Breaking News
Home / Uncategorized / ಬಸ್ ಗಳಿಗೆ ಡಿಸೇಲ್ ಹಾಕೋದಕ್ಕೆ ಆಗಿದೆ. ಆದ್ರೇ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವ ಕಾರು ಚಾಲಕ ಸಚಿವರ ಸ್ವಂತ ಕಾರಿಗೆ ಹಾಕಿಸಿಕೊಂಡಿದ್ದು ಮಾತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಸ್ ಗಳಿಗೆ ಡಿಸೇಲ್ ಹಾಕೋದಕ್ಕೆ ಆಗಿದೆ. ಆದ್ರೇ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವ ಕಾರು ಚಾಲಕ ಸಚಿವರ ಸ್ವಂತ ಕಾರಿಗೆ ಹಾಕಿಸಿಕೊಂಡಿದ್ದು ಮಾತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Spread the love

ಬೆಳಗಾವಿ : ಸಾರಿಗೆ ಬಸ್ ಗಳ ಡಿಪೋದಲ್ಲಿನ ಬಂಕ್ ಗಳಿರೋದು ಕೇವಲ ಸಾರಿಗೆ ಬಸ್ ಗಳಿಗೆ ಡಿಸೇಲ್ ತುಂಬಿಸೋದಕ್ಕೆ. ಸಾರಿಗೆ ಬಸ್ ಗಳ ಹೊರತಾಗಿ ಮತ್ತಾರಿಗೂ ಇಂಧನ ಹಾಕೋದಿಲ್ಲ. ಹೀಗಿದ್ದೂ ಸಾರಿಗೆ ಸಚಿವರ ಕಾರಿಗೆ ಬಸ್ ಡಿಪೋ ಬಂಕ್ ನಲ್ಲಿಯೇ ಪುಲ್ ಟ್ಯಾಂಕ್ ಮಾಡಿಸಲಾಗಿದೆ. ಇಂತಹ ವೀಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗಾಗಿ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರ ನಡೆಗೆ, ಈಗ ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಬೆಳಗಾವಿಯ ಮೂರನೇ ಬಸ್ ಡಿಪೋದಲ್ಲಿನ ಸಾರಿಗೆ ಇಲಾಖೆಯಿಂದ ನಿರ್ಮಿಸಲಾಗಿದ್ದಂತ ವಿಶ್ರಾಂತಿ ಗೃಹ ಉದ್ಘಾಟನೆಗೆ ಇಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಆಗಮಿಸಿದ್ದರು. ಅತ್ತ ಸಚಿವರು ವಿಶ್ರಾಂತಿ ಗೃಹದ ಉದ್ಘಾಟನೆಗೆ ತಮ್ಮ ಕಾರಿಳಿದು ಸಾಗಿದ್ರೇ, ಇತ್ತ ಸಚಿವರ ಕಾರು ಚಾಲಕ ಡಿಪೋ ಬಂಕ್ ಗೆ ತೆರಳಿ ಬರೋಬ್ಬರಿ 44 ಲೀಟರ್ ಅಂದ್ರೆ 3,432 ಮೌಲ್ಯದ ಡಿಸೇಲ್ ಹಾಕಿಸಿಕೊಂಡಿದ್ದಾರೆ.

ಈ ಬಸ್ ಡಿಪೋ ಬಂಕ್ ಇರೋದು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಂಚರಿಸುವಂತ ಸಾರಿಗೆ ಬಸ್ ಗಳಿಗೆ ಡಿಸೇಲ್ ಹಾಕೋದಕ್ಕೆ ಆಗಿದೆ. ಆದ್ರೇ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವ ಕಾರು ಚಾಲಕ ಸಚಿವರ ಸ್ವಂತ ಕಾರಿಗೆ ಹಾಕಿಸಿಕೊಂಡಿದ್ದು ಮಾತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ.


Spread the love

About Laxminews 24x7

Check Also

ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳುವುದೂ ಅಪರಾಧವಾಗಿತ್ತು:ಮೋದಿ

Spread the love ಜೈಪುರ(ಮಾ.23): ಲೋಕಸಭೆ ಚುನಾವಣೆಗೂ ಮುನ್ನ ನಾಯಕರು ದೇಶಾದ್ಯಂತ ನಿರಂತರವಾಗಿ ಪ್ರವಾಸ ಮಾಡುತ್ತಿದ್ದರೆ, ಪ್ರಧಾನಿ ಮೋದಿ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ