Breaking News

5 ದಿನ ಸಿಸಿಬಿ ಕಸ್ಟಡಿಗೆಸಂಜನಾ

Spread the love

ಬೆಂಗಳೂರು:  ಡ್ರಗ್ಸ್ ಮಾಫಿಯಾ ಆರೋಪದಡಿ ನಟಿ ರಾಗಿಣಿ ಬಂಧನ ಬೆನ್ನಲ್ಲೇ ಇಂದು ಮತ್ತೊಬ್ಬ ಖ್ಯಾತ ನಟಿ ಸಂಜನಾಳನ್ನು  ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇಂದು ಬೆಳಗ್ಗೆ ಸಿಸಿಬಿ ಅಧಿಕಾರಿಗಳು  ನಟಿ ಸಂಜನಾ ಗಿಲ್ರಾನಿ ಮನೆ ಮೇಳೆ ದಾಳಿ ನಡೆಸಿದ್ದರು. ನಂತರ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಬಳಿಕ 8 ನೇ ಎಸಿಎಂಎ ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. 

ಇದೀಗ  ಸಂಜನಾ ಅವರನ್ನು 5 ದಿನ ಸಿಸಿಬಿ ಕಸ್ಟಡಿಗೆ ಒಪ್ಪಿಸಿ  ಕೋರ್ಟ್ ಆದೇಶ ಹೊರಡಿಸಿದೆ.   ಇನ್ನು ಸಿಸಿಬಿ,  ಸಂಜಾನ ಅವರನ್ನು  8 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ  ಕೋರ್ಟ್ ಮನವಿ ಮಾಡಿತ್ತು ಎನ್ನಲಾಗಿದೆ. ಕೋರ್ಟ್ ಗೆ ಹಾಜರು ಪಡಿಸುವ ಮುನ್ನ ಸಂಜನಾ ಅವರನ್ನ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದ್ದು, ವರದಿ ನೆಗಟಿವ್ ಬಂದಿದೆ.

ನಟಿ ರಾಗಿಣಿ ಬಳಿಕ ಇದೀಗ ಮತ್ತೊಬ್ಬ ನಟಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ.


Spread the love

About Laxminews 24x7

Check Also

ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ

Spread the loveಹಾಸನ: ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ  ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ