ದಾವಣಗೆರೆ : ಧಾರವಾಡದ ಇಟ್ಟಿಗಟ್ಟಿ ಗ್ರಾಮದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಂತ ಮತ್ತೋರ್ವ ಮಹಿಳೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಮೂಲಕ ಧಾರವಾಡದ ಇಟ್ಟಿಗಟ್ಟಿ ಗ್ರಾಮದ ಬೈಪಾಸ್ ಬಳಿ ನಡೆದ ಮಿನಿ ಬಸ್ ಗೆ ಟಿಪ್ಪರ್ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.ಜನವರಿ 15ರಂದು ಗೋವಾಗೆ ಪ್ರವಾಸಕ್ಕೆಂದು ತೆರಳುತ್ತಿದ್ದಂತ ಮಹಿಳಾ ಕ್ಲಬ್ ಸದಸ್ಯರಿದ್ದಂತ ಮಿನಿ ಬಸ್ ಗೆ ಧಾರವಾಡದ ಇಟ್ಟಿಗಟ್ಟಿ ಬಳಿ ಟಿಪ್ಪರ್ ಡಿಕ್ಕಿಹೊಡೆದು, 9 ಜನರು ಸಾವನ್ನಪ್ಪಿದ್ದರು. ಇದೇ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ವೇದಾ ಮಂಜುನಾಥ್(46) ಎಂಬುವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
Laxmi News 24×7