Breaking News
Home / ರಾಜ್ಯ / ಬಿಗ್​ ಬಾಸ್​ ಎಂದರೆ ವಿವಾದಾತ್ಮಕ ರಿಯಾಲಿಟಿ ಶೋ ಎಂಬ ಭಾವನೆ ಹಲವರಲ್ಲಿದೆ.?

ಬಿಗ್​ ಬಾಸ್​ ಎಂದರೆ ವಿವಾದಾತ್ಮಕ ರಿಯಾಲಿಟಿ ಶೋ ಎಂಬ ಭಾವನೆ ಹಲವರಲ್ಲಿದೆ.?

Spread the love

ಬಿಗ್​ ಬಾಸ್​ ಎಂದರೆ ವಿವಾದಾತ್ಮಕ ರಿಯಾಲಿಟಿ ಶೋ ಎಂಬ ಭಾವನೆ ಹಲವರಲ್ಲಿದೆ. ಅದಕ್ಕೆ ಪೂರಕ ಎಂಬಂತಹ ಕೆಲವು ಘಟನೆಗಳು ದೊಡ್ಮನೆಯೊಳಗೆ ಆಗಾಗ ನಡೆಯುತ್ತಿರುತ್ತವೆ. ಬಿಗ್​ ಬಾಸ್​ ಕನ್ನಡ ಸೀಸನ್​ 8 ಆರಂಭ ಆಗಿ ಕೇವಲ 10 ದಿನ ಕಳೆದಿದೆ ಅಷ್ಟೇ. 9ನೇ ದಿನವೇ ಮನೆ ರಣಾಂಗಣ ಆಗಿದೆ. ಟಾಸ್ಕ್​ ಸಲುವಾಗಿ ಸ್ಪರ್ಧಿಗಳೆಲ್ಲ ಮೃಗಗಳಂತೆ ವರ್ತಿಸಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ವಾತಾವರಣ ಗರಂ ಆಗಲು ಕಾರಣವಾಗಿದ್ದು ವೈರಸ್​ ವರ್ಸಸ್​ ಮನುಷ್ಯರು ಗೇಮ್​. ಈ ಆಟ ಆಡುವ ವೇಳೆ ಎಲ್ಲರೂ ಸಿಟ್ಟಿನಿಂದ ನಡೆದುಕೊಂಡಿದ್ದಾರೆ. ಮಾಡು ಇಲ್ಲವೇ ಮಡಿ ಎಂಬಂತಹ ಮನೋಭಾವದಲ್ಲಿ ಕಾದಾಡಿದ್ದಾರೆ. ಈ ಆವೇಶದ ಭರದಲ್ಲಿ ಕೆಲವು ಸ್ಪರ್ಧಿಗಳು ಮಾತಿನ ಮೇಲೆ ಹಿಡಿತ ತಪ್ಪಿದ್ದಾರೆ. ಕೆಟ್ಟ ಪದಗಳಿಂದ ಬೈಯ್ದುಕೊಂಡಿರುವುದು ಅಚ್ಚರಿ.

ಮನೆಯಲ್ಲಿ ಇರುವ 16 ಸ್ಪರ್ಧಿಗಳು ಬೇರೆ ಬೇರೆ ಜಾಗಗಳಿಂದ ಬಂದಿರುವವರು. ಎಲ್ಲರ ಅಸಲಿ ವ್ಯಕ್ತಿತ್ವವೂ ಬೇರೆ ಬೇರೆ ಆಗಿದೆ. ಯಾರ ಸ್ವಭಾವ ಎಂಥದ್ದು ಎಂಬುದು ಮೊದಲ ವಾರದಲ್ಲಿ ಸರಿಯಾಗಿ ಅನಾವರಣ ಆಗಿರಲಿಲ್ಲ ಎನ್ನಬಹುದು. ಆದರೆ 9ನೇ ದಿನದ ಈ ಟಾಸ್ಕ್​ನಲ್ಲಿ ಬಹುತೇಕರು ತಮ್ಮ ಬಣ್ಣ ಕಳಚಿದ್ದಾರೆ. ಅವಾಚ್ಯ ಶಬ್ದಗಳು ಅವರ ಬಾಯಿಂದ ಹೊರಬಂದಿವೆ. ಈ ಕಾರ್ಯಕ್ರಮವನ್ನು ಕೋಟ್ಯಂತರ ಜನರು ನೋಡುತ್ತಿರುತ್ತಾರೆ ಎಂಬ ಸತ್ಯವನ್ನೂ ಮರೆತು ಹೀಗೆ ನಡೆದುಕೊಂಡಿದ್ದಾರೆ. ಅಂಥ ಪದಗಳಿಗೆಲ್ಲ ಕಾರ್ಯಕ್ರಮದ ಆಯೋಜಕರು ಬೀಪ್​ ಹಾಕಿದ್ದಾರೆ.

ಇಷ್ಟು ದಿನ ಪರಸ್ಪರ ಗೌರವ ಸೂಚಿಸುತ್ತಿದ್ದವರೆಲ್ಲ ಟಾಸ್ಕ್​ ಆಡುವಾಗ ಏಕವಚನದಲ್ಲಿ ಕರೆದುಕೊಂಡಿದ್ದಾರೆ. ಮಂಜು, ನಿರ್ಮಲಾ, ಶಮಂತ್​, ದಿವ್ಯಾ, ಪ್ರಶಾಂತ್​ ಸಂಬರಗಿ ಮುಂತಾದವರ ನಡುವೆ ಮಾತಿನ ಚಕಮಕಿ ನಡೆದಿದೆ. ಯಾರು ಹೇಗೆಲ್ಲ ಮಾತನಾಡಿದರು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಒಂದೇ ಒಂದು ಗೇಮ್​ನಿಂದಾಗಿ ಮನೆಯ ಸದಸ್ಯರ ನಡುವಿನ ಸಾಮರಸ್ಯ ಕದಡಿದೆ. ಹಾಗಾಗಿ ಇನ್ಮುಂದೆ ಬಣ್ಣ ಬಣ್ಣದ ಮಾತುಗಳ ಬದಲಿಗೆ ಅಸಲಿ ಸಮರ ನಡೆಯುವ ಸೂಚನೆ ಸಿಕ್ಕಿದೆ.


Spread the love

About Laxminews 24x7

Check Also

ಇಂದು ರಾತ್ರಿ ಖರ್ಗೆ ನಿವಾಸದಲ್ಲಿ ‘ಇಂಡಿಯಾ’ ನಾಯಕರ ಸಭೆ

Spread the love ನವದೆಹಲಿ: ಲೋಕಸಭೆ ಉಪಸಭಾಧ್ಯಕ್ಷರ ಆಯ್ಕೆ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ‘ಇಂಡಿಯಾ’ ಮೈತ್ರಿಕೂಟದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ