Breaking News

ಬರೀ ರೌಡಿಸಂ ತೋರಿಸಿ ಸಮಾಜವನ್ನು ಹಾಳು ಮಾಡುತ್ತಿದ್ದೀರಾ?: KGF-2 ಬಗ್ಗೆ ಭಾಸ್ಕರ್​ ರಾವ್​ ಅಸಮಾಧಾನ

Spread the love

ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​-2 ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಆದರೆ, ಕೆಜಿಎಫ್​ ಚಾಪ್ಟರ್​ 2 ಚಿತ್ರದ ಬಗ್ಗೆ ಮಾಜಿ ಪೊಲೀಸ್​ ಆಯುಕ್ತ ಹಾಗೂ ಆಮ್​ ಆದ್ಮಿ ಪಕ್ಷದ ನಾಯಕ ಭಾಸ್ಕರ್​ ರಾವ್​ ಅಸಮಾಧಾನವನ್ನು ಹೊರಹಾಕಿದ್ದಾರೆ.

 

ಬೆಂಗಳೂರಿನ ಪಾರ್ಟಿ ಕಚೇರಿಯಲ್ಲಿ ಮಾತನಾಡಿರುವ ಭಾಸ್ಕರ್​ ರಾವ್​, ನಿಮ್ಮ ಸಿನಿಮಾ ಮತ್ತು ಹೀರೋ ಪ್ರಖ್ಯಾತಿ ಇರಬಹುದು. ಆದರೆ, ನಾನು ಈ ಸಿನಿಮಾವನ್ನು ಒಪ್ಪುವುದಿಲ್ಲ. ಸಿನಿಮಾದಲ್ಲಿ ಏನು ತೋರಿಸ್ತೀರಾ ನೀವು? ಬರೀ ರೌಡಿಸಂ ತೋರಿಸಿ ಸಮಾಜವನ್ನು ಹಾಳು ಮಾಡುತ್ತಿದ್ದೀರಾ?

ಬರಿ ಮಚ್ಚು, ಇಷ್ಟುದ್ದ ಗಡ್ಡ ಬಿಟ್ಕೊಂಡು, ಬೆವತುಕೊಂಡು, ಒಂದು ರೀತಿಯಲ್ಲಿ ವರ್ಕೌಟ್​ ಮಾಡಿ ಅಸಹ್ಯ ರೀತಿಯಲ್ಲಿ ತೋರಿಸುತ್ತೀರಾ, ಏನಾದರೂ ಒಂದು ಸಾಧನೆ ತೋರಿಸಿ ಎಂದು ಹೆಸರೇಳದೆ ಪರೋಕ್ಷವಾಗಿ ಕೆಜಿಎಫ್​-2 ಚಿತ್ರವನ್ನು ಟೀಕಿಸಿದರು. ಅಲ್ಲದೆ, ಇಂತಹ ಸಿನಿಮಾ ಕನ್ನಡದ ಹೆಮ್ಮೆಯಲ್ಲ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ