Breaking News

ಬಿಗ್ ಬಾಸ್’ ನಲ್ಲಿ ಕಾಮನ್ ಮ್ಯಾನ್ ಗೂ ಅವಕಾಶ : ‘ದೊಡ್ಮನೆ’ ಪ್ರವೇಶಿಸೋ ಇಬ್ಬರು ‘ಅದೃಷ್ಟವಂತರು’ ಯಾರು..?

Spread the love

ಸಿನಿಮಾ ಡೆಸ್ಕ್ : ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಕಳೆದ ಬಾರಿಯಂತೆ ಈ ಬಾರಿ ಕೂಡ 20 ಸ್ಪರ್ಧಿಗಳನ್ನು ಮನೆಯೊಳಗೆ ಕರೆ ತರಲಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಈ ಬಾರಿ ಕಾಮನ್ ಮ್ಯಾನ್ ಗೆ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಯೆಸ್, ಬಿಗ್ ಬಾಸ್ ಸೀಸನ್ 5 ಹಾಗೂ 6 ರಲ್ಲಿ ಸೆಲೆಬ್ರಿಟಿಗಳ ಹೊರತಾಗಿ ಕಾಮನ್ ಪೀಪಲ್ಸ್ ಗೆ ಅವಕಾಶ ನೀಡಲಾಗಿತ್ತು. ಈ ಮೂಲಕ ಸಾಮಾನ್ಯ ಜನರು ಬಿಗ್ ಬಾಸ್ ಮನೆ ಒಳಗೆ ಹೋಗಿ ದೊಡ್ಡ ಸೆಲೆಬ್ರಿಟಿಗಳಾಗಿ ಹೊರಬಂದಿದ್ದರು.

ಆದರೆ ಬಿಗ್ ಬಾಸ್ ಸೀಸನ್ 7 ರಲ್ಲಿ ಯಾವುದೇ ಕಾಮನ್ ಮ್ಯಾನ್ ಗಳಿಗೆ ಅವಕಾಶ ನೀಡಿರಲಿಲ್ಲ. ಹಾಗಾಗಿ ಸಾಮಾನ್ಯ ಜನರಿಗೂ ಬಿಗ್ ಬಾಸ್ ಸೀಸನ್ 8 ರಲ್ಲಿ ಅವಕಾಶ ನೀಡುವಂತೆ ಕೂಗು ಕೇಳಿಬಂದಿದೆ . ಆದರೆ ಅಂತಹ ಅವಕಾಶ ಯಾರಿಗೆ ಸಿಗಲಿದೆ ಎಂಬುದಕ್ಕೆ ಯಾವುದೇ ಸ್ಪಷ್ಟನೆಯಿಲ್ಲ. ಕಾರ್ಯಕ್ರಮ ಆಯೋಜಕರೇ ನೇರವಾಗಿ ಇಬ್ಬರು ಸಾಮಾನ್ಯರನ್ನು ಆಯ್ಕೆ ಮಾಡಿ, ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾದ ಇಬ್ಬರಿಗೆ ಅವಕಾಶ ಸಿಗಲಿದೆ ಎನ್ನಲಾಗಿದೆ. ಆ ಅದೃಷ್ಟವಂತರು ಯಾರು ಎಂಬುದಕ್ಕೆ ಬಿಗ್ ಬಾಸ್ ಸೀಸನ್-8 ಆರಂಭದಂದು ಉತ್ತರ ಸಿಗಲಿದೆ.

ಕಿಚ್ಚ ಸುದೀಪ್ ನಿರೂಪಣೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸದ್ಯದಲ್ಲೇ ಆರಂಭವಾಗಲಿದೆ. ಹೌದು,ಯಶಸ್ವಿಯಾಗಿ ಏಳು ಸೀಸನ್ ಗಳನ್ನು ಪೂರೈಸಿರುವ ಬಿಗ್ ಬಾಸ್ ಇದೀಗ ಎಂಟನೇ ಸೀಸನ್ ಅನ್ನು ಶುರು ಮಾಡುತ್ತಿದೆ.‌. ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಹೋಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಅಕ್ಟೋಬರ್ ತಿಂಗಳಿನಲ್ಲಿ ಶೋ ಆರಂಭವಾಗುತಿತ್ತು.. ಆದರೆ ಈ ಬಾರಿ ಕೊರೊನಾ ಅಟ್ಯಾಕ್ ಹಿನ್ನೆಲೆ ತಡವಾಗಿ ಶೋ ಶುರು ಮಾಡಲಾಗುತ್ತಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ