Breaking News

ಯುವತಿಯ ಸೀಟಿನ ಮೇಲೆ ಸಹ ಪ್ರಯಾಣಿಕನಿಂದ ಮೂತ್ರ ವಿಸರ್ಜನೆ

Spread the love

ಹುಬ್ಬಳ್ಳಿ: ಮಹಿಳಾ ಪ್ರಯಾಣಿಕಳ ಸೀಟಿನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆ ವಿಜಯಪುರ ಮತ್ತು ಮಂಗಳೂರು ನಡುವೆ ಸಂಚರಿಸುವ ನಾನ್ ಎಸಿ ಸ್ಲೀಪರ್ ಬಸ್​ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಹುಬ್ಬಳ್ಳಿ ತಾಲೂಕಿನ ಕಿರೇಸೂರ್ ಡಾಬಾ ಬಳಿ ಮಂಗಳೂರು-2ನೇ ಘಟಕಕ್ಕೆ‌ ಸೇರಿದ್ದ ನಾನ್ ಎಸಿ ಸ್ಲೀಪರ್ ಬಸ್​ನಲ್ಲಿ ನಡೆದಿದೆ.

ಪ್ರಯಾಣಿಕರ ಊಟ, ತಿಂಡಿಗಾಗಿ ಡಾಬಾ ಬಳಿ ಬಸ್​ ನಿಲ್ಲಿಸಿದಾಗ ಎಲ್ಲ ಪ್ರಯಾಣಿಕರು ಕೆಳಗೆ ಇಳಿದಿದ್ದರು. ಈ ವೇಳೆ 30 ವರ್ಷದ ವ್ಯಕ್ತಿ ಮೂತ್ರ ವಿಸರ್ಜ‌ನೆ ಮಾಡಿದ್ದಾನೆ. ಆತ ವಿಜಯಪುರದಿಂದ ಮಂಗಳೂರಿಗೆ ಹೊರಟಿದ್ದ.

 

ಕುಡಿದ ಮತ್ತಿನಲ್ಲಿ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆಂಬ ಮಾಹಿತಿ ಸಿಕ್ಕಿದೆ. 20 ವರ್ಷದ ಯುವತಿಯ ಮೀಸಲು ಸೀಟಿನ ಮೇಲೆ‌ ಮೂತ್ರ ವಿಸರ್ಜನೆ ಮಾಡಲಾಗಿದೆ. ಊಟ ಮಾಡಿ ವಾಪಸ್ಸಾಗುವ ವೇಳೆ ಯುವತಿಯು ಮೂತ್ರ ವಿಸರ್ಜನೆ ದೃಶ್ಯವನ್ನು ಗಮನಿಸಿದ್ದಾಳೆ. ಬಳಿಕ ಆಕೆ ಚಾಲಕ ಮತ್ತು ನಿರ್ವಾಹಕರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣ ಓಡಿ ಬಂದ ನಿರ್ವಾಹಕ ಮತ್ತು ಚಾಲಕ, ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕನನ್ನು ಬಸ್ಸಿನಿಂದ ಕೆಳಗಿಳಿಸಿದ್ದಾರೆ. ಈ ವೇಳೆ ಸಹ ಪ್ರಯಾಣಿಕರು ಸಹ ಆತನನ್ನು ಬೈದು ತರಾಟೆಗೆ ತೆಗೆದುಕೊಂಡರು.

ಇದಾದ ಬಳಿಕ ಮೂತ್ರ ವಿಸರ್ಜನೆ ಮಾಡಿದ ಸೀಟನ್ನು ಚಾಲಕ ಮತ್ತು ನಿರ್ವಾಹಕ ಶುಚಿಗೊಳಿಸಿದರು. ನಂತರ ಬಸ್​ ಹುಬ್ಬಳ್ಳಿಯ ಕಡೆ ಸಾಗಿತು. ಯುವತಿ ಸೇರಿ 6 ಮಂದಿ ಹುಬ್ಬಳ್ಳಿಯಲ್ಲಿ ಇಳಿದುಕೊಂಡರು. ಮೂತ್ರ ವಿಸರ್ಜನೆ ಮಾಡಿದಾತನ ಮಾಹಿತಿ ತಿಳಿದು ಬಂದಿಲ್ಲ. ಘಟನೆಯ ಬಗ್ಗೆ ದೂರು ನೀಡಲು ಯುವತಿ ಹಿಂದೇಟು ಹಾಕಿದ್ದಾಳೆಂಬ ಮಾಹಿತಿ ಸಿಕ್ಕಿದೆ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ