ಮುಂಬೈ: ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಪುಣೆ ಪೊಲೀಸರು ಶನಿವಾರ (ಸೆ.5) ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿ ಚೇತನ್ ಚೌಧರಿಯ ಸ್ನೇಹಿತ ರಿತೇಶ್ ಹಂಗೆಯನ್ನು ಪೊಲೀಸರು ಬಂಧಿಸಿದ್ದು, ರಿತೇಶ್ ಕೂಡ ಈ ಕೊಲೆಯಲ್ಲಿ ಭಾಗಿಯಾಗಿದ್ದ ಹಾಗೂ ಕೊಲೆ ಸಂಚು ಹೂಡಿರುವ ಬಗ್ಗೆ ಆತನಿಗೆ ಮಾಹಿತಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಂಧಿತ ರಿತೇಶ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೊಲೆಯಲ್ಲಿ ಆತನ ಪಾತ್ರ ಹಾಗೂ ಇನ್ನೂ ಯಾರೆಲ್ಲ ಭಾಗಿಯಾಗಿದ್ದಾರೆ ಎನ್ನುವ …
Read More »Daily Archives: ಸೆಪ್ಟೆಂಬರ್ 6, 2026
ಹೊಸನಗರದ ಟೀಚರ್ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ
ಶಿವಮೊಗ್ಗ: ನವೀನ ತಂತ್ರಗಳ ಮೂಲಕ ಮಕ್ಕಳಿಗೆ ಪಾಠ ಮಾಡುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್. ರತ್ನಾಕುಮಾರಿ ಅವರು ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರಿಂದ 2026ನೇ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಬಾರಿ ಕರ್ನಾಟಕದಿಂದ ಪ್ರಶಸ್ತಿ ಪಡೆದ ಏಕೈಕ ಶಿಕ್ಷಕಿ ಅವರಾಗಿದ್ದಾರೆ. ಶಿಕ್ಷಕಿಯ ವಿಶೇಷ ಪಾಠ ಮಾಡುವ ಕಲೆಗೆ ಈ ಬಾರಿ ಪ್ರಶಸ್ತಿ ಒಲಿದಿದೆ. ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ …
Read More »ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಹೊತ್ತಿ ಉರಿದ ಕಾರು; ಚಾಲಕ ಪಾರು
ಸಿರುವ ಸ್ಕನದ್ ಎಂಬುವವರಿಗೆ ಸೇರಿದ KA05 ME 7634 ಸಂಖ್ಯೆಯ ಕಾರು ಎಕ್ಸ್‌ಪ್ರೆಸ್‌ವೇನಲ್ಲಿ ಹೊತ್ತಿ ಉರಿದಿದೆ. ಅನಾಹುತ ಹೇಗಾಯ್ತು? ಘಟನೆ ನಡೆದ ಸಂದರ್ಭದಲ್ಲಿ ಸ್ಕನದ್ ಜೊತೆಗೆ ಮತ್ತೊಬ್ಬರು ಕಾರಿನಲ್ಲಿದ್ದರು. ಬಟ್ಟೆ ವ್ಯಾಪಾರ ಮುಗಿಸಿಕೊಂಡು ಮನೆಗೆ ತೆರಳುತ್ತಿರಬೇಕಾದ್ರೆ, ಕಾರಿನಲ್ಲಿ ಏಕಾಏಕಿ ಬೆಂಕಿ (Car Fire) ಕಾಣಿಸಿಕೊಂಡಿದೆ. ತಕ್ಷಣವೇ ಇಬ್ಬರು ಕಾರಿನಿಂದ ಕೆಳಗಿಳಿದಿದ್ದಾರೆ. ಕ್ಷಣಾರ್ಧದಲ್ಲಿ ಅಗ್ನಿಜ್ವಾಲೆ ಹಬ್ಬಿದ್ದು, ಇಡೀ ಕಾರು ಹೊತ್ತಿಉರಿದಿದೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ, ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ …
Read More »ಕಾರಿಗೆ BMW RR ಬೈಕ್ ಡಿಕ್ಕಿ – ಕಾರಲ್ಲಿದ್ದ ಯುವಕ ಸಾವು
ಚಿಕ್ಕಬಳ್ಳಾಪುರ: ಸ್ವಿಫ್ಟ್ ಕಾರಿಗೆ ಬಿಎಂಡಬ್ಲೂ ಆರ್‌ಆರ್ ಬೈಕ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಯುವಕ ಸಾವನ್ನಪ್ಪಿದ ಘಟನೆ ದೇವನಹಳ್ಳಿ ತಾಲೂಕು ಚಿಕ್ಕಸಣ್ಣೆ ಗೇಟ್ ಸಿಗ್ನಲ್ ಬಳಿ ನಡೆದಿದೆ. ದೇವನಹಳ್ಳಿ ತಾಲೂಕಿನ ನರಗನಹಳ್ಳಿ ಗ್ರಾಮದ ನಿವಾಸಿ ನವೀನ್ ಕುಮಾರ್ (25) ಸಾವನ್ನಪ್ಪಿದ ಯುವಕ. ಬಿಎಂಡಬ್ಲೂ ಆರ್‌ಆರ್ ಬೈಕ್ ಸವಾರ ರಾಕೇಶ್, ಅಪಘಾತದ ಬಳಿಕ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ದೇವನಹಳ್ಳಿ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
Read More »ಹಜ್ ಯಾತ್ರಿಕರಿಗೆ ಎರಡು ಹಂತದ ವೈದ್ಯಕೀಯ ತಪಾಸಣೆ ಕಡ್ಡಾಯ
ಬೆಂಗಳೂರು: ಹಜ್ ಯಾತ್ರೆಗೆ ಆಯ್ಕೆಯಾಗಿರುವ ಯಾತ್ರಿಕರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ಮಹತ್ವದ ಸೂಚನೆ ನೀಡಿದೆ. ಹಜ್ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬ ಯಾತ್ರಿಕರಿಗೂ ಎರಡು ಹಂತಗಳ ವೈದ್ಯಕೀಯ ತಪಾಸಣೆ ಮತ್ತು ಫಿಟ್ನೆಸ್ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ಮೊದಲ ಹಂತದ ಪ್ರಾಥಮಿಕ ಫಿಟ್ನೆಸ್ ಪ್ರಮಾಣಪತ್ರವನ್ನು ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ರಾಜ್ಯ ಹಜ್ ಯಾತ್ರಿಕರ ಆರೋಗ್ಯ ಮತ್ತು ಲಸಿಕಾ ಶಿಬಿರದ ರಾಜ್ಯ ನೋಡಲ್ ಅಧಿಕಾರಿ ಡಾ. ಮಹಮೂದ್ …
Read More »ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ವೇಳೆ ಗೋಪುರದಿಂದ ಬಿದ್ದು ಯುವಕ ದುರ್ಮರಣ
ಚಿಕ್ಕಬಳ್ಳಾಪುರ: ಶ್ರಾವಣ ಮಾಸದ ಕೊನೆಯ ಶನಿವಾರದ ಅಂಗವಾಗಿ ದೇವಾಲಯಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡುತ್ತಿದ್ದ ವೇಳೆ ಗೋಪುರದಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಯುವಕನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ. ಗುಡಿಬಂಡೆ ಪಟ್ಟಣದ 3ನೇ ವಾರ್ಡ್‌ನ ಬೆಟ್ಟದ ಕೆಳಗಿನ ಪೇಟೆ ನಿವಾಸಿ ರಹ್ಮತ್ ಮೃತ ದುರ್ದೈವಿ. ಶ್ರಾವಣ ಶನಿವಾರದ ವಿಶೇಷ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಸಂತೆ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿದ್ಯುತ್ …
Read More »5 ವರ್ಷಗಳಿಂದ ದನದ ಕೊಟ್ಟಿಗೆಯಂತಿರುವ ಶೆಡ್‌ನಲ್ಲೇ 172 ವಿದ್ಯಾರ್ಥಿಗಳ ವಾಸ – 92 ಗಂಡು ಮಕ್ಕಳಿಗೆ ಐದೇ ಶೌಚಾಲಯ, 80 ಹೆಣ್ಣು ಮಕ್ಕಳಿಗೆ ಇಲ್ಲ ಕನಿಷ್ಠ ಸೌಕರ್ಯ
ಹಾಸನ: ದನದ ಕೊಟ್ಟಿಗೆಯಂತಿರುವ ಎರಡು ಶೆಡ್‌ಗಳಲ್ಲಿ ವಸತಿ ಶಾಲೆ ನಡೆಸುತ್ತಿದ್ದು ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿರುವ ಘಟನೆ ಹಾಸನ ತಾಲೂಕಿನ, ಶಾಂತಿಗ್ರಾಮದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿದೆ. 92 ಬಾಲಕರು ಹಾಗೂ 80 ಬಾಲಕಿಯರು ಅಕ್ಷರಶಃ ನರಕದಲ್ಲಿ ದಿನ ಕಳೆಯುತ್ತಿದ್ದು, ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಶಾಲೆಯ ಪ್ರಾಂಶುಪಾಲರು, ವಾರ್ಡನ್ ಹಲವು ಬಾರಿ ಮೇಲಾಧಿಕಾರಿಗಳಿಗೆ ಪತ್ರ ಬರೆದು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು …
Read More »ಅರಣ್ಯ ಸಂಚಾರಿದಳದಿಂದ ದಿಢೀರ್ ದಾಳಿ – 21 ಕೆಜಿ ಜಿಂಕೆ ಮಾಂಸ ವಶ, ಅರೋಪಿಗಳು ಪರಾರಿ
ಶಿವಮೊಗ್ಗ: ರಿಪ್ಪನ್‌ಪೇಟೆಯ ಬರುವೆ ಗ್ರಾಮದ ಬಳಿ ಅರಣ್ಯ ಸಂಚಾರಿದಳದ ಸಿಬ್ಬಂದಿ ದಾಳಿ ನಡೆಸಿ 21 ಕೆಜಿ ಜಿಂಕೆ ಮಾಂಸ ವಶಕ್ಕೆ ಪಡೆದಿದ್ದಾರೆ. ದುಷ್ಕರ್ಮಿಗಳು ಜಿಂಕೆಯನ್ನು ಬೇಟೆಯಾಡಿ ಎರ್ಟಿಗಾ ಕಾರಿನ ಮೂಲಕ ಮಾಂಸ ಸಾಗಿಸುತ್ತಿದ್ದರು. ಈ ಬಗ್ಗೆ ಮಡಿಕೇರಿಯ ಅರಣ್ಯ ಸಂಚಾರಿದಳದ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರ್ ಅವರ ಮಾರ್ಗದರ್ಶನದಲ್ಲಿ ಸಾಗರದ ಅರಣ್ಯ ಸಂಚಾರಿದಳ ಪಿಎಸ್ಐ ಕೆ. ವಿನಾಯಕ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ ಕಾರು ಹಾಗೂ ಮಾಂಸವನ್ನು …
Read More »ಫಸ್ಟ್ ಟೈಮ್ ವಿಮಾನ ಏರಿದ ಸರ್ಕಾರಿ ಶಾಲಾ ಮಕ್ಕಳು; ಮುಂಬೈ ಪ್ರವಾಸಕ್ಕೆ ಫುಲ್ ಖುಷ್!
ಮುಂಬೈ ಪ್ರವಾಸದ ವೇಳೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಚೈತ್ಯಭೂಮಿ, ನಿವಾಸ ಸೇರಿದಂತೆ ಹಲವು ಪ್ರಸಿದ್ಧ ಸ್ಥಳಗಳಿಗೆ ಮಕ್ಕಳು ಭೇಟಿ ನೀಡಲಿದ್ದಾರೆ. ಅಂಬೇಡ್ಕರ್ ಅವರ ಜೀವನ, ಹೋರಾಟ, ಸಾಧನೆ ಹಾಗೂ ಚರಿತ್ರೆಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಪ್ರವಾಸ ಆಯೋಜಿಸಲಾಗಿದೆ. ದೇವನಹಳ್ಳಿ ಭಾಗದ ಸಮಾಜ ಸೇವಕ ಎಂ.ಪಿ ಗಿರೀಶ್ ಅವರು ಮಕ್ಕಳಿಗಾಗಿ ಈ ಪ್ರವಾಸ ಆಯೋಜಿಸಿದ್ದಾರೆ. ಎರಡು ದಿನಗಳ ಕಾಲ ಮುಂಬೈನ ಪ್ರಮುಖ ಪ್ರವಾಸಿ ತಾಣಗಳನ್ನ ಮಕ್ಕಳು ವೀಕ್ಷಿಸಲಿದ್ದಾರೆ. …
Read More »GBA ಕಾಮಗಾರಿ ವೇಳೆ ಗ್ಯಾಸ್ ಪೈಪ್‌ಗೆ ಹಾನಿ – 8 ಅಡಿ ಎತ್ತರಕ್ಕೆ ಚಿಮ್ಮುತ್ತಿರುವ ಗ್ಯಾಸ್
ಬೆಂಗಳೂರು: ಹೆಚ್‌ಎಎಲ್ ಪೊಲೀಸ್ ಠಾಣೆಯ ಸಮೀಪ GBA ಕಾಮಗಾರಿ ವೇಳೆ ಗ್ಯಾಸ್ ಪೈಪ್‌ಗೆ ಹಾನಿಯಾಗಿ ಗ್ಯಾಸ್ ಸೋರಿಯಾಗುತ್ತಿದೆ. ಜಿಬಿಎ ಕಾಮಗಾರಿ ವೇಳೆ ಮನೆಗಳಿಗೆ ಸಂಪರ್ಕ ನೀಡುವ ಭೂಗತ ಗೇಲ್ ಗ್ಯಾಸ್ ಪೈಪ್‌ಗೆ ಡ್ಯಾಮೆಜ್ ಉಂಟಾಗಿದೆ. ಇದರಿಂದ 8 ಅಡಿಯಷ್ಟು ಎತ್ತರಕ್ಕೆ ಗ್ಯಾಸ್ ಚಿಮ್ಮುತ್ತಿದೆ. ಗ್ಯಾಸ್ ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಸ್ಥಳದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ. ಗ್ಯಾಸ್ ಸೋರಿಕೆಯ ಜಾಗದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ದೂರದಲ್ಲಿಯೇ ವಾಹನಗಳು ಸಂಚರಿಸುತ್ತಿವೆ.
Read More »
Laxmi News 24×7