Breaking News

ದುಬೈನಿಂದ ಬಂದ ಪ್ರಯಾಣಿಕನ ವಿಗ್‍ನಲ್ಲಿತ್ತು 5.55 ಕೆಜಿ ಚಿನ್ನ..!

Spread the love

ಚೆನ್ನೈ,ಮಾ.22- ಚಿನ್ನ ಕಳ್ಳಸಾಗಾಣೆಯ ಒಂದು ದೊಡ್ಡ ಜಾಲ ಭಾರತದಲ್ಲಿ ನಡೆಯುತ್ತಿದೆ ಎಂಬುದಕ್ಕೆ ಪದೇ ಪದೇ ಹಲವು ನಿದರ್ಶನಗಳು ಸಿಗುತ್ತವೆ. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಕಳ್ಳ ಮಾರ್ಗದಲ್ಲಿ ತರಲು ಯತ್ನಿಸಿದ್ದ, ಸುಮಾರು 5.55 ಕೆಜಿ ಚಿನ್ನ ಹಾಗೂ ವಿದೇಶಿ ಕರೆನ್ಸಿಗಳನ್ನು ವಾಯುಯಾನ ಕಸ್ಟಮ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.ಈ ಸಂಬಂಧ ಆರು ಮಂದಿಯನ್ನು ಬಂಸಲಾಗಿದ್ದು, ವಿಚಿತ್ರವೆಂದರೆ ತಮ್ಮ ಬೋಳು ತಲೆಯನ್ನು ಮುಚ್ಚಿಕೊಳ್ಳಲು ವಿಗ್‍ನಲ್ಲಿ , ಕಾಲಚೀಲದಲ್ಲಿ, ಒಳಉಡುಪಿನಲ್ಲಿ ಈ ಚಿನ್ನ ಪತ್ತೆಯಾಗಿದ್ದರೆ ಲಗೇಜ್‍ಗಳಲ್ಲಿ ಸುಮಾರು 24 ಲಕ್ಷ ರೂ. ಮೊತ್ತದ ವಿದೇಶಿ ಕರೆನ್ಸಿಗಳು ಕೂಡ ಸಿಕ್ಕಿವೆ.

ಬಾಲು ಗಣೇಶ್‍ನ್(42), ಅನ್ಬಝಗನ್(24), ಎ.ಥಾಮಿನ್ ಅನ್ಸಾರಿ(26), ಸೈಯದ್ ಅಹಮೆದುಲ್ಲಾ(22), ಸಂತೋಷ್ ಸೆಲ್ವಮ್(33) ಮತ್ತು ಅಬ್ದುಲ್ಲಾ(35) ಬಂತ ಕಳ್ಳಸಾಗಾಣಿಕೆದಾರರು. ದುಬೈನಿಂದ ಬಂದ ಇವರೆಲ್ಲರ ಚಲನವಲನಗಳ ಬಗ್ಗೆ ಮೊದಲು ವೀಕ್ಷಿಸಲಾಯಿತು. ಪ್ರಯಾಣಿಕರ ತಲೆಗೂದಲು(ವಿಗ್) ಹೊಳೆಯುತ್ತಿರುವುದನ್ನು ಕಂಡು ಒಬ್ಬನನ್ನು ಕರೆತಂದು ಆತನ ವಿಗ್‍ನ್ನು ತಪಾಸಣೆ ಮಾಡಿದಾಗ ಅಲ್ಲಿ 595 ಗ್ರಾಂಚಿನ್ನದ ಪಾಕೆಟ್‍ಗಳನ್ನು ಇರಿಸಲಾಗಿತ್ತು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ