Breaking News

Daily Archives: ಮೇ 23, 2026

ಮೂಡಲಗಿಯಲ್ಲಿ ಕೃಷಿ ಕಚೇರಿ ಸ್ಥಾಪಿಸಿ

ಮೂಡಲಗಿ: ಸ್ಥಳೀಯವಾಗಿ ಭೂಮಾಪನ ಹಾಗೂ ಕೃಷಿ ಇಲಾಖೆ ಕಚೇರಿ ಸ್ಥಾಪಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರ್ ಶ್ರೀಶೈಲ ಗುಡಮೆಗೆ ಬುಧವಾರ ಮನವಿ ಸಲ್ಲಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಕಲ್ಮೇಶ ಗೋಕಾಕ ಮಾತನಾಡಿ, ಮೂಡಲಗಿ ತಾಲೂಕು ಕೇಂದ್ರವಾಗಿ 9 ವರ್ಷ ಕಳೆದರೂ ಪಟ್ಟಣದಲ್ಲಿ ಈವರೆಗೆ ಭೂಮಾಪನ ಹಾಗೂ ಕೃಷಿ ಇಲಾಖೆ ಕಚೇರಿ ಸ್ಥಾಪಿಸಿಲ್ಲ. ಇದರಿಂದ ಸಾರ್ವಜನಿಕರು ಹಾಗೂ ರೈತರು ಪರದಾಡುತ್ತಿದ್ದು, ಕೂಡಲೇ ಎರಡೂ ಕಚೇರಿ ಸ್ಥಾಪಿಸಬೇಕು …

Read More »

ನೂತನವಾಗಿ ಸ್ಥಾಪನೆಗೊಂಡ ಭೈರವ್ ಬಟಾಲಿಯನ್‌ ಭಾರತೀಯ ಸೇನೆಗೆ ಸೇರ್ಪಡೆ

ಬೆಳಗಾವಿ: ಇಲ್ಲಿನ ಮರಾಠ ಲಘು ಪದಾತಿದಳ (ಎಂಎಲ್‌ಐಆರ್‌ಸಿ) ಕೇಂದ್ರದಲ್ಲಿ ನೂತನವಾಗಿ ಆರಂಭಿಸಲಾದ 16ನೇ ಭೈರವ್ ಬೆಟಾಲಿಯನ್ ತರಬೇತಿ ಪೂರ್ಣಗೊಂಡಿದ್ದು, ಶನಿವಾರ ನಡೆದ ಸಮಾರಂಭದಲ್ಲಿ ನೂತನ ಪಡೆಯನ್ನು ಸ್ಥಾಪನಾ ಸಮಾರಂಭದ ಮೂಲಕ ಭಾರತೀಯ ಸೇನೆಗೆ ಸೇರಿಸಲಾಯಿತು. ಅತ್ಯುನ್ನತ ಮಟ್ಟದ ತರಬೇತಿ ಪಡೆದ ಆಯ್ದ ಯೋಧರನ್ನು ಈ ಪಡೆಯಲ್ಲಿ ಸೇರಿಸಲಾಗಿದ್ದು, ಶನಿವಾರ ಎಂಎಲ್‌ಐಆರ್‌ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜಾಯ್‌ದೀಪ್ ಮುಖರ್ಜಿ, ನೂತನ ಪಡೆಯ ಧ್ವಜವನ್ನು ಆಫೀಸರ್ ಕಮಾಂಡಿಂಗ್‌ಗೆ ಹಸ್ತಾಂತರಿಸಿದರು. ಇಂದಿನ ಸಂಕೀರ್ಣ ಭದ್ರತಾ ಸನ್ನಿವೇಶಗಳಲ್ಲಿ ಕಾರ್ಯಾಚರಣೆ …

Read More »

ಹುಕ್ಕೇರಿ ಸಮಗ್ರ ನೀರಾವರಿ ಹೋರಾಟಕ್ಕೆ ನಾನು ಬೆಂಬಲಿಸುತ್ತೇನೆ

ಹುಕ್ಕೇರಿ: ಐದು ದಶಕಗಳಿಂದ ಕತ್ತಿ ಮನೆತನಕ್ಕೆ ಹುಕ್ಕೇರಿ ತಾಲೂಕಿನ ಜನರು ಆಶೀರ್ವದಿಸಿ ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಿದ್ದಾರೆ. ಅವರ ಸಮಸ್ಯೆಗೆ ಸ್ಪಂದಿಸುವುದೇ ನಮ್ಮ ಆದ್ಯತೆ. ತಾಲೂಕಿನ ಸಮಗ್ರ ನೀರಾವರಿ ಹೋರಾಟಕ್ಕೆ ನಾನು ಬೆಂಬಲಿಸುತ್ತೇನೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು. ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಹುಕ್ಕೇರಿ ತಾಲೂಕು ಸಮಗ್ರ ನೀರಾವರಿಗೆ ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದ ಅವರು, ತಾಲೂಕಿನ ಕಣಗಲಾ ಮತ್ತು ಅಮ್ಮಣಗಿ ಭಾಗದಲ್ಲಿ ನೀರಾವರಿ …

Read More »

ಏರ್‌ಮೆನ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳ ಗ್ರಂಥಾಲಯ ಭೇಟಿ

ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯಕ್ಕೆ  ಸಾಂಬ್ರಾದ ಏರ್‌ಮೆನ್ ತರಬೇತಿ ಶಾಲೆಯ ತಾಂತ್ರಿಕೇತರ ವಿದೇಶಿ ಪ್ರಶಿಕ್ಷಣಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಶೈಕ್ಷಣಿಕ ಭೇಟಿ ನೀಡಿದರು. ಗ್ರಂಥಾಲಯ ಇಲಾಖೆ ಉಪನಿರ್ದೇಶಲ ರಾಮಯ್ಯ, ಪ್ರಶಿಕ್ಷಣಾರ್ತಿಗಳ ತಂಡಕ್ಕೆ ಆಡಳಿತಾತ್ಮಕ ವಿಷಯಗಳ ಕುರಿತು ಹಾಗೂ ಸಹಾಯಕ ಗ್ರಂಥಪಾಲಕ ಪ್ರಕಾಶ ಇಂಚಲಕರಂಜಿ ಮತ್ತು ಮೇಲ್ವಿಚಾರಕಿ ಸರಸ್ವತಿ, ವಿವಿಧ ವಿಭಾಗಗಳ ಕಾರ್ಯನಿರ್ವಹಣೆ, ಗ್ರಂಥಾಲಯ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಏರ್‌ಮೆನ್ ತರಬೇತಿ ಶಾಲೆಯ ಸಾರ್ಜೆಂಟ್‌ರಾದ ಆಶಿಷಚಂದ್ರ, ಅಮಿತಕುಮಾರ, ನಂದನ ಶರ್ಮಾ ಹಾಗೂ …

Read More »

ಬೆಳಗಾವಿಯಲ್ಲಿ ಭೂ ದಾಖಲೆಗಳ ಪ್ರಾಯೋಗಿಕ ಕೃಪಿಡಿ ಕೃತಿ ಬಿಡುಗಡೆ

ಬೆಳಗಾವಿ : ಬೆಳಗಾವಿ ವಿಭಾಗದ ಮಾಜಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ, ಭೂ ದಾಖಲೆಗಳ ಪಾದೇಶಿಕ ಜಂಟಿ ನಿರ್ದೇಶಕಿ ಡಾ.ನಜ್ಮಾ ಪೀರಜಾದೆ ರಚನೆಯ ‘ಫ್ರಾಮ್ ಲ್ಯಾಂಡ್ ಟು ಲೇಔಟ್-ಪ್ರಾಕ್ಟಿಕಲ್ ಗೈಡ್‌ಲೈನ್ಸ್ ಫಾರ್ ರಿಯಲ್ ಎಸ್ಟೆಟ್’ ಕೃತಿ ಶುಕ್ರವಾರ ಜರುಗಿದ ಸಮಾರಂಭದಲ್ಲಿ ಬಿಡುಗಡೆಗೊಂಡಿತು. ಪ್ರಾದೇಶಿಕ ಆಯುಕ್ತ ಕೆ.ಎಂ.ಜಾನಕಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಭೂದಾಖಲೆಗಳು, ಸರ್ವೆ ಪ್ರಕ್ರಿಯೆ ಹಾಗೂ ಕೃಷಿ ಭೂಮಿಯಿಂದ ಅನುಮೋದಿತ ಲೇಔಟ್‌ವರೆಗಿನ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸಂಬಂಧಿತ ಅಧಿಕಾರಿಗಳು ಅರ್ಥ ಮಾಡಿಕೊಳ್ಳಲು …

Read More »

ಬ್ಯಾಂಕ್ ಮುಷ್ಕರದ ಜಾಗೃತಿಗಾಗಿ ಬೆಳಗಾವಿಯಲ್ಲಿ ಮತ ಪ್ರದರ್ಶನ

ಬೆಳಗಾವಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಫೆಡರೇಶನ್ ಮೇ 25 ಮತ್ತು 26ರಂದು ಕರೆ ನೀಡಿರುವ ದೇಶವ್ಯಾಪಿ ಬ್ಯಾಂಕ್ ಮುಷ್ಕರ ಪ್ರಯುಕ್ತ ನಗರದಲ್ಲಿ ಶುಕ್ರವಾರ ಸಂಘಟನೆಯಿಂದ ಮತ ಪ್ರದರ್ಶನ ನಡೆಸಲಾಯಿತು. ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ನೌಕರರು, ಮುಷ್ಕರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ತಮ್ಮ ಪ್ರಮುಖ ಬೇಡಿಕೆಗಳ ಪರವಾಗಿ ಘೋಷಣೆ ಕೂಗಿದರು. ಮೆಸೆಂಜರ್‌ಗಳ, ಸಶಸ್ತ್ರ ಕಾವಲುಗಾರರ ನೇಮಕಾತಿಯಾಗಬೇಕು. …

Read More »

ಬಡ ಹಾಗೂ ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ

ಚಿಕ್ಕೋಡಿ:ಬಡ ವಿದ್ಯಾರ್ಥಿಗಳಿಗೆ ಅನುಕೂಲ ಹಾಗೂ ಅನಾಥ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡುವ ಉದ್ದೇಶದಿಂದ ತಾಲೂಕಿನ ಶಮನೇವಾಡಿಯ ಗುಣಧರ ತೀರ್ಥದಲ್ಲಿ ಎಜಿಎಂ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲಾಗುತ್ತಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ ಎಂದು ರಾಷ್ಟ್ರಸಂತ ಆಚಾರ್ಯ ಗುಣಧರನಂದಿ ಮುನಿ ಮಹಾರಾಜರು ತಿಳಿಸಿದರು. ತಾಲೂಕಿನ ಶಮನೇವಾಡಿ ಗುಣಧರ ತೀರ್ಥ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಶಿಕ್ಷಣ ಮಹತ್ವದ್ದಾಗಿದೆ. ಎಸ್‌ಡಿಎಂ ಜೈನಮಠ ಟ್ರಸ್ಟ್ ವತಿಯಿಂದ ಬಡ ಹಾಗೂ ಅನಾಥ …

Read More »

ಕಳೆದು ಹೋದ 24 ಮೋಬೈಲ್ ಪತ್ತೆ ಮಾಡಿದ ಅಥಣಿ ಪೊಲೀಸರು

ಬೆಳಗಾವಿ: ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಇತ್ತಿಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚಾದಂತೆ ಮೊಬೈಲ್ ಪೋನಗಳು ಕಳೆದು ಹೋಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಾರ್ವಜನಿಕರ ಆಸ್ತಿಯನ್ನು ರಕ್ಷಿಸಲು ಮತ್ತು ಕಳೆದು ಹೋದ ಮೊಬೈಲ್‌ಗಳನ್ನು ಪತ್ತೆ ಮಾಡಲು ಆತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸದರಿ ಕಳೆದು ಹೋದ ಮೊಬೈಲಗಳನ್ನು …

Read More »

ಮಗುವಿನ ವಿದ್ಯಾಭ್ಯಾಸಕ್ಕೆ ಸ್ಪಂದಿಸಿದ ಅಕ್ಕ ಪಡೆ

 ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯರೂಪಕ್ಕೆ ಬಂದಿರುವ ಅಕ್ಕಾ ಪಡೆ ಅನೇಕ ಅಪರಾಧಗಳನ್ನು ತಡೆಯಲು ಯಶಸ್ವಿಯಾಗಿದ್ದು, ಇದೀಗ ಗಂಡ ಹೆಂಡತಿ ಜಗಳದಲ್ಲಿ ತೊಂದರೆ ಅನುಭವಿಸುತ್ತಿದ್ದ ಕುಟುಂಬಕ್ಕೆ ಆಸರೆ ಆಗಿದೆ. ಬೆಳಗಾವಿ ಜಿಲ್ಲೆಯ ಕುರಿಹಾಳ ಗ್ರಾಮದ  ದೀಪಾಲಿ ವಿಲಾಸ್‌ ಕುದನೂರುಕರ್‌ ರವರು ಮಹಿಳಾ ಪೊಲೀಸ್‌ ಠಾಣೆಗೆ ಹೋಗಿ ಗಂಡ ಹೆಂಡತಿಯೊಂದಿಗೆ ಜಗಳ ಮಾಡಿದ ಕಾರಣಕ್ಕೆ ಮಕ್ಕಳ  ವಿದ್ಯಾಭ್ಯಾಸಕ್ಕೆ ತೊಂದರೆ ನೀಡುತ್ತಿದ್ದಾನೆಂದು ದೂರು ನೀಡಿದ ಕಾರಣ, ಮಹಿಳಾ ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್ ಪೆ‌ಕ್ಟರ್ (ಪಿಐ) …

Read More »

ನಿಲಣ್ಣವರ್ ನಿಂದ ಐಶಾರಾಮಿ ಕಾರ್ ಗಿಪ್ಟ್ ಪಡೆದ ಕರವೇ ಜಿಲ್ಲಾಧ್ಯಕ್ಷನಿಗೆ ಸಿಐಡಿ ನೋಟಿಸ್

ಬೆಳಗಾವಿ:  ಹೆಚ್ಚಿನ ಬಡ್ಡಿ ನೀಡುವದಾಗಿ ಜನರಿಗೆ ಸಾವಿರಾರು ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಸಿಐಡಿ ವಶದಲ್ಲಿ ಇರುವ ಶಿವಂ ಅಸೋಶಿಯೇಟ್ ಮಾಲೀಕ ಶಿವಾನಂದ ನಿಲಣ್ಣವರ್ ಪ್ರಕರಣದಲ್ಲಿ ಕರವೇ ಜಿಲ್ಲಾಧ್ಯಕ್ಷ ಅಭಿಲಾಷ್ ಅವರಿಗೆ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಕರವೇ ಜಿಲ್ಲಾಧ್ಯಕ್ಷನಿಗೆ ಶಿವಾನಂದ ನಿಲಣ್ಣವರ ಐಶಾರಾಮಿ ಕಾರು ಗಿಪ್ಟ್ ಕೊಟ್ಟಿರುವ ಕಾರಣ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಕರವೇ (ಪ್ರವೀಣ್ ಶೆಟ್ಟಿ ಬಣ) ಬೆಳಗಾವಿ ಜಿಲ್ಲಾಧ್ಯಕ್ಷ ಅಭಿಲಾಷ್‌ಗೆ ಶಿವಾನಂದ …

Read More »