Breaking News

ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ, ಸಂಪುಟ ಪುನರ್ ರಚನೆ ಆಗಲಿ: ದಿನೇಶ್ ಗುಂಡೂರಾವ್

Spread the love

ಬೆಂಗಳೂರು: ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ. ಸಂಪುಟ ಪುನರ್ ರಚನೆ  ಆಗಲಿ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಶಾಸಕರು ದೆಹಲಿಗೆ ಹೋಗಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ. ಸಂಪುಟ ಪುನರ್ ರಚನೆ ಆಗಬೇಕು. ನಾನು ಹಿಂದೆ ಮಂತ್ರಿ ಆಗಿದ್ದಾಗ ಪುನರ್ ರಚನೆ ಆಗಿತ್ತು. ಬೇರೆಯವರಿಗೆ ಸಚಿವ ಸ್ಥಾನ ಸಿಗಬೇಕು. ಪಕ್ಷದ ಹಂತದಲ್ಲಿ ಅದು ಆಗುತ್ತದೆ ಎಂದರು.

ಈ ಸಮಯದಲ್ಲಿ ಶಾಸಕರು ಹೋಗಿದ್ದು ಸರಿಯಲ್ಲ ಡಿಸಿಎಂ ಹೇಳಿಕೆ ಬಗ್ಗೆ ನಾನು ಮಾತಾಡಲ್ಲ.ಶಾಸಕರು ಅವರು ಪ್ರಯತ್ನ ಮಾಡೋದು ತಪ್ಪಲ್ಲ. ಮಂತ್ರಿ ಆಗೋಕೆ ಎಲ್ಲರಿಗೂ ಆಸೆ ಇರುತ್ತದೆ. ಯಾರು ಮಂತ್ರಿಯಾಗಿ ಇರಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ. 33 ಜನ ಯಾರು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ಸಂಸತ್‌ನಲ್ಲಿ ಕ್ಷೇತ್ರ ಮರು ವಿಂಗಡಣೆ ವಿಧೇಯಕ ಮಂಡನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಗಳಲ್ಲಿ ಈಗ ಇರೋ ಲೋಕಸಭೆ ಕ್ಷೇತ್ರಗಳ ಪೈಕಿ 50% ಸೀಟು ಹೆಚ್ಚಳ ಮಾಡಿದ್ರೆ ಯಾವುದೇ ಅನ್ಯಾಯ ಆಗಲ್ಲ. ಮಹಿಳಾ ಮೀಸಲಾತಿ ಕೊಡಲು ಕ್ಷೇತ್ರ ಹೆಚ್ಚು ಮಾಡೋ ಅವಶ್ಯಕತೆ ಇಲ್ಲ. ಎಷ್ಟೇ ಸ್ಥಾನ ಇದ್ದರು 33% ಮೀಸಲು ಕೊಡಬೇಕು ಅಷ್ಟೇ. ಡಿಲಿಮಿಟೇಷನ್ ಬೇರೆ, ಮಹಿಳಾ ಮೀಸಲಾತಿ ಬೇರೆ ಎಂದು ತಿಳಿಸಿದರು.

ಪಂಚಾಯತಿ, ನಗರ ಪಾಲಿಕೆಯಲ್ಲಿ ಈಗಾಗಲೇ 50% ಮಹಿಳಾ ಮೀಸಲಾತಿ ಇದೆ.ಕೇಂದ್ರ ಹಿಂದೆ ಬಿಲ್ ಬಂದಾಗಲೇ ಮಹಿಳಾ ಮೀಸಲಾತಿ ಕೊಟ್ಟಿದ್ದರೆ ಇಷ್ಟು ಹೊತ್ತಿಗೆ ಮಹಿಳಾ ಮೀಸಲಾತಿ ಇರುತ್ತಿತ್ತು. ಈಗ ಕೇಂದ್ರ ಸರ್ಕಾರದವರು ಲೇಟ್ ಮಾಡಿದ್ದಾರೆ. ಈಗಲೂ ಈಗ ಇರೋ ಕ್ಷೇತ್ರಗಳಿಗೆ ಮಹಿಳಾ ಮೀಸಲಾತಿ ಮಾಡಲಿ ಅಂತ ಆಗ್ರಹಿಸಿದರು.

ಮರು ವಿಂಗಡಣೆಯಲ್ಲಿ ರಾಜ್ಯಗಳಲ್ಲಿ ಇರೋ ಲೋಕಸಭೆ ಕ್ಷೇತ್ರದ ಸ್ಥಾನದ 50% ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಜನಸಂಖ್ಯೆ ಸೇರಿ ಬೇರೆ ಮಾನದಂಡ ಇಲ್ಲ ಎಂದು ಹೇಳಿದ್ದಾರೆ. ಈಗ ಇರುವ ಸೀಟು ಪೈಕಿ ಹೆಚ್ಚುವರಿ 50% ಕೊಡ್ತೀನಿ ಅಂತ ಹೇಳಿದ್ದಾರೆ. 50% ಸೀಟು ಹೆಚ್ಚಳ ಮಾಡಿದ್ರೆ ರಾಜಕೀಯವಾಗಿ ಅನ್ಯಾಯ ಆಗಲ್ಲ ಅನಿಸುತ್ತದೆ. 50% ಸೀಟು ಕೊಡುವುದರಿಂದ ಅನ್ಯಾಯ, ತಾರತಮ್ಯ ಆಗಲ್ಲ ಅನಿಸುತ್ತೆ ಎಂದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ