Breaking News
Home / ಜಿಲ್ಲೆ / ಬೆಂಗಳೂರು / ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದಾಗಿ ಮಗು ಅಪಹರಣ,ನವಜಾತ ಶಿಶು ಅಪಹರಿಸಿದವರು ಅರೆಸ್ಟ್

ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದಾಗಿ ಮಗು ಅಪಹರಣ,ನವಜಾತ ಶಿಶು ಅಪಹರಿಸಿದವರು ಅರೆಸ್ಟ್

Spread the love

ಬೆಂಗಳೂರು, ನ.20-ವಾಣಿ ವಿಲಾಸ ಆಸ್ಪತ್ರೆಯಿಂದ ಎರಡು ದಿನದ ನವಜಾತ ಶಿಶು ಅಪಹರಿಸಿದ್ದ ಮಹಿಳೆ ಸೇರಿದಂತೆ ನಾಲ್ವರನ್ನು ವಿವಿ ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಗು ಅಪಹರಿಸಿದ್ದ ಮಹಿಳೆ, ಇದಕ್ಕೆ ಸಹಕರಿಸಿದ ವ್ಯಕ್ತಿ ಮತ್ತು ಮಗುವನ್ನು ಪಡೆದಿದ್ದ ದಂಪತಿಯನ್ನು ಬಂಧಿಸಲಾಗಿದೆ.

ಅಬ್ದುಲ್ ರಶೀದ್ ಮತ್ತು ಆರ್ಷಿಯಾ ದಂಪತಿ ಮಗುವಿಗೆ ಅನಾರೋಗ್ಯವಾದ್ದರಿಂದ ನ.9ರಂದು ವಾಣಿ ವಿಲಾಸ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.ನ.11ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಮಗುವನ್ನು ಕರೆದೊಯ್ಯುವಂತೆ ಅನೌನ್ಸ್ ಮಾಡಿದ್ದಾರೆ.

ಈ ವೇಳೆ ಮಹಿಳೆ ಬಂದು ಮಗುವನ್ನು ಪಡೆದುಕೊಂಡು ತಾಯಿ ಬಳಿ ಕರೆದೊಯ್ಯುವುದಾಗಿ ಹೇಳಿದ್ದಾಳೆ. ಈಕೆಯ ಮಾತನ್ನು ಆಸ್ಪತ್ರೆ ಸಿಬ್ಬಂದಿ ನಂಬಿದ್ದಾರೆ. ಕೆಲ ಸಮಯದ ಬಳಿಕ ಮಗುವನ್ನು ಪಡೆಯಲು ಪೋಷಕರು ಬಂದಾಗ ಆಸ್ಪತ್ರೆ ಸಿಬ್ಬಂದಿ ಮಹಿಳೆಯೊಬ್ಬರು ಪಡೆದುಕೊಂಡು ಹೋದರು ಎಂದು ಹೇಳಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದಾಗಿ ಮಗು ಅಪಹರಣವಾಗಿದೆ ಎಂದು ವಿವಿ ಪುರಂ ಪೊಲೀಸರಿಗೆ ದೂರು ನೀಡಿದ್ದರು. ಅತ್ತ ಮಗು ಕಳವು ಮಾಡಿದ್ದ ಮಹಿಳೆ ಕುಮಾರಸ್ವಾಮಿ ಲೇಔಟ್‍ನಲ್ಲಿ ಮಕ್ಕಳಿಲ್ಲದ ದಂಪತಿಯೊಬ್ಬರಿಗೆ 80 ಸಾವಿರ ಹಣಕ್ಕೆ ಮಾರಿದ್ದಾಳೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ