ಬೆಂಗಳೂರು: ಪ್ರ‍್ಯಾಕ್ಟಿಸ್‌ಗಾಗಿ ಶ್ವಾನದ ಕಾಲು ಕತ್ತರಿಸಿ, ಅನಸ್ತೇಶಿಯಾ ನೀಡದೇ ಪ್ರಾಣಿಗಳ ಪ್ರಯೋಗ ನಡೆಸುತ್ತಿರುವ ಖಾಸಗಿ ಪಶು ಆಸ್ಪತ್ರೆಯ ಕರ್ಮಕಾಂಡ ಇದೀಗ ಬಯಲಾಗಿದೆ. ದೊಡ್ಡಕನ್ನೆಲ್ಲಿಯಲ್ಲಿ ಕಳೆದ 4 ವರ್ಷದಿಂದ ಅನುಮತಿಯಿಲ್ಲದೇ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಪಶು ಆಸ್ಪತ್ರೆಗೆ ಅಧಿಕಾರಿಗಳು ತೆರಳಿ, ಪರಿಶೀಲನೆ ನಡೆಸಿದಾಗ ಹಿಂಸಾಚಾರ ನಡೆಸುತ್ತಿರುವುದು ಬಯಲಾಗಿದೆ. ಈ ಆಸ್ಪತ್ರೆ ಬೋರ್ಡಿಂಗ್, ಕೆಎಡಬ್ಲ್ಯೂಬಿ ಸೇರಿದಂತೆ ಯಾವುದೇ ಅನುಮತಿ ಇಲ್ಲದೇ ಕಾರ್ಯ ನಿರ್ವಹಿಸುತ್ತಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಪ್ರಾಣಿಗಳಿಗೆ ಅನಸ್ತೇಶಿಯಾ ನೀಡದೇ ಪ್ರಯೋಗ ನಡೆಸಿರುವುದು …
Read More »ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಬಿದ್ದ ಲಾರಿ – ಕ್ಲೀನರ್ ಸ್ಥಳದಲ್ಲೇ ಸಾವು, ಚಾಲಕನಿಗೆ ಗಂಭೀರ ಗಾಯ
ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಹೇಮಾವತಿ ನಾಲೆಗೆ ಬಿದ್ದ ಪರಿಣಾಮ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಲಾರಿ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಕುಣಿಗಲ್ ತಾಲೂಕಿನ ಕುರುಡಿಹಳ್ಳಿ ಬಳಿ ನಡೆದಿದೆ. ಲಾರಿ ತುಮಕೂರಿನಿಂದ ಕುಣಿಗಲ್ ಕಡೆಗೆ ಅಕ್ಕಿ ಮೂಟೆ ತುಂಬಿಕೊಂಡು ಹೋಗುತ್ತಿತ್ತು. ಈ ವೇಳೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿ ಡಿವೈಡರ್‌ಗೆ ಡಿಕ್ಕಿಯಾಗಿ ಪಕ್ಕದಲ್ಲಿದ್ದ ಹೇಮಾವತಿ ನಾಲೆಗೆ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಲಾರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಲಾರಿಯಲ್ಲಿದ್ದ ಅಕ್ಕಿ …
Read More »100 ದಿನಗಳ ಸಂಭ್ರಮ| ಬಲಿಷ್ಠ ಕರ್ನಾಟಕಕ್ಕೆ 3 ಮಹಾ ಸಂಕಲ್ಪ, 9 ಸಂಕಲ್ಪ ಕೈಗೊಂಡ ಡಿಕೆಶಿ
ಬೆಂಗಳೂರು: ನೂರು ದಿನಗಳ ಪೂರೈಸಿದ ಸಂಭ್ರಮದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಲಿಷ್ಠ ಕರ್ನಾಟಕಕ್ಕೆ 3 ಮಹಾ ಸಂಕಲ್ಪ ಮತ್ತು 9 ಸಂಕಲ್ಪಗಳನ್ನು ಕೈಗೊಂಡಿದ್ದಾರೆ. ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸಂಕಲ್ಪವನ್ನು ಕೈಗೊಂಡು ಮಾತನಾಡಿದ ಡಿಕೆಶಿ, ನಮ್ಮ ಗುರಿ ದೃಢ ಕರ್ನಾಟಕವನ್ನು ನಿರ್ಮಿಸುವುದು. ಆರ್ಥಿಕವಾಗಿ ಸದೃಢ, ಸಾಮಾಜಿಕವಾಗಿ ಸಶಕ್ತ, ತಂತ್ರಜ್ಞಾನದಲ್ಲಿ ಮುಂದುವರಿದ, ಮತ್ತು ಮೌಲ್ಯಗಳಲ್ಲಿ ಆಳವಾಗಿ ಬೇರೂರಿದ ಕರ್ನಾಟಕ ಎಂದು ಹೇಳಿದರು. ಮಹಾ ಸಂಕಲ್ಪ 1 ಟ್ರಿಲಿಯನ್ ಡಾಲರ್ …
Read More »ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಕೊಪ್ಪಳ: ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಸಂಸದ ಯದುವೀರ್ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರುವ ಐತಿಹಾಸಿಕ ಅಂಜನಾದ್ರಿ ಪರ್ವತಕ್ಕೆ ಯದುವೀರ್ ಅವರು ಭೇಟಿ ನೀಡಿದ್ದಾರೆ. ಬೆಟ್ಟದ 575 ಮೆಟ್ಟಿಲೇರುವ ಮೂಲಕ ಹನುಮನ ದರ್ಶನ ಪಡೆದಿದ್ದಾರೆ. ಈ ವೇಳೆ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Read More »ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಡಿಕೆಶಿ ಆಪ್ತ ಎಂಎಲ್‌ಸಿ ರವಿ ಆಯ್ಕೆ – ಸಿದ್ದು ಆಪ್ತ ರಾಜಣ್ಣಗೆ ನಿರಾಸೆ
ಬೆಂಗಳೂರು: ರಾಜ್ಯ ಸಹಕಾರ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷ ಗಾದಿ ಕೊನೆಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಬಂಧಿ ಹಾಗೂ ಆಪ್ತರಾಗಿರುವ ವಿಧಾನ ಪರಿಷತ್ ಸದಸ್ಯ ರವಿ ಅವರ ಪಾಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಬಯ್ಯಾಪುರ ಆಯ್ಕೆಯಾಗಿದ್ದಾರೆ. ಅಪೆಕ್ಸ್ ಬ್ಯಾಂಕ್‌ಗ 4 ತಿಂಗಳ ಮೊದಲೇ ಚುನಾವಣೆ ನಡೆಯಬೇಕಿತ್ತು. ಆದರೆ ಆಕಾಂಕ್ಷಿಗಳ ಮಧ್ಯೆ ಪ್ರಭಲ ಸ್ಪರ್ಧೆ ಇದ್ದ ಕಾರಣ ಚುನಾವಣೆ ಮುಂದೂಡಿಕೆಯಾಗಿತ್ತು. ಅಂತಿಮವಾಗಿ ರವಿ ಮತ್ತು …
Read More »ಲವ್ವರ್ ಕರೆ ಮಾಡದ್ದಕ್ಕೆ ವಿಡಿಯೋ ಮಾಡ್ಕೊಂಡು ನೇಣಿಗೆ ಕೊರಳೊಡ್ಡಿದ ಗೃಹಿಣಿ
ಬಾಗಲಕೋಟೆ: ಪ್ರಿಯಕರ ಕರೆ ಮಾಡದೇ ಇದ್ದಿದ್ದಕ್ಕೆ ಹಾಗೂ ಕರೆ ಮಾಡಿದ್ರೂ ಸ್ವೀಕರಿಸದೇ ಇದ್ದಿದ್ದಕ್ಕೆ ಮನನೊಂದು ಎರಡು ಮಕ್ಕಳ ತಾಯಿಯೊಬ್ಬಳು ನೇಣಿಗೆ ಶರಣಾದ ಘಟನೆ ಬಾಗಲಕೋಟೆಯ ಬಾಂಬೆ ಕಾಲೋನಿಯಲ್ಲಿ ನಡೆದಿದೆ. ಮೆಹಬೂಬ್ ಬಿ (27) ನೇಣಿಗೆ ಶರಣಾದ ಮಹಿಳೆ. ಆತ್ಮಹತ್ಯೆಗೂ ಮುನ್ನ, ನೇಣು ಬಿಗಿದುಕೊಳ್ಳುವುದನ್ನು ವಿಡಿಯೋ ಮಾಡಿ, ಪ್ರಿಯಕರನಿಗೆ ಕಳಿಸಿದ್ದಾಳೆ. ಅಲ್ಲದೇ ಫೋನ್ ಮಾಡದೆ ಇದ್ದರೆ ನೇಣು ಹಾಕಿಕೊಂಡು ಸಾಯುತ್ತೇನೆ. ನಿನಗೂ ಹಾಗೂ ಎಲ್ಲರಿಗೂ ವಿಡಿಯೋ ಕಳಿಸುತ್ತೇನೆ. ನಿನ್ನ ಹೆಸರು ಬರೆದಿಟ್ಟು …
Read More »ಹಣದ ವಿಚಾರಕ್ಕೆ ಅಳಿಯಂದಿರ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ
ಹಾಸನ: ಹಣದ ವಿಚಾರಕ್ಕೆ ಒಂದೇ ಮನೆಯ ಅಳಿಯಂದಿರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ನಡೆದಿದೆ. ಮಹಮದ್ ಸಿದ್ದಿಕ್ (33) ಕೊಲೆಯಾದ ದುರ್ದೈವಿ. ಸುಜೀತ್ (29) ಕೊಲೆಗೈದ ಆರೋಪಿಯಾಗಿದ್ದಾನೆ. ಒಂದು ವರ್ಷದ ಹಿಂದೆ ತಂಗಿ ದಿವ್ಯಾಳಿಗೆ ಅಕ್ಕ ರೇಷ್ಮಾ 50 ಸಾವಿರ ರೂ. ಸಾಲ ಕೊಟ್ಟಿದ್ದರು. ಹಣವನ್ನು ವಾಪಾಸ್ ಕೊಡುವಂತೆ ರೇಷ್ಮಾ, ತಂಗಿ ದಿವ್ಯಾಳನ್ನು ಕೇಳಿದ್ದರು. ಇದೇ ವಿಚಾರಕ್ಕೆ ರೇಷ್ಮಾ ಪತಿ ಮಹಮದ್ ಸಿದ್ದಿಕ್ …
Read More »ನನ್ನ ದವಡೆ ಮೇಲೆ ಇಂದಿಗೂ ಗಾಯದ ಗುರುತಿದೆ: ಸಿಎಂ ವಿಜಯ್‌ಗೆ ಸ್ಟಾಲಿನ್ ತಿರುಗೇಟು
ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ತಮ್ಮ ದವಡೆಯ ಮೇಲೆ ಒಂದು ಕೈಯಿಟ್ಟು ಸನ್ನೆ ಮಾಡಿ ವ್ಯಂಗ್ಯವಾಡಿದ್ದ ಮುಖ್ಯಮಂತ್ರಿ ಜೋಸೆಫ್ ವಿಜಯ್‌ಗೆ ಡಿಎಂಕೆ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ `ತಂಬಿ’ ಅಂತಲೇ ತಿರುಗೇಟು ನೀಡಿದ್ದಾರೆ. ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರವನ್ನು ವಜಾಗೊಳಿಸಿದ ಬಳಿಕ ಪೊಲೀಸರು ತಮ್ಮನ್ನು ಬಂಧಿಸಿದ ಘಟನೆ ಹಾಗೂ 1976ರಲ್ಲಿ ಜೈಲಿನಲ್ಲಿ ಅನುಭವಿಸಿದ ಭೀಕರ ಯಾತನೆಗಳನ್ನು ನೆನಪಿಸಿಕೊಂಡಿರುವ ಸ್ಟಾಲಿನ್, ತಮ್ಮ `ಎಕ್ಸ್’ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. 1976ರ ಜನವರಿ 31ರಂದು …
Read More »ಆನ್‌ಲೈನ್ ಶಾಪಿಂಗ್ ಮಾಡೋರು ತಿಳಿಯಲೇಬೇಕಾದ 7 ನಿಯಮಗಳೇನು?
ನವದೆಹಲಿ: ದೇಶದಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವ ಗ್ರಾಹಕರಿಗೆ ಇನ್ಮುಂದೆ ಹಲವು ಬದಲಾವಣೆಗಳು ಎದುರಾಗಲಿವೆ. ಇ-ಕಾಮರ್ಸ್ ವೇದಿಕೆಗಳು ಉತ್ಪನ್ನಗಳ ಬೆಲೆ, ರಿಯಾಯಿತಿ, ಸರ್ಚ್ ರಿಸಲ್ಟ್‌ಗಳು ಹಾಗೂ ಪ್ರಾಯೋಜಿತ ಉತ್ಪನ್ನಗಳನ್ನು ಪ್ರದರ್ಶಿಸುವ ರೀತಿಯಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಗ್ರಾಹಕರಿಗೆ ಹೆಚ್ಚಿನ ಬೆಲೆ ಪಾರದರ್ಶಕತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಗ್ರಾಹಕ ಸಂರಕ್ಷಣಾ (ಇ-ಕಾಮರ್ಸ್) ನಿಯಮಗಳು, 2020ಕ್ಕೆ ತಿದ್ದುಪಡಿ ಮಾಡಿದೆ. ಬೆಲೆ ಪಾರದರ್ಶಕತೆ, ಪ್ರಾಯೋಜಿತ ಉತ್ಪನ್ನಗಳ ಪ್ರದರ್ಶನ, ಸರ್ಚ್ ರಿಸಲ್ಟ್‌ಗಳಲ್ಲಿ ಹಸ್ತಕ್ಷೇಪ ಹಾಗೂ …
Read More »ಲಕ್ನೋ-ದಮ್ಮಾಮ್ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ – ಅಹಮದಾಬಾದ್‌ನಲ್ಲಿ ತುರ್ತು ಲ್ಯಾಂಡಿಂಗ್
ಅಹಮದಾಬಾದ್: ಲಕ್ನೋದಿಂದ ಸೌದಿ ಅರೇಬಿಯಾದ ದಮ್ಮಾಮ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ‘ಬಾಂಬ್’ ಎಂದು ಬರೆಯಲಾಗಿದ್ದ ಟಿಶ್ಯೂ ಪೇಪರ್ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನವನ್ನು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಗುರುವಾರ ಸಂಜೆ ಸುಮಾರು 5:55ಕ್ಕೆ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಸಿಬ್ಬಂದಿ ಸೇರಿದಂತೆ ಒಟ್ಟು 133 ಮಂದಿ ವಿಮಾನದಲ್ಲಿದ್ದರು. ತುರ್ತು ಲ್ಯಾಂಡಿಂಗ್ ಬಳಿಕ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಲಾಯಿತು. ಟಿಶ್ಯೂ ಪೇಪರ್‌ನಲ್ಲಿ `ಬಾಂಬ್’ ಎಂಬ ಪದ …
Read More »
Laxmi News 24×7