Breaking News

ವಿಡಿಯೋ ಕಾಲ್ ಮಾಡಿ ವೈದ್ಯರ ಸಲಹೆ ಪಡೆದು ಹೆರಿಗೆ ಮಾಡಿಸಿದ ಮಹಿಳೆಯರು

Spread the love

ಹಾವೇರಿ : ವಿಡಿಯೋ ಕಾಲ್ ಮೂಲಕ ವೈದ್ಯರ ಸಲಹೆ ಪಡೆದು ಮಹಿಳೆಯರು ಹೆರಿಗೆ ಮಾಡಿಸಿರುವ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದೆ.

ನಿನ್ನೆ ಮಧ್ಯಾಹ್ನ 2:30ರ ಸುಮಾರಿಗೆ ವಾಸವಿ ಪತ್ತೆಪೂರ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದ್ರೆ ಸಂಡೇ ಲಾಕ್ ಡೌನ್ ಇದ್ದ ಕಾರಣ ಇಡೀ ನಗರವೇ ಸ್ತಬ್ಧವಾಗಿತ್ತು. ಹೀಗಾಗಿ ವಾಸವಿ ಪತ್ತೆಪೂರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಿರಲ್ಲಿಲ್ಲ. ಇತ್ತ ಮಹಿಳೆಯ ಆಕ್ರಂದನ ಮತ್ತು ಕಿರುಚುವುದನ್ನ ಕಂಡ ಸ್ಥಳೀಯ ಮಹಿಳೆಯರು ಸಹಾಯಕ್ಕೆ ಧಾವಿಸಿದ್ದಾರೆ. ಹಾಗೇ ತಮಗೆ ಪರಿಚಯವಿದ್ದ ಹುಬ್ಬಳ್ಳಿ ಕಿಮ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಡಾ. ಪ್ರಿಯಾಂಕ ಅವರಿಗೆ ವಿಡಿಯೋ ಕಾಲ್ ಮಾಡಿ ಅವರ ಮಾರ್ಗದರ್ಶನದಂತೆ ಹೆರಿಗೆ ಮಾಡಿಸಿದ್ದಾರೆ. 

ಸದ್ಯ ವಾಸವಿ ಪತ್ತೇಪೂರ ಅವರಿಗೆ ಗಂಡು ಮಗು ಜನಿಸಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.

ಇತ್ತ ವೈದ್ಯರ ಸಲಹೆ ಮೇರೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದ ಮಧುಲಿಕಾ ದೇಸಾಯಿ, ಅಂಕಿತಾ, ಜ್ಯೋತಿ, ವಿಜಯಲಕ್ಷ್ಮಿ, ಮಾಧುರಿ, ಮುಕ್ತಾ ಹಾಗೂ ಶಿವಲೀಲಾ ಪತ್ತಾರ ಅವರ ತಂಡದ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದಾರೆ.


Spread the love

About Laxminews 24x7

Check Also

ಕರ್ತವ್ಯದ ವೇಳೆ ನೌಕಾಪಡೆಯ ಯೋಧ ಹುತಾತ್ಮ

Spread the loveಹಾವೇರಿ: ನೌಕಾಪಡೆಯ ಯೋಧ  ಕರ್ತವ್ಯದ ವೇಳೆ ಹುತಾತ್ಮರಾದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಹಾವೇರಿ  ಜಿಲ್ಲೆಯ ಹಾನಗಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ