Breaking News
Home / Uncategorized (page 79)

Uncategorized

ಉದ್ಯೋಗ ಅರಸಿ ಬಂದಿದ್ದ ಕಲಬುರಗಿಯ ಯುವಕ ಆತ್ಮಹತ್ಯೆ

ಮಹದೇವಪುರ: ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಕಲಬುರಗಿ ಮೂಲದ ಯುವಕನೊರ್ವ ಬಿಲ್ಡಿಂಗ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬೇಡ್ಕರ್ ನಗರ ಗುಟ್ಟದಲ್ಲಿ ಜರುಗಿದೆ. ಜೇವರ್ಗಿ ಬುಟ್ನಾಳ್ ನ ಅರುಣ್ ಕುಮಾರ್ (28)ಆತ್ಮಹತ್ಯೆ ಮಾಡಿಕೊಂಡ ಯುವಕ. ಇಂಜಿನಿಯರಿಂಗ್ ಪದವಿ ಪೂರೈಸಿರುವ ಅರುಣ್ ಉದ್ಯೋಗ ಆರಸಿ ಮೂರು ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದ. ವೈಟ್ ಫೀಲ್ಡ್ ಸಮೀಪದ ಅಂಬೇಡ್ಕರ್ ನಗರದ ಗುಟ್ಟದಲ್ಲಿರುವ ಪಿಜಿ ಯಲ್ಲಿ ತನ್ನ …

Read More »

ಚುನಾವಣೆ ಸಂದರ್ಭ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ

ಪಣಜಿ: ಚುನಾವಣೆ ಸಂದರ್ಭದಲ್ಲಿ ಗೋವಾ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಬೇಸಗೆ ರಜೆಯಲ್ಲಿ ಗೋವಾದ ಕಡಲತೀರಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುತ್ತವೆ. ಇದಲ್ಲದೇ ಪ್ರವಾಸಿಗರ ಇಳಿಕೆ ಸ್ಥಳೀಯ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತಿದೆ. ಬಿಸಿಲ ಬೇಗೆಯಿದ್ದರು ಪ್ರತಿ ವರ್ಷ ಗೋವಾದಲ್ಲಿ ರಜಾ ದಿನಗಳಲ್ಲಿ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿತ್ತು. ಆದರೆ ಪ್ರಸಕ್ತ ಬಾರಿ ಚುನಾವಣೆಯ ಬಿಸಿ ಗೋವಾ ಪ್ರವಾಸೋದ್ಯಮಕ್ಕೂ ತಟ್ಟಿದಂತಾಗಿದೆ. ಲೋಕಸಭೆ ಚುನಾವಣೆಗೆ ಏಪ್ರಿಲ್ ಮತ್ತು ಮೇ ತಿಂಗಳುಗಳು ಕಳೆದಿವೆ. ರಜಾದಿನಗಳಲ್ಲಿ ಜನರು …

Read More »

ಮಹಾಬಲೇಶ್ವರ ಗರ್ಭಗುಡಿಯ ನಂದಿ ಪೂಜೆ ವಿವಾದ: ಪ್ರತಿಭಟನೆ!

ಗೋಕರ್ಣ : ಶ್ರೀ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿರುವ ನಂದಿಗೆ ತೀರ್ಥ ಪ್ರಸಾದ ಉಪಾಧಿ ನೀಡುವ ಕಾರ್ಯ ಹಲವು ಶತಮಾನಗಳಿಂದ ಎರಡು ಕುಟುಂಬಗಳಿಗೆ ವಹಿಸಲಾಗಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಒಂದೇ ಕುಟುಂಬದವರು ವರ್ಷವಿಡೀ ತಾವೇ ಕರ್ತವ್ಯ ನಿರ್ವಹಿಸಿ ಇನ್ನೊಂದು ಮನೆತನಕ್ಕೆ ಅವಕಾಶ ನೀಡದಿರುವುದಕ್ಕೆ ಗುರುವಾರ ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ ನಡೆದವು.   ಶಂಕರ ಗೋಪಿ ಮನೆತನ ಹಾಗೂ ಜಂಬೆ ಬಾಲಕೃಷ್ಣ ಮನೆತನದವರು ಆರು, ಆರು ತಿಂಗಳು ಮಹಾಬಲೇಶ್ವರ ಗರ್ಭಗುಡಿಯ …

Read More »

ವಜಾಗೊಂಡ ಎಲ್ಲಾ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಬಿನ್ ಸಿಬಂದಿ ಮರುನೇಮಕ

ಹೊಸದಿಲ್ಲಿ: ವಜಾಗೊಂಡಿರುವ ಎಲ್ಲಾ ಕ್ಯಾಬಿನ್ ಸಿಬಂದಿಯನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಮರುನೇಮಕ ಮಾಡಿಕೊಳ್ಳಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಒಪ್ಪಿಕೊಂಡಿದೆ. ಗುರುವಾರ ಮಧ್ಯಾಹ್ನ 2 ಗಂಟೆಗೆ ಮುಖ್ಯ ಕಾರ್ಮಿಕ ಆಯುಕ್ತರು ಕರೆದಿದ್ದ ಸಭೆಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಆಡಳಿತವು ಪ್ರತಿಭಟನಾ ನಿರತ ಸಿಬಂದಿಯನ್ನು ಭೇಟಿ ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.   ಮಂಗಳವಾರ ರಾತ್ರಿಯಿಂದ ಸೂಚನೆ ನೀಡದೆ ಸಾಮೂಹಿಕ ಅನಾರೋಗ್ಯ ರಜೆಗೆ ತೆರಳಿದ 30 ಕ್ಯಾಬಿನ್ ಸಿಬಂದಿಯ ಸೇವೆಗಳನ್ನು ವಜಾಗೊಳಿಸುವುದಾಗಿ …

Read More »

ಶ್ರೀ ಕೃಷ್ಣ ಮಠದಲ್ಲಿ ಸ್ವರ್ಣಾಲಯದ ಶುಭಾರಂಭ

ಉಡುಪಿ: ಶ್ರೀ ಕೃಷ್ಣನ ಸ್ವರ್ಣ ರಥಕ್ಕೆ ಬೇಕಾದ ಚಿನ್ನವನ್ನು ತಮ್ಮ ತಮ್ಮ ಶಕ್ತ್ಯನುಸಾರ ನೀಡಲು ಉತ್ಸುಕರಾದ ಭಕ್ತರಿಗಾಗಿ ಖರೀದಿಸಲು ಬೇಕಾದ ಚಿನ್ನದ ನಾಣ್ಯ ಸಂಗ್ರಹದ ಸ್ವರ್ಣಾಲಯವನ್ನು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಗೌರವ ಉಪಸ್ಥಿತಿಯಲ್ಲಿ ಭಂಡಾರಿಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಗುರುವಾರ ದೀಪ ಬೆಳಗಿಸಿ ಲೋಕಾರ್ಪಣೆ ಗೊಳಿಸಿದರು . ಮೇ 10 ರಂದು(ಶುಕ್ರವಾರ) ಅಕ್ಷಯ ತೃತೀಯದ ಪರ್ವ ದಿನವಾದ ಪ್ರಯುಕ್ತ ಪೂಜ್ಯ ಪರ್ಯಾಯ ಶ್ರೀಪಾದರ ಅಪೇಕ್ಷೆಯಂತೆ, ಭಕ್ತರ …

Read More »

ಮತ್ತೆ ಬೆಂಗಳೂರಿನಲ್ಲಿ ಮಳೆ ಶುರು : ರಾಜ್ಯ ರಾಜಧಾನಿ ಕೂಲ್ ಕೂಲ್

ಬೆಂಗಳೂರು : ಇಂದು ಸಂಜೆ ಬಳಿಕ ದಿಢೀರನೆ ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ ಶುರುವಾಯಿತು. ಅರ್ಧ ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿಯಿತು. ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿನ ಜನತೆ ಎರಡು ದಿನಗಳಿಂದ ಸುರಿಯುತ್ತಿರು ಮಳೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ.ಆದರೆ, ದಿಢೀರ್​ ಮಳೆಯಿಂದ ಕೆಲವೆಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ.   ಯಶವಂತಪುರ, ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಬಸವನಗುಡಿ, ಚಾಮರಾಜಪೇಟೆ, ಕಾರ್ಪೊರೇಷನ್, ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್ ಸೇರಿದಂತೆ ಹಲವೆಡೆ ಮಳೆಯಾಗಿದೆ. …

Read More »

IFS ಪರೀಕ್ಷೆಯಲ್ಲಿ ದೇಶಕ್ಕೆ 42 ನೇ ರ‍್ಯಾಂಕ್ ಪಡೆದ ಅಕ್ಕಿಮರಡಿಯ ಪಾಂಡುರಂಗ ಸದಾಶಿವ ಕಂಬಳಿ

ಮಹಾಲಿಂಗಪುರ : ಕಳೆದ ವರ್ಷದ ನವೆಂಬರ್ ನಲ್ಲಿ ಕೇಂದ್ರ ಲೋಕಸೇವಾ ಆಯೋಗವು ನಡೆಸಿದ IFS (ಭಾರತೀಯ ಅರಣ್ಯ ಸೇವೆ) ಪರೀಕ್ಷೆಯಲ್ಲಿ ಸಮೀಪದ ಅಕ್ಕಿಮರಡಿ(ಮುಧೋಳ ತಾಲೂಕು) ಗ್ರಾಮದ ಪ್ರಗತಿಪರ ರೈತರಾದ ಸದಾಶಿವ ಮತ್ತು ಸುರೇಖಾ ಕಂಬಳಿ ದಂಪತಿಗಳ ಸುಪುತ್ರನಾದ ಪಾಂಡುರಂಗ ಸದಾಶಿವ ಕಂಬಳಿ ಅವರು ದೇಶಕ್ಕೆ 42ನೇ ರ‌್ಯಾಂಕ್ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ‌ ಗ್ರಾಮೀಣ ಭಾಗದ ರೈತನ ಮಗನಾದ ಪಾಂಡುರಂಗ ಅವರು 1 ರಿಂದ 5ನೇ ತರಗತಿ ಶಿಕ್ಷಣವನ್ನು ಸೈದಾಪೂರ …

Read More »

ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ

ಮುಂಡರಗಿ: ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹೊರವಲಯದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಯುವಕನೋರ್ವನ ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆಯು ಗುರುವಾರ ನಡೆದಿದೆ. ಹತ್ಯೆಯಾಗಿರುವ ಯುವಕ ಸುಭಾಸ ನಾಯಕನು ಕೊಪ್ಪಳ ಜಿಲ್ಲೆಯ ಹ್ಯೆದರ ನಗರ ತಾಂಡಾದ ನಿವಾಸಿ ಆಗಿದ್ದು. ಬುಧವಾರ ರಾತ್ರಿ ಮುಂಡರಗಿ ಹೊರವಲಯದ ಹೌಸೀಂಗ್ ಬೋರ್ಡ್ ನ ಕಾಲೋನಿಯ ಬಯಲಿನಲ್ಲಿ ಇಬ್ಬರು ಗೆಳೆಯರ ಜೊತೆಗೆ ಕೂಡಿಕೊಂಡು ಪಾರ್ಟಿ ಮಾಡಿದ್ದಾನೆ. ಆದರೆ ಅದೆ ಬಯಲಿನಲ್ಲಿ ತಡರಾತ್ರಿ ಸುಭಾಸ ನಾಯಕನನ್ನು …

Read More »

ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

ಬೆಳಗಾವಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಆರೋಪಿಸಿ ಗುರುವಾರ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಅವರು ಖಳನಾಯಕರಾಗಿದ್ದಾರೆ ಎಂದು ಅರೋಪಿಸಿದ ಕಾರ್ಯಕರ್ತರು, ಕೂಡಲೇ ಶಿವಕುಮಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ ಹಾಗೂ ರಣದೀಪಸಿಂಗ್ …

Read More »