Breaking News

ಬಿಜೆಪಿಯ ಬಿಎಲ್ಎಗಳ ಮೇಲೆ ಎಫ್ಐಆರ್‌; ಹೈಕೋರ್ಟ್‌ನಿಂದ ಮಧ್ಯಂತರ ತಡೆ

Spread the love

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಸಮಗ್ರ ಪರಿಷ್ಕರಣೆ  ಪ್ರಕ್ರಿಯೆಯಲ್ಲಿ, ಫಾರ್ಮ್ 7 ಸಲ್ಲಿಕೆಗೆ ಸಂಬಂಧಿಸಿದಂತೆ ಬಿಜೆಪಿಯ ಬೂತ್‌ ಮಟ್ಟದ ಏಜೆಂಟ್‌  ಗಳ ಮೇಲೆ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಎಫ್‌ಐಆರ್ ರದ್ದು ಕೋರಿ ಗುಟ್ಟಳ್ಳಿಯ ಜಿ.ಎಸ್‌ ವಸಂತಲಕ್ಷ್ಮಿ, ಯಶವಂತಪುರದ ಆರ್‌. ದೀಪಕ್‌ ಸಿಂಗ್‌, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಹಾಜರಾಗಿ, ಪರಿಷ್ಕರಣೆ ವೇಳೆ ಬಿಎಲ್ಎಗಳು ವೋಟರ್ ಲಿಸ್ಟ್‌ನಿಂದ ತೆಗೆಯಲು ಅರ್ಜಿ ಸಲ್ಲಿಸಿದ್ದಾರೆ. ಚುನಾವಣಾ ಅಧಿಕಾರಿಗಳು ಪರಿಶೀಲಿಸಿ ತೀರ್ಮಾನಿಸಲು ಅವಕಾಶವಿದೆ ಎಂದು ವಾದ ಮಂಡಿಸಿದ್ದರು. 

ಸರ್ಕಾರದ ಪರ ಹೆಚ್ಚುವರಿ ಎಸ್‌ಪಿಪಿ ಅನೂಪ್ ಕುಮಾರ್ ಹಾಜರಾಗಿ, ಒಬ್ಬ ವ್ಯಕ್ತಿ 50 ಅರ್ಜಿಗಳನ್ನು ಸಲ್ಲಿಸಬಹುದು. ಆದರೆ, ಇವರು 778 ಫಾರಂ-7 ಅರ್ಜಿಗಳನ್ನ ಸಲ್ಲಿಸಿದ್ದಾರೆ. ದುರುದ್ದೇಶದಿಂದ ಮತದಾರರನ್ನು ಡಿಲೀಟ್ ಮಾಡಲು ಯತ್ನಿಸಿದ್ದಾರೆ ಎಂದು ಪ್ರತಿವಾದ ಮಂಡಿಸಿದ್ದರು.

ಈ ವೇಳೆ ನ್ಯಾ. ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಪೀಠವು ಮಧ್ಯಪ್ರವೇಶಿಸಿ, ಜನರು ಇಂತಹವರಿಗೇ ವೋಟ್ ಹಾಕಿದ್ದಾರೆಂದು ತಿಳಿಯುವುದಿಲ್ಲವಲ್ಲ. 50ಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದರೆ ಯಾವ ಕಾಯ್ದೆಯಡಿ ಅಪರಾಧವಾಗುತ್ತದೆ? ಫಾರಂ-7 ಸಲ್ಲಿಸಿದಾಗ ಆ ಬಗ್ಗೆ ಅಧಿಕಾರಿಗಳು ವಿಚಾರಣೆ ಮಾಡುತ್ತಾರಲ್ಲವೇ? ತಪ್ಪು ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ತೀರ್ಮಾನಿಸುತ್ತಾರಲ್ಲವೇ? ಡಿಲೀಟ್ ಆಗುವ ಜನರಿಗೂ ನೋಟಿಸ್ ನೀಡುತ್ತಾರಲ್ಲವೇ ಎಂದು ಎಸ್‌ಪಿಪಿಗೆ ಪ್ರಶ್ನೆ ಮಾಡಿತು. ಇದು ಮೇಲ್ನೋಟಕ್ಕೆ ಆತುರದ ದೂರು ಎಂದು ಅಭಿಪ್ರಾಯಪಟ್ಟ ಪೀಠ ಎಫ್ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.


Spread the love

About Laxminews 24x7

Check Also

ಬಾಯಿ ಚಪಲಕ್ಕೆ ಏನಾದ್ರೂ ಹೇಳೋದು ಸರಿಯಲ್ಲ – ಗಣಿಗ ರವಿಗೆ ವಿಜಯೇಂದ್ರ ಟಾಂಗ್

Spread the loveವಿಜಯಪುರ:ಬಾಯಿ ಚಪಲಕ್ಕೆ ಏನಾದ್ರೂ ಹೇಳೋದು ಸರಿಯಲ್ಲ ಎಂದು ಶಾಸಕ ಗಣಿಗ ರವಿ  ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ