Breaking News

ಬಾಲಕಿ ಮೇಲೆ ಗ್ಯಾಂಗ್‌ರೇಪ್‌; ಪಾರ್ಕ್‌ ಹತ್ತಿರದ ಮಹಿಳಾ ಕಾಲೇಜು ಬಂದ್‌ ಮಾಡಿ ಆನ್ಲೈನ್‌ ಕ್ಲಾಸ್‌

Spread the love

ನವದೆಹಲಿ: ಪೊಲೀಸರ ಸೋಗಿನಲ್ಲಿ ಬಂದು 17 ವರ್ಷದ ಬಾಲಕಿ ಮೇಲೆ  ಅತ್ಯಾಚಾರ ನಡೆಸಿರುವ ಪ್ರಕರಣ ಇಡೀ ದೆಹಲಿಯನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆ ಬೆನ್ನಲ್ಲೇ ಕಲ್ಕಾಜಿ ಮಂದಿರದ ಬಳಿ ಇರುವ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ತರಗತಿಗಳನ್ನು ರದ್ದುಗೊಳಿಸಿ ಆನ್ಲೈನ್ ಕ್ಲಾಸ್‌  ನಡೆಸಲಾಗಿದೆ.

ಕಲ್ಕಾಜಿ ದೇವಾಲಯದ ಸಮೀಪವಿರುವ ಆಸ್ತಾ ಕುಂಜ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಲೇಡಿ ಶ್ರೀ ರಾಮ್ ಕ್ಯಾಂಪಸ್‌ ಘಟನೆ ನಡೆದ ಸ್ಥಳದಿಂದ 2 ಕಿಲೋಮೀಟರ್ ದೂರದಲ್ಲಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕಾಲೇಜು ಆಡಳಿತ ಈ ನಿರ್ಧಾರ ತೆಗೆದುಕೊಂಡಿದೆ.

ಅತ್ಯಾಚಾರ ಆರೋಪದ ಮೇಲೆ ಮೂವರ ಬಂಧನ
ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಸೋಮವಾರ ಸಂಜೆ ಬಾಲಕಿ ಸ್ನೇಹಿತನೊಂದಿಗೆ ದೇವಾಲಯ ದರ್ಶನ ಮುಗಿಸಿ ಪಾರ್ಕ್‌ಗೆ ಹೋಗಿದ್ದಳು. ಈ ವೇಳೆ ಪೊಲೀಸರ ಸೋಗಿನಲ್ಲಿ ಬಂದ ಮೂವರು ಬಂದೂಕು ತೋರಿಸಿ ಆಕೆಗೆ ಬೆದರಿಕೆ ಹಾಕಿದ್ದಾರೆ. ನಂತರ ಉದ್ಯಾನವನದ ಏಕಾಂತ ಪ್ರದೇಶಕ್ಕೆ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.

ಆರೋಪಿಗಳನ್ನು ವಕೀಲ ಹೇಮಂತ್ ಮತ್ತು ಆತನ ಸಹೋದರ ಫೈನಲ್‌ ಈಯರ್‌ ಬಿಎಸ್ಸಿ ವಿದ್ಯಾರ್ಥಿ ಮುಖೇಶ್ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

SIR ಬಗ್ಗೆ ಚುನಾವಣಾ ಆಯೋಗದಲ್ಲಿ ಭಿನ್ನಮತವಿಲ್ಲ, ಎಲ್ಲಾ ನಿರ್ಧಾರಗಳೂ ಸರ್ವಾನುಮತದಿಂದ ಕೂಡಿವೆ: ಆಯೋಗ ಸ್ಪಷ್ಟನೆ

Spread the loveನವದೆಹಲಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ  ಬಗ್ಗೆ ಚುನಾವಣಾ ಆಯೋಗದಲ್ಲಿ ಯಾವುದೇ ಭಿನ್ನಮತ ಇಲ್ಲ, ಎಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ