Breaking News

ಬಯಲುಸೀಮೆಯ ಬಹುದಿನದ ಕನಸು ನನಸು – ಕೋಟೆ ನಾಡು ಪ್ರವೇಶಿಸಿದ ಭದ್ರಾ ನೀರು

Spread the love

ಚಿತ್ರದುರ್ಗ: ಬಯಲುಸೀಮೆಯ ಬಹುದಿನದ ಕನಸಾದ ಭದ್ರಾ ನೀರು  ಕೊನೆಗೂ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿದೆ. ಸಂಭ್ರಮ -ಸಡಗರದಿಂದ ಜನರು ಭದ್ರೆಯನ್ನ ಸ್ವಾಗತಿಸಿದ್ದಾರೆ.

ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಬಳಿ ತರಳುಬಾಳು ಶಾಖಾ ಮಠದ ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ಬಾಗಿನ ಅರ್ಪಿಸಿ ಭದ್ರೆಯನ್ನ ಜನರು ಸ್ವಾಗತಿಸಿದರು.

ಬಾಗಿನ ಅರ್ಪಿಸುವ ವೇಳೆ ಸಾಣೇಹಳ್ಳಿಯ ತರಳುಬಾಳು ಶಾಖಾಮಠದ ಪಂಡಿತಾರಾಧ್ಯ ಸ್ವಾಮೀಜಿ ವ್ಯಂಗ್ಯವಾಡುವ ಭರಾಟೆಯಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ.

ಹೋರಾಟಗಾರರು ಹಾಗು ರೈತರ ಹೋರಾಟದ ಪರಿಣಾಮ ಭದ್ರಾ ಜಲಾಶಯದಿಂದ ನೀರು ಚಿತ್ರದುರ್ಗಕ್ಕೆ ಎಂಟ್ರಿಯಾಗಿದೆ. ಹೀಗಾಗಿ ಕೋಟೆ ನಾಡಿನ ಮಹಿಳೆಯರಿಂದ ಸಾಂಪ್ರದಾಯಿಕ ಬಾಗಿನ ಅರ್ಪಿಸಿದ್ದು, ಮುತ್ತೈದೆ ಭಾಗ್ಯ ಕರುಣಿಸು ಎಂದು ಪ್ರಾರ್ಥಿಸಿ ಬಾಗಿನ ಅರ್ಪಿಸಿದ್ದಾರೆ. ಈ ವೇಳೆ ಅವರ ಜೊತೆಗಿದ್ದ ಪಂಡಿತಾರಾದ್ಯ ಶ್ರೀಗಳು, ಮುತ್ತೈದೆ ಭಾಗ್ಯ ಕೋರುವ ವೇಳೆ ಬೇಗ ಸಾಯಲಿ ಎಂದು ವ್ಯಂಗ್ಯವಾಡಿದ್ದಾರೆ.

ಆಗ ನೆರೆದಿದ್ದವರೆಲ್ಲಾ ನಗೆಗಡಲಲ್ಲಿ ತೇಲಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಶ್ರೀಗಳ ಈ ವ್ಯಂಗ್ಯದ ಮಾತು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಹಲವರ ಕೆಂಗಣ್ಣಿಗೆ ಗುರಿಯಾಗಿದೆ.


Spread the love

About Laxminews 24x7

Check Also

ಭಾರತ ರತ್ನ ಪ್ರೊ. ಸಿಎನ್‌ಆರ್‌ ರಾವ್‌ಗೆ ಎಸ್‌ಐಆರ್ ನೋಟಿಸ್ ಜಾರಿ ಮಾಡಿಲ್ಲ: ಜಿಬಿಎ ಸ್ಪಷ್ಟನೆ

Spread the loveಬೆಂಗಳೂರು: ಭಾರತ ರತ್ನ ಪ್ರೊ. ಸಿಎನ್‌ಆರ್‌ ರಾವ್ ಅವರಿಗೆ ಯಾವುದೇ ಎಸ್‌ಐಆರ್ ನೋಟಿಸ್ ಜಾರಿ ಮಾಡಿಲ್ಲ ಅಂತಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ