Breaking News

ವೀಡಿಯೋ ವೈರಲ್ ಬಳಿಕ ತಂದೆ, ಸಹೋದರನಿಂದ ಯುವತಿಯ `ಮರ್ಯಾದಾ ಹತ್ಯೆ’ – ಅಪಘಾತದಂತೆ ಬಿಂಬಿಸಲು ಯತ್ನ

Spread the love

ಅಹಮದಾಬಾದ್: ಯುವಕನೊಂದಿಗಿನ ವೀಡಿಯೋ ವೈರಲ್  ಆದ ಬಳಿಕ ತಂದೆ ಹಾಗೂ ಸಹೋದರ ಸೇರಿಕೊಂಡು 22 ವರ್ಷದ ಯುವತಿಯನ್ನು ಹತ್ಯೆ ಮಾಡಿ, ಬಳಿಕ ಅದನ್ನು ರಸ್ತೆ ಅಪಘಾತದಂತೆ ಬಿಂಬಿಸಿದ ಘಟನೆ ಅಹಮದಾಬಾದ್‌ನಲ್ಲಿ  ನಡೆದಿದೆ.

ಸೋಫಿಯಾ ಹತ್ಯೆಯಾದ ಯುವತಿ. ಸೋಫಿಯಾ ಆಸ್ಪತ್ರೆಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು ಒಂದು ತಿಂಗಳ ಹಿಂದೆ ನಡೆದ ಈ ಘಟನೆ ಆರಂಭದಲ್ಲಿ ಹಿಟ್ & ರನ್ ಪ್ರಕರಣ ಎಂದು ದಾಖಲಾಗಿತ್ತು. ಆದರೆ ಪೊಲೀಸರು ನಡೆಸಿದ ತನಿಖೆಯಲ್ಲಿ ಕೊಲೆಯ ಸಂಚು ಬಯಲಾಗಿದೆ.

ಆಗಸ್ಟ್ 12ರ ರಾತ್ರಿ ಸೋಫಿಯಾ ತನ್ನ ತಂದೆ ಮೊಹಮದ್ ಫಾರೂಕ್ ಮತ್ತು ಸಹೋದರ 38 ವರ್ಷದ ಮೊಹಮದ್ ಹಬೀಲ್ ಅವರೊಂದಿಗೆ ಬೈಕ್‌ನಲ್ಲಿ ತೆರಳಿದ್ದರು. ಗೇಲ್ಜಿಪುರ ಗ್ರಾಮದ ಸಮೀಪದ ನಿರ್ಜನ ರಸ್ತೆಯೊಂದಕ್ಕೆ ಸಹೋದರ ಬೈಕ್ ತಿರುಗಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿಗೆ ತೆರಳಿದ ಬಳಿಕ ಹಬೀಲ್ ತನ್ನ ಸಹೋದರಿ ಸೋಫಿಯಾ ತಲೆಗೆ ಸುತ್ತಿಗೆಯಿಂದ ಮೂರು ಬಾರಿ ಹೊಡೆದಿದ್ದಾನೆ. ಬಳಿಕ ತಂದೆ-ಮಗ ಸೇರಿ ಆಕೆಯ ದೇಹವನ್ನು ಮುಖ್ಯ ರಸ್ತೆಯ ಬಳಿಗೆ ಕೊಂಡೊಯ್ದಿದ್ದಾರೆ. ಕೊಲೆ ನಡೆದಿರುವುದು ಗೊತ್ತಾಗದಂತೆ ಮಾಡಲು ಬೈಕ್‌ಗೂ ಹಾನಿ ಮಾಡಲಾಗಿತ್ತು. ವೇಗವಾಗಿ ಬಂದ ವಾಹನ ಹಿಂದಿನಿಂದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೋಫಿಯಾ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂಬಂತೆ ಇಡೀ ಘಟನೆಯನ್ನು ಸೃಷ್ಟಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ನಂತರ ಹಬೀಲ್ ಅಧಿಕಾರಿಗಳನ್ನು ಸಂಪರ್ಕಿಸಿ, ಗೇಲ್ಜಿಪುರ ಜಂಕ್ಷನ್ ಬಳಿ ವೇಗವಾಗಿ ಬಂದ ವಾಹನ ತಮ್ಮ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾನೆ. ಅಪಘಾತದಲ್ಲಿ ಸೋಫಿಯಾಗೆ ತಲೆಗೆ ಗಂಭೀರ ಗಾಯವಾಗಿದ್ದು, ತನಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಆತ ಪೊಲೀಸರಿಗೆ ತಿಳಿಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸೋಫಿಯಾಳನ್ನು ತಕ್ಷಣ ಸೋಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಆಕೆ ಮೃತಪಟ್ಟಿದ್ದಾಳೆ. ಪ್ರಕರಣದ ತನಿಖೆ ಮುಂದುವರಿದಂತೆ ಪೊಲೀಸರಿಗೆ ಕುಟುಂಬದ ಸದಸ್ಯರ ಹೇಳಿಕೆಗಳ ಬಗ್ಗೆ ಅನುಮಾನ ಮೂಡಿದೆ. ಸುಮಾರು ಮೂರು ತಿಂಗಳ ಹಿಂದೆ ಸೋಫಿಯಾ ಒಬ್ಬ ವ್ಯಕ್ತಿಯೊಂದಿಗೆ ಇರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಎನ್ನಲಾಗಿದೆ.

ಈ ವಿಡಿಯೋದಿಂದ ಕುಟುಂಬದ ಮಾನ-ಮರ್ಯಾದೆಗೆ ಧಕ್ಕೆ ಉಂಟಾಗಿದೆ ಎಂದು ತಂದೆ ಮತ್ತು ಸಹೋದರ ಅಸಮಾಧಾನಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಅವಮಾನಕ್ಕೆ ಹೆದರಿ ಸೋಫಿಯಾಳನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದರು ಎಂಬ ಆರೋಪವೂ ತನಿಖೆಯಲ್ಲಿ ಬಹಿರಂಗವಾಗಿದೆ. ಪೊಲೀಸರ ಪ್ರಕಾರ, ಸೋಫಿಯಾಳನ್ನು ಹೊರಗೆ ಕರೆದುಕೊಂಡು ಹೋಗುವ ಮುನ್ನ ಹಬೀಲ್ ತನ್ನ ಪ್ಯಾಂಟ್‌ನಲ್ಲಿ ಕಬ್ಬಿಣದ ಸುತ್ತಿಗೆಯನ್ನು ಅಡಗಿಸಿಟ್ಟುಕೊಂಡಿದ್ದ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ನಡೆಸಿ, ಸಾಕ್ಷ್ಯಗಳನ್ನು ತಿರುಚಿ ಅದನ್ನು ರಸ್ತೆ ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಫಿಯಾಳ ತಂದೆ ಮೊಹಮದ್ ಫಾರೂಕ್ ಮತ್ತು ಸಹೋದರ ಮೊಹಮದ್ ಹಬೀಲ್ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರ ವಿರುದ್ಧವೂ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.


Spread the love

About Laxminews 24x7

Check Also

ಭಾರತ ರತ್ನ ಪ್ರೊ. ಸಿಎನ್‌ಆರ್‌ ರಾವ್‌ಗೆ ಎಸ್‌ಐಆರ್ ನೋಟಿಸ್ ಜಾರಿ ಮಾಡಿಲ್ಲ: ಜಿಬಿಎ ಸ್ಪಷ್ಟನೆ

Spread the loveಬೆಂಗಳೂರು: ಭಾರತ ರತ್ನ ಪ್ರೊ. ಸಿಎನ್‌ಆರ್‌ ರಾವ್ ಅವರಿಗೆ ಯಾವುದೇ ಎಸ್‌ಐಆರ್ ನೋಟಿಸ್ ಜಾರಿ ಮಾಡಿಲ್ಲ ಅಂತಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ