಿ ಬಂದ್​ ಆಗಿದ್ದ ಶಾಲೆಗಳು ಇದೀಗ ಆಂಧ್ರಪ್ರದೇಶದಲ್ಲಿ ನವೆಂಬರ್​ 2ರಿಂದ ರೀ ಓಪನ್​​ ಆಗಲಿದ್ದು, ಅದಕ್ಕಾಗಿ ಮಾರ್ಗಸೂಚಿ ರಿಲೀಸ್​ ಮಾಡಲಾಗಿದೆ. ಇದೇ ವಿಚಾರವಾಗಿ ವಿಡಿಯೋ ಕಾನ್ಫರೆನ್ಸ್​​ನಲ್ಲಿ ಭಾಗಿಯಾಗಿ ಮಾತನಾಡಿದ ಮುಖ್ಯಮಂತ್ರಿ ವೈಎಸ್​ ಜಗನ್​ಮೋಹನ್​​ ರೆಡ್ಡಿ, ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಯಿಂದ 148 ದಿನಗಳ ಶೈಕ್ಷಣಿಕ ವರ್ಷ ನಡೆಸಲು ನಿರ್ಧರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಎರಡು ದಿನಗಳಿಗೊಮ್ಮೆ ಕ್ಲಾಸ್​ ನಡೆಸಲು ನಿರ್ಧಾರ ಮಾಡಲಾಗಿದೆ. ಅದರಂತೆ 1,3,5,7,9 ಕ್ಲಾಸ್​ ವಿದ್ಯಾರ್ಥಿಗಳಿಗೆ ಒಂದು ದಿನ ಹಾಗೂ 2,4,6,8 ತರಗತಿ ವಿದ್ಯಾರ್ಥಿಗಳಿಗೆ ಮತ್ತೊಂದು ದಿನ ಕ್ಲಾಸ್​ ನಡೆಯಲಿವೆ

ನವೆಂಬರ್​ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದವರೆಗೆ ಶಾಲೆ ನಡೆಯಲಿದ್ದು, ಬಿಸಿಯೂಟ ಸೇವನೆ ಮಾಡಿದ ಬಳಿಕ ಮನೆಗೆ ತೆರಳಬಹುದಾಗಿದೆ.

ಮಾರ್ಗಸೂಚಿ ಪಾಲನೆ ಕಡ್ಡಾಯ

ಹ್ಯಾಡ್​ ಸ್ಯಾನಿಟೈಸ್​ ಬಳಕೆ, ಸಾಮಾಜಿಕ ಅಂತರ ಕಡ್ಡಾಯವಾಗಿದ್ದು, ಶಾಲಾ ಕೊಠಡಿಯೊಳಗೆ ಎರಡು ಭಾಗಗಳಲ್ಲಿ ವಿಂಗಡನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ನಿತ್ಯ ಶಾಲಾ ಕ್ಲಾಸ್​ ರೂಂಗಳಿಗೆ ಸ್ಯಾನಿಟೈಸ್​ ಮಾಡುವುದು ಕಡ್ಡಾಯಗೊಳಿಸಲಾಗಿದೆ


Spread the love

About Laxminews 24x7

Check Also

ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಮಂಗಳವಾರ ರಾತ್ರಿ ಅದ್ಧೂರಿ ಚಾಲನೆ

Spread the love ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಮಂಗಳವಾರ ರಾತ್ರಿ ಅದ್ಧೂರಿ ಚಾಲನೆ ಸಿಕ್ಕಿದ್ದು, ನಗರ್ತಪೇಟೆಯಲ್ಲಿ ಧರ್ಮರಾಯಸ್ವಾಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ