Breaking News

Daily Archives: ಸೆಪ್ಟೆಂಬರ್ 8, 2026

ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆ ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿ ಭಾಗಶಃ ಅಂಗೀಕಾರ

ಬೆಂಗಳೂರು: ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆ ಪ್ರಶ್ನಿಸಿ ಕೊಲೆ ಆರೋಪಿ ದರ್ಶನ್   ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಭಾಗಶಃ ಅಂಗೀಕಾರ ಮಾಡಿದೆ. ಹೈಕೋರ್ಟ್ ನ್ಯಾ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ. ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ದರ್ಶನ್ ಅರ್ಜಿಯನ್ನು ಭಾಗಶ: ಅಂಗೀಕಾರ ಮಾಡಿದೆ. ಜೊತೆಗೆ ಯಾವುದೇ ವಾದ-ಪ್ರತಿವಾದಕ್ಕೆ ಅವಕಾಶ ನೀಡದೇ ಒಂದು ವಾರದಲ್ಲಿ ಹೊಸ ಆದೇಶ ನೀಡಲು ಸೆಷನ್ಸ್ ಕೋರ್ಟ್‌ಗೆ ಸೂಚನೆ ನೀಡಿದೆ. ಪ್ರದೋಷ್ ಮಾಫಿ ಸಾಕ್ಷಿ …

Read More »

ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ ಆದ್ಮೇಲೆ ಪಾದಯಾತ್ರೆ ಫಿಕ್ಸ್ ಆಗಿದೆ – ಯತ್ನಾಳ್

ವಿಜಯಪುರ: ಬಿವೈ ವಿಜಯೇಂದ್ರ  ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ ಆದ್ಮೇಲೆ ಪಾದಯಾತ್ರೆ ಫಿಕ್ಸ್ ಆಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಹೇಳಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ ಅಶೋಕ್, ಸುನೀಲ್ ಕುಮಾರ್ ಎಲ್ಲರೂ ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದರು. ಆಗ ವಿಜಯೇಂದ್ರ 5 ನಿಮಿಷ ಬಾವಿಯಲ್ಲಿ ನಿಲ್ಲಲ್ಲಿಲ್ಲ. ಬರಿ ಪುಕ್ಸಟ್ಟೆ ಒಂದು ಪಾದಯಾತ್ರೆ ಮಾಡಿದ್ರೆ ಕ್ರೆಡಿಟ್ ಬರುತ್ತಾ? ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ …

Read More »

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು – ಪ್ರಿಯಕರನಿಂದ ಕೊಲೆ ಶಂಕೆ

ಚಿಕ್ಕಬಳ್ಳಾಪುರ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ  ತಾಲೂಕು ಚೊಕ್ಕಹಳ್ಳಿ  ಗ್ರಾಮದ ಬಾಡಿಗೆ ಮನೆಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕು ಇನಮಿಂಚೇನಹಳ್ಳಿಯ ನಿವಾಸಿ ಚೈತ್ರಾ ಮೃತ ಮಹಿಳೆ. ಚೈತ್ರಾ 7-8 ವರ್ಷಗಳ ಹಿಂದೆ ಗಂಡನನ್ನ ಬಿಟ್ಟು ಬೇರೆ ಮನೆಯಲ್ಲಿ ವಾಸವಾಗಿದ್ದರು. 10 ಹಾಗೂ 12 ವರ್ಷದ ಮಕ್ಕಳೊಂದಿಗೆ ಚೈತ್ರಾ ಬೇರೆ ವಾಸವಾಗಿದ್ದರು. ಕೋಲಾರ ಮೂಲದ ಪ್ರಿಯಕರ ಶಬ್ಬೀರ್ ಎಂಬಾತನ ವಿರುದ್ಧ ಹಲ್ಲೆ, ಕೊಲೆ ಆರೋಪ ಕೇಳಿಬಂದಿದೆ. ಚೈತ್ರಾಳನ್ನ …

Read More »

ಮಹದೇವಪ್ಪಣ್ಣ ನನಗೆ ತಂದೆ ಸಮಾನ, ಅವರೇ ಆ ಮನೆಯಲ್ಲಿರಲಿ: ಬೈರತಿ ಸುರೇಶ್

ಬೆಂಗಳೂರು: ನಮ್ಮ ನಡುವೆ ಯಾವುದೇ ಮನೆ ಗಲಾಟೆ ಇಲ್ಲ. ತಪ್ಪು ಮಾಹಿತಿ ಹೇಗೆ ಹರಡಿತೋ ಗೊತ್ತಿಲ್ಲ ಎಂದು ಸಾರಿಗೆ ಸಚಿವ ಬೈರತಿ ಸುರೇಶ್  ಹೇಳಿದ್ದಾರೆ. ಸರ್ಕಾರಿ ನಿವಾಸ ಹಂಚಿಕೆ ವಿಚಾರವಾಗಿ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮತ್ತು ತನ್ನ ಮಧ್ಯೆ ಕಿತ್ತಾಟ ನಡೆಯುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬೈರತಿ ಸುರೇಶ್ ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿದ್ದಾರೆ. ನಮ್ಮ ನಡುವೆ ಯಾವುದೇ ಮನೆ ಗಲಾಟೆ ಇಲ್ಲ. ತಪ್ಪು ಮಾಹಿತಿ ಹೇಗೆ ಹರಡಿತೋ …

Read More »

2,800 ಕಿ.ಮೀ. ಸರಕು ಸಾಗಣೆ ಕಾರಿಡಾರ್ ಲೋಕಾರ್ಪಣೆಗೊಳಿಸಿ ಯುಪಿಎ ವಿರುದ್ಧ ಮೋದಿ ವಾಗ್ದಾಳಿ

ವಡೋದರಾ: ಅಟಲ್ ಬಿಹಾರಿ ವಾಜಪೇಯಿ ಕಂಡ ಸರಕು ಸಾಗಣೆ ಕಾರಿಡಾರ್ ನಿರ್ಮಾಣದ ಕನಸನ್ನು ನಾವು ಈಗ ಪೂರ್ಣಗೊಳಿಸಿದ್ದೇವೆ ಎಂದು ಹೇಳುವ ಮೂಲಕ ಯುಪಿಎ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ನಡೆದ ‘ನಮೋ ಫಾರ್ ವಿಕಸಿತ್ ಭಾರತ್’ ಕಾರ್ಯಕ್ರಮದಲ್ಲಿ 35,000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಇದರಲ್ಲಿ 2,800 ಕಿ.ಮೀ ಉದ್ದದ ಸರಕು ಸಾಗಣೆ ಕಾರಿಡಾರ್  …

Read More »

ತಮಿಳುನಾಡಿಗೆ 6,000 ಕ್ಯೂಸೆಕ್‌ ನೀರು ಬಿಡಲು CWRC ಆದೇಶಿಸಿದೆ – ಇದು ನೋವಿನ ಸಂಗತಿ: ಚಲುವರಾಯಸ್ವಾಮಿ‌

ಬೆಂಗಳೂರು: ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಬಿಡಲು CWRC  ಆದೇಶಿಸಿದೆ. ಇದು ನೋವಿನ ಸಂಗತಿಯಾಗಿದ್ದು, ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕ್ತೀವಿ ಅಂತ ಜಲಸಂಪನ್ಮೂಲ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು. ಬೆಂಗಳೂರಿನಲ್ಲಿ  ಮಾತನಾಡಿದ ಅವರು, ಬಹಳ ಕಠಿಣ ಪರಿಸ್ಥಿತಿ ಇದೆ, ವಸ್ತು ಸ್ಥಿತಿ ಕಷ್ಟ ಇದೆ. ಇದೊಂದು ನಮಗೆ ಬಹಳ ನೋವಿನ ಸಂಗತಿ. ತುಂಬಾ ಬೇಸರವೂ ಆಗುತ್ತದೆ. ಅಧಿಕಾರಿಗಳೆಲ್ಲ ಮಾಹಿತಿಯೊಂದಿಗೆ ಹೋಗಿ ವಾದ ಮಾಡಿದ್ದಾರೆ. ಇದಾದ ಬಳಿಕ ನೀರು ನಿರ್ವಹಣಾ ಪ್ರಾಧಿಕಾರದ …

Read More »

2 ದಿನ ಪೊಲೀಸ್‌ ಕಸ್ಟಡಿಗೆ ಪ್ರಜ್ವಲ್‌ ರೇವಣ್ಣ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನನ್ನು ಎರಡು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಇಂದು ಪ್ರಜ್ವಲ್‌ನನ್ನು 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲು ಪೊಲೀಸರು ಕೋರ್ಟ್‌ನಲ್ಲಿ ಮನವಿ ಮಾಡಿದರು. ಈ ಪ್ರಕರಣದಲ್ಲಿ ಪ್ರತಾಪ್ ಎ1 ಆರೋಪಿ ಹಾಗೂ ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದು, ತನಿಖೆಗೆ ಅಗತ್ಯವಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಪ್ರಜ್ವಲ್ …

Read More »

ಆಂಬ್ಯುಲೆನ್ಸ್ ಖಾಸಗೀಕರಣಕ್ಕೆ ಡಿಕೆಶಿ ಕ್ಯಾಬಿನೆಟ್ ಒಪ್ಪಿಗೆ – ಚಾಲಕರಿಗೆ ಟೈಮ್ ಲೈನ್, ಮೀರಿದ್ರೆ ದಂಡ

ಬೆಂಗಳೂರು: ಈ ಹಿಂದೆ ದಿನೇಶ್ ಗುಂಡೂರಾವ್  ಅವರು ಆರೋಗ್ಯ ಸಚಿವರಾಗಿದ್ದಾಗ 108 ಆಂಬುಲೆನ್ಸ್‌ಗಳನ್ನು  ಸರ್ಕಾರವೇ ನಿರ್ವಹಣೆ ಮಾಡುತ್ತೆ ಎಂದಿದ್ದರು. ಇದೀಗ ಈಗ ಯುಟಿ ಖಾದರ್  ಆರೋಗ್ಯ ಸಚಿವರಾದ ಮೇಲೆ ಆಂಬುಲೆನ್ಸ್‌ಗಳನ್ನು ಖಾಸಗೀಕರಣ ಮಾಡೋದಕ್ಕೆ ಹೊರಟಿದ್ದಾರೆ. ಇಡೀ ಕ್ಯಾಬಿನೆಟ್ ಆಂಬುಲೆನ್ಸ್ ಖಾಸಗೀಕರಣಕ್ಕೆ ಒಪ್ಪಿದೆ. ಈ ಬಗ್ಗೆ ಸ್ವತ: ಆರೋಗ್ಯ ಸಚಿವರೇ ಹೇಳಿಕೆ ಕೊಟ್ಟಿದ್ದಾರೆ. ಮತ್ತೊಂದು ಕಡೆ 108 ಆಂಬುಲೆನ್ಸ್ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬಗ್ಗೆ ಸಚಿವರು ಮಾತನಾಡಿ, 108 ಆಂಬುಲೆನ್ಸ್ …

Read More »

ಮಹಾರಾಷ್ಟ್ರದಲ್ಲಿ ಟ್ರಕ್, ಪಿಕಪ್ ವಾಹನ ಮುಖಾಮುಖಿ ಡಿಕ್ಕಿ – 6 ಮಂದಿ ದುರ್ಮರಣ

ಮುಂಬೈ: ವೇಗವಾಗಿ ಬಂದ ಟ್ರಕ್  ಹಾಗೂ ಪಿಕಪ್  ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ  ಗೋಂದಿಯಾ  ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ತಡರಾತ್ರಿ ನಗ್ರಾ ಪ್ರದೇಶದಲ್ಲಿ ಗೋಂದಿಯಾ-ಬಾಲಾಘಾಟ್ ಮಾರ್ಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅತಿವೇಗದಲ್ಲಿ ಬಂದ ಟ್ರಕ್ ಪಿಕಪ್ ವಾಹನಕ್ಕೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪಿಕಪ್‌ನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಏಳು …

Read More »

ಮಾತು ಕೇಳದ ಅಧಿಕಾರಿಗಳನ್ನ ಕೆಲಸದಿಂದ ವಜಾ ಮಾಡ್ತೀನಿ: ಬಸವರಾಜ ರಾಯರೆಡ್ಡಿ ವಾರ್ನಿಂಗ್‌

ಕೊಪ್ಪಳ: ಯಾವ ಅಧಿಕಾರಿ ಮಾತು ಕೇಳಲ್ಲ ಹೇಳಿ, ಮಾತು ಕೇಳದ ಅಧಿಕಾರಿಗಳನ್ನ ಕೆಲಸದಿಂದ ವಜಾ ಮಾಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಖಡಕ್‌ ಎಚ್ಚರಿಕೆ ನೀಡಿದರು. ಕೊಪ್ಪಳದ ಗುನ್ನಾಳ ಗ್ರಾಮದಲ್ಲಿ ಪದವಿಪೂರ್ವ ಕಾಲೇಜು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೇ ವೇಳೆ ನಾನು ಫುಲ್ ಬ್ಯುಸಿ ಇರ್ತೇನೆ. ಡಿಜಿಟಲ್ ಸಿಗ್ನೇಚರ್ ಮಾಡಿ ಲೆಟರ್ ಕೊಟ್ಟುಬಿಡಿ ಎಂದು ಪಿಎಗೆ ಸೂಚಿಸಿದರು. ಯಾರು ಮಾತು ಕೇಳುವುದಿಲ್ಲ ನನಗೆ ಹೇಳು, ಅವರನ್ನ …

Read More »