Breaking News

ಹಳ್ಳದ ನೀರಲ್ಲಿ ಮುಳುಗಿ ಇಬ್ಬರು ಮಕ್ಕಳು ದುರ್ಮರಣ

Spread the love

ರಾಮನಗರ: ಆಟವಾಡಲು ತೋಟಕ್ಕೆ ಹೋಗಿದ್ದ ಮಕ್ಕಳು  ಹಳ್ಳದ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಕನಕಪುರ ತಾಲೂಕಿನ ಗುಣಗನಹಳ್ಳಿ ಗ್ರಾಮದಲ್ಲಿ ನಡೆದಿದೆ

ಗ್ರಾಮದ ಶ್ರೀನಿವಾಸ್ ಹಾಗೂ ಪದ್ಮಾವತಿ ಪುತ್ರ ಮಧು (14) ಹಾಗೂ ನಾರಾಯಣ್-ಮಾಧುರಿ ಎಂಬುವವರ ಪುತ್ರ ಶ್ರೀಹರಿ (8) ಮೃತ ಮಕ್ಕಳು.

ಕೆಲ ದಿನಗಳಿಂದ ಸುರಿದ ಮಳೆಯಿಂದ ಗ್ರಾಮದ ಹೊರವಲಯದ ಹಳ್ಳ ತುಂಬಿತ್ತು. ನಿನ್ನೆ ತೋಟಕ್ಕೆ ಆಟವಾಡಲು ಹೋಗಿದ್ದ ಮಕ್ಕಳು, ಹಳ್ಳದಲ್ಲಿ ಈಜಾಡುವಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾಸ್ಥಳಕ್ಕೆ ಕೋಡಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ

Spread the loveವಿಜಯಪುರ: ಬರಗಾಲ ಪೀಡಿತ ಪಟ್ಟಿಯಿಂದ  ವಿಜಯಪುರ  ಜಿಲ್ಲೆಯ ಇಂಡಿ, ಚಡಚಣ ತಾಲೂಕು ಕೈಬಿಟ್ಟ ಹಿನ್ನೆಲೆ ಇಂಡಿ  ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ