Breaking News

ಫೇಸ್​ಬುಕ್ ಪ್ರೀತಿ 7.05 ಲಕ್ಷ ರೂ. ವಂಚನೆ

Spread the love

ಬೆಳಗಾವಿ: ಫೇಸ್​ಬುಕ್​ನಲ್ಲಿ ಪ್ರೀತಿಯ ಬಲೆ ಬೀಸಿ ವಿದೇಶದಿಂದ ಲವ್​ಗಿಫ್ಟ್​ ಕಳುಹಿಸುವುದಾಗಿ ನಂಬಿಸಿ, 7.05 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಯರಗಟ್ಟಿ ತಾಲೂಕಿನ ಕುರುಬಗಟ್ಟಿಯ ಲಕ್ಕಪ್ಪ ಸನ್ನಿಂಗನವರ ಜಿಲ್ಲಾ ಸೈಬರ್​ ಅಪರಾಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರೋಸಂಜೆಲ್​ ಪಾಜ್​ ಹೆಸರಿನ ಫೇಸ್​ಬುಕ್​ ಖಾತೆಯಿಂದ ಸ್ನೇಹದ ಕೋರಿಕೆ ಸಲ್ಲಿಸಿ, ಪರಿಚಯ ಬೆಳೆಸಿಕೊಂಡು, ಮೊಬೈಲ್​ ಸಂಖ್ಯೆ ಪಡೆದು ವಾಟ್ಸಾಪ್​ ಮೂಲಕ ನಿರಂತರ ಕರೆ ಹಾಗೂ ಚಾಟ್​ ನಡೆಸಿ ಪ್ರೀತಿಯ ನಾಟಕವಾಗಿದ್ದಾರೆ. ನಂತರ ನನಗೆ 80 ಸಾವಿರ ಪೌಂಡ್​ (1.03 ಕೋಟಿ ರೂ.) ಮೌಲ್ಯದ ದುಬಾರಿ ಗ್ಟ್​ಿ ಕಳುಹಿಸುತ್ತಿದ್ದು, ಪಾರ್ಸೆಲ್​ ಬಿಡುಗಡೆ, ಮನಿ ಲಾಂಡರಿಂಗ್​ ಸರ್ಟಿಫಿಕೇಟ್​, ಆದಾಯ ತೆರಿಗೆ ಪಾವತಿಗೆ ಬೇಕಿದೆ ಎಂದು ಹಂತ ಹಂತವಾಗಿ ಏ.17ರಿಂದ ಮೇ 22ರವರೆಗೆ ವಿವಿಧ ಖಾತೆಗಳಿಗೆ ಒಟ್ಟು 7.05 ಲ ಹಣ ಆನ್​ಲೈನ್​ ಮೂಲಕ ವರ್ಗಾವಣೆ ಮಾಡಿಸಿಕೊಂಡು ಮೋಸ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೆಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Spread the love

About Laxminews 24x7

Check Also

ತಂಬಾಕು‌ ದೇಹದ ಪ್ರತಿಯೊಂದು ಅಂಗವನ್ನು ಹಾನಿಗೊಳಿಸುತ್ತದೆ: ಡಾ. ಕರ್ನಲ್‌ ಎಂ ದಯಾನಂದ

Spread the loveಬೆಳಗಾವಿ: ತಂಬಾಕು ಬಳಕೆ ಕೇವಲ ಶ್ವಾಸಕೋಶ ಕ್ಯಾನ್ಸರ್‌ಗೆ ಮಾತ್ರ ಕಾರಣವಾಗುವುದಿಲ್ಲ. ಅದು ಮಾನವ ದೇಹದ ಪ್ರತಿಯೊಂದು ಅಂಗವನ್ನೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ