Breaking News

ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ

Spread the love

ಧಾರವಾಡ ತಾಲೂಕಿನ ಹೊಲ್ತಿಕೋಟಿ ಗ್ರಾಮದಲ್ಲಿ‌ ಮಹಿಳೆಯರು ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರ ಸಾರಿದ್ದಾರೆ. ನಾಲ್ಕೈದು ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ.

ಮದ್ಯ ಸೇವಿಸಿದ ಬಳಿಕ ಎಣ್ಣೆ ಪ್ರಿಯರು ಗ್ರಾಮದ ಬೀದಿಗಳಲ್ಲಿ, ನೀರಿನ ಟ್ಯಾಂಕ್​ಗಳ ಬಳಿ, ಶಾಲಾ ಆವರಣದಲ್ಲಿ, ದೇವಸ್ಥಾನಗಳ ಎದುರು ಪ್ಯಾಕೆಟ್​ಗಳನ್ನು ಎಸೆದು ಹೋಗುತ್ತಿದ್ದಾರೆ.

ನಿತ್ಯವೂ ರಾಶಿ ರಾಶಿ ಪ್ಯಾಕೆಟ್ ತೆಗೆದು ಗ್ರಾಮಸ್ಥರು ರೋಸಿ ಹೋಗಿದ್ದಾರೆ. ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಈ ಹಿನ್ನೆಲೆ‌ಯಲ್ಲಿ ಆಕ್ರೋಶಗೊಂಡ ಮಹಿಳೆಯರು ಸ್ವತಃ ಮದ್ಯ ಮಾರುವ ಅಂಗಡಿಗಳಿಗೆ ಮುತ್ತಿಗೆ ಹಾಕಿದ್ದಾರೆ. ಅಂಗಡಿಕಾರರಿಗೆ ಎಚ್ಚರಿಕೆ ನೀಡಿದ್ದಾರೆ. ಅಬಕಾರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ ಲವ್ ಜಿಹಾದ್ – ಅತ್ಯಾಚಾರ ಬಳಿಕ ಬೆದರಿಕೆಯೊಡ್ಡಿ 70 ಸಾವಿರಕ್ಕೂ ಅಧಿಕ ಹಣ ಪೀಕಿದ್ದ ಸಮೀರ್

Spread the loveಹುಬ್ಬಳ್ಳಿ: ಲವ್ ಜಿಹಾದ್  ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ಟ್ರೈನರ್‌ ಸಮೀರ್ ಅತ್ಯಾಚಾರದ ಬಳಿಕ ಬೆದರಿಕೆಯೊಡ್ಡಿ 70 ಸಾವಿರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ