ಸೂರತ್: ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಮಂದಿರಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶಾದ್ಯಂತ ದೇಣಿಗೆ ಸಂಗ್ರಹಿಸುತ್ತಿದ್ದು, ಇದುವರೆಗೂ 1,511 ಕೋಟಿ ರೂಪಾಯಿ ಸಂಗ್ರಹವಾಗಿರುವುದಾಗಿ ತಿಳಿದುಬಂದಿದೆ. ದೇಗುಲ ನಿರ್ಮಾಣಕ್ಕೆ ಜನವರಿ 15ರಂದು ದೇಣಿಗೆ ಸಂಗ್ರಹ ಕಾರ್ಯ ಆರಂಭಗೊಂಡಿದ್ದು, ಫೆ.11ರ ಗುರುವಾರ ಸಂಜೆಯವರೆಗೂ 1,511ಕೋಟಿ ರೂಪಾಯಿ ಸಂಗ್ರಹವಾಗಿದೆ. ಫೆಬ್ರವರಿ 27ರವರೆಗೂ ಈ ಕಾರ್ಯ ಮುಂದುವರೆಯಲಿದೆ ಎಂದು ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಮಾಹಿತಿ ನೀಡಿದ್ದಾರೆ. 492 ವರ್ಷಗಳ ನಂತರ ಜನರಿಗೆ …
Read More »ತುರ್ತು ಪರಿಸ್ಥಿತಿಯಲ್ಲಿ 112 ಸಂಖ್ಯೆ, ರಸ್ತೆ ನಿಯಮಗಳ ಪಾಲನೆ ಭಿತ್ತಿ ಚಿತ್ರಗಳನ್ನು ಅಂಟಿಸುವ ಮೂಲಕ ಡಿವೈ ಎಸ್ ಪಿ ಅವರಿಂದ ಜಾಗೃತಿ .
ಗೋಕಾಕ: ತುರ್ತು ಪರಿಸ್ಥಿತಿಯಲ್ಲಿ 112 ಸಂಖ್ಯೆ, ರಸ್ತೆ ನಿಯಮಗಳ ಪಾಲನೆ ಹಾಗೂ ರಸ್ತೆ ಸುರಕ್ಷತೆಗಾಗಿ ತಗೆದುಕೊಳ್ಳಲು ಪೋಲಿಸ್ ಇಲಾಖೆಯ ವತಿಯಿಂದ ನಗರದಲ್ಲಿ ಸಂಚರಿಸುವ ಆಟೊ ರಿಕ್ಷಾಗಳು, ಬಸ್ಸುಗಳು ಮತ್ತು ಇನ್ನಿತರ ವಾಹನಗಳಿಗೆ ಭಿತ್ತಿ ಚಿತ್ರಗಳನ್ನು ಅಂಟಿಸುವ ಮೂಲಕ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ ಪಿ ಜಾವೇದ ಇನಾಮದಾರ, ಹುಕ್ಕೇರಿ ಸಿಪಿಐ ರಮೇಶ ಚಾಯಾಗೋಳ, ಪಿಎಸ್ಐಗಳಾದ ಗಣಪತಿ ಕೊಂಗನೊಳಿ, ಎಸ್ ಎಚ್ ಕರನಿಂಗ, ರಮೇಶ್ ಪಾಟೀಲ, ಆರ್ …
Read More »ಮೂರು ತಿಂಗಳ ಮಗುವಿನ ಮೇಲೆ ಕಾಮುಕನೊಬ್ಬನ ಅತ್ಯಾಚಾರ
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ನ್ಯೂಕ್ಯಾಸಲ್ ಸಿಟಿಯಲ್ಲಿ ಮಾನವ ತಲೆತಗ್ಗಿಸುವ ಘಟನೆ ನಡೆದಿದೆ. ಮೂರು ತಿಂಗಳ ಮಗುವಿನ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಜೇಮ್ಸ್ ರುಡಾಲ್ಫ್ ಹೆಸರಿನ ವ್ಯಕ್ತಿ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಆರೋಪಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಅತ್ಯಾಚಾರದ ನಂತ್ರ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಡಿಸೆಂಬರ್ 16ರಂದೇ ಆರೋಪಿಯನ್ನು ಪೊಲೀಸರು …
Read More »ಕೃಷಿ ಕಾಯ್ದೆ ಜಾರಿಯಿಂದ ರೈತರ ಯಾವ ಹಕ್ಕನ್ನೂ ಕಸಿದುಕೊಳ್ಳಲಾಗಿಲ್ಲ.: ಪ್ರಧಾನಿ ಮೋದಿ
ನವದೆಹಲಿ: ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಭಾಷಣ ದೇಶದ 130 ಕೋಟಿ ಜನರ ಸಂಕಲ್ಪ.ಇಂಥ ಸಂಕಷ್ಟದ ಸಂದರ್ಭದಲ್ಲಿ ರಾಷ್ಟ್ರಪತಿ ಭಾಷಣ ದೈರ್ಯ ತುಂಬಿದೆ ಎಂದು ಹೇಳಿದರು. ಕೊನೆಯ ಬ್ರಿಟೀಷ್ ಕಮಾಂಡರ್ ಒಂದು ಮಾತು ಹೇಳಿದ್ದರು. ಭಾರತ ಅನೇಕ ದೇಶಗಳ ಮಾಹಾದ್ವೀಪ ಎಂದು. ಭಾರತ ಒಂದು ಪವಾಡದ ಪ್ರಜಾಪ್ರಭುತ್ವ ರಾಷ್ಟ್ರ. ವಿವಿಧತೆಯಿಂದ ತುಂಬಿರುವ ದೇಶ. ಆದರೂ ಭಾರತ ಒಂದು ಗುರಿಯತ್ತ ಮುನ್ನುಗ್ಗುತ್ತಿದೆ. ಸ್ವಾತಂತ್ರ್ಯದ 75 …
Read More »ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗೆ ಬೆಳಗಾವಿ ಹುಕ್ಕೇರಿ ಹಿರೇಮಠದಿಂದ ಗೌರವ
ಹರಿಹರ (ರಾಜನಹಳ್ಳಿ): ವಾಲ್ಮೀಕಿ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ಸಂಘಟಿಸುತ್ತಿರುವ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರಿಗೆ ಬೆಳಗಾವಿಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರು ಸ್ವಾಮೀಜಿ ಯವರನ್ನು ಸನ್ಮಾನಿಸಿ ಮಾತನಾಡಿ, “ಬೆಳಗಾವಿ ಹುಕ್ಕೇರಿ ಹಿರೇಮಠ ಎಲ್ಲ ಸಮುದಾಯದೊಂದಿಗೆ ಬೆರೆತು ಕಾರ್ಯವನ್ನು ಮಾಡುತ್ತಿದೆ. ವಾಲ್ಮೀಕಿ ಪೀಠದ ಗುರುಗಳಿಗೆ ಗೌರವಿಸಿದ್ದು ನನಗೆ ಅತೀವ ಸಂತಸ ತಂದಿದೆ” ಎಂದು ಹೇಳಿದರು. ಹುಕ್ಕೇರಿ ಹಿರೇಮಠದ …
Read More »ನಟ ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳು : ಪೊಲೀಸರಿಂದ ಲಾಠಿ ಪ್ರಹಾರ, ಖುರ್ಚಿ, ಸೋಫಾ ಪೀಸ್ ಪೀಸ್
ದಾವಣಗೆರೆ : ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಮಂಗಳವಾರ ನಟ ಸುದೀಪ ಅವರಿಗೆ ಪ್ರಸನ್ನಾನಂದ ಸ್ವಾಮೀಜಿ ‘ ವಾಲ್ಮೀಕಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದರು. ಈ ಮೊದಲು ನಟ ಕಿಚ್ಚ ಸುದೀಪ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನ ನೋಡಲು ಹಾಗೂ ಸೆಲ್ಫಿ ತೆಗೆಸಿಕೊಳ್ಳಲು ಜಮಾಯಿಸಿದಾಗ ನೂಕು ನುಗ್ಗಲು ಸಂಭವಿಸಿದೆ. ಪರಿಸ್ಥಿತಿಯನ್ನ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ಸುದೀಪ್ …
Read More »ಪೊಲೀಸ್ ದಾಳಿಗೆ ಹೆದರಿ ನದಿಗೆ ಹಾರಿದ ಯುವಕರ ಮೃತದೇಹ ಪತ್ತೆ!!
ರಾಮದುರ್ಗ: ಜೂಟಾಟ ವೇಳೆ ಪೊಲೀಸರು ದಾಳಿ ನಡೆಸಿದ ವೇಳೆ ಹೆದರಿ ಮಲಪ್ರಭಾ ನದಿಗೆ ಹಾರಿದ ಇಬ್ಬರ ಮೃತದೇಹ ಪತ್ತೆಯಾಗಿವೆ. ಮಂಜು ಬಂಡಿವಡ್ಡರ್(30), ಸಮೀರ್ ಬಟಕುರ್ಕಿ(22) ಮೃತರು. ಮಲಪ್ರಭಾ ನದಿ ದಡದಲ್ಲಿ ಜೂಜಾಡುತ್ತಿದ್ದ ಯುವಕರ ಗುಂಪಿನ ಮೇಲೆ ರಾಮದುರ್ಗ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಬಂಧನ ಭೀತಿಯಿಂದ ಆರು ಜನರು ಮಲಪ್ರಭಾ ನದಿಗೆ ಹಾರಿದ್ದರು. ಈ ವೇಳೆ ನಾಲ್ವರು ಈಜಿ ದಡ ಸೇರಿದ್ರೆ ಇಬ್ಬರು ಯುವಕರು ನಾಪತ್ತೆಯಾಗಿದ್ದರು. ಬೆಳಗ್ಗೆಯಿಂದ …
Read More »ವಾಲ್ಮೀಕಿ ಜಾತ್ರೆಯಲ್ಲಿ ಪ್ರಿಯಾಂಕ.. ಪುತ್ರಿಗೆ ರಾಜಕೀಯ ತರಬೇತಿ ನೀಡುತ್ತಿದ್ದಾರಾ ಸತೀಶ್ ಜಾರಕಿಹೊಳಿ?
ದಾವಣಗೆರೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಮಗಳಿಗೆ ರಾಜಕೀಯ ತರಬೇತಿ ನೀಡುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ವಾಲ್ಮೀಕಿ ಜಾತ್ರೆಯಲ್ಲಿ ಪ್ರಿಯಾಂಕ ಜಾರಕಿಹೊಳಿ.. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆಯುತ್ತಿರುವ 3ನೇ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಗಳು ಪ್ರಿಯಾಂಕ ಅವರು ಆಗಮಿಸಿ, ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಕೆಲವು ದಿನಗಳಿಂದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಹ ಹೆಚ್ಚು …
Read More »ಮಾರುಕಟ್ಟೆಗೆ ಬರಲಿದೆ ಜಾಗ್ವಾರ್ ಐ ಪೇಸ್
ನವ ದೆಹಲಿ : ಜಾಗ್ವಾರ್ ಲ್ಯಾಂಡ್ ರೋವರ್ ನ, ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕ್ ಎಸ್ ಯು ವಿ ಕಾರು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ ಎಂಬ ಸುದ್ದಿಯನ್ನು ಕಂಪೆನಿ ಈಗ ಬಹಿರಂಗ ಪಡಿಸಿದೆ., ಹೌದು, ಬರುವ ಮಾರ್ಚ್ 9ರಂದು ಭಾರತದಲ್ಲಿ ಬಿಡುಗಡೆಗೊಳ್ಳಲಿದೆ ಜಾಗ್ವಾರ್ ಐ ಪೇಸ್. ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕ್ ಎಸ್ ಯು ವಿ ನ ಪ್ರಾಥಮಿಕ ಮಾಡೆಲ್ ಜನವರಿಯಲ್ಲಿ ಭಾರತಕ್ಕೆ ಬಿಡುಗಡೆಗೊಂಡಿತ್ತು. ಮಾತ್ರವಲ್ಲದೇ, ದೇಶದ ಮೊದಲ ಎಲೆಕ್ಟ್ರಿಕ್ …
Read More »ಹುಕ್ಕೇರಿ ನೂತನ ತಹಶೀಲ್ದಾರ್ ಡಿ.ಎಚ್. ಹೂಗಾರ ಅಧಿಕಾರ ಸ್ವೀಕಾರ
ಹುಕ್ಕೇರಿ: ತಾಲೂಕಿನ ನೂತನ ತಹಶೀಲ್ದಾರ ಆಗಿ ಡಿ.ಎಚ್. ಹೂಗಾರ ಅಧಿಕಾರ ಸ್ವೀಕರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ನೂತನ ತಹಶೀಲ್ದಾರರನ್ನು ಸ್ವಾಗತಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಹೂಗಾರ ಅವರು ಶಾಸಕ ಸತೀಶ ಜಾರಕಿಹೊಳಿ ಅವರನ್ನು ಸತ್ಕರಿಸಿದರು.
Read More »
Laxmi News 24×7