ಕೊಪ್ಪಳ: ಇಲ್ಲಿನ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿಯ ಆಂಜನೇಯನಿಗೆ ಉದ್ಯಮಿಯೊಬ್ಬರು 2.5 ಕೋಟಿ ರೂ. ಮೌಲ್ಯದ ಆಭರಣವನ್ನು ದೇಣಿಗೆ ನೀಡಿದ್ದಾರೆ. ಎಎಂಆರ್ ಕನ್‌ಸ್ಟ್ರಕ್ಷನ್ ಕಂಪನಿಯ ಮಾಲೀಕ ಹಾಗೂ ಶಾಸಕ ಜನಾರ್ದನ ರೆಡ್ಡಿ ಸ್ನೇಹಿತ ಮಹೇಶ ರೆಡ್ಡಿಯವರು ಅಂಜನಾದ್ರಿಯ ಆಂಜನೇಯನಿಗೆ 2.5 ಕೋಟಿ ರೂ. ಮೌಲ್ಯದ ಆಭರಣವನ್ನು ದೇಣಿಗೆ ನೀಡಿದ್ದಾರೆ. ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟ ಆಂಜನೇಯನ ಜನ್ಮಸ್ಥಳ. ಉದ್ಯಮಿ ಮಹೇಶ ಅವರು ದಂಪತಿ ಸಮೇತ ಅಂಜನಾದ್ರಿಗೆ ಆಗಮಿಸಿ, ಆಂಜನೇಯನಿಗೆ ಸಂಕಲ್ಪ ಪೂಜೆ, …
Read More »Daily Archives: ಮೇ 9, 2026
ಅನುಮತಿ ಇಲ್ಲದೆ ಮದುವೆಯಲ್ಲಿ ಡಿಜೆ ಬಳಕೆ: ಇಬ್ಬರ ಮೇಲೆ ಪ್ರಕರಣ ದಾಖಲು
ಬೆಳಗಾವಿ: ಮದುವೆ ಕಾರ್ಯಕ್ರಮಕ್ಕೆ ಡಿಜೆ ಬಳಸಲು ಅನುಮತಿ ನಿರಾಕರಿಸಿದರೂ ಕೂಡ ಡಿಜೆ ಬಳಸಿ ಶಬ್ಧ ಮಾಲಿನ್ಯ ಉಂಟು ಮಾಡಿ, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದವರ ಮೇಲೆ ಬೆಳಗಾವಿಯ ತಿಲಕವಾಡಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅನಗೋಳದಲ್ಲಿ ಈ ಘಟನೆ ನಡೆದಿದೆ. ತಿಲಕವಾಡಿಯ ಅನಗೋಳ ಬಡಮಂಜಿನಗರದ ನಿವಾಸಿಯಾದ ಶುಭಂ ನಾರಾಯಣ ಬಡಮಂಜಿ ಎಂಬುವವರು ತಮ್ಮ ಮದುವೆ ಕಾರ್ಯಕ್ರಮದ ಅಂಗವಾಗಿ ಮನೆಯ ಮುಂದೆ …
Read More »ಭಾಷೆ ಮತಗಳನ್ನು ಮೀರಿ ಸಾಹಿತ್ಯ ಸೇವೆ ಸಾಗಲಿ: ಸವಿತಾ ಇನಾಮದಾರ
ಅಖಿಲ ಭಾರತ ಕವಯತ್ರಿಯರ ಬೆಳಗಾವಿ ಘಟಕದ 26 ನೇ ಸಂಸ್ಥಾಪನಾ ದಿನಾಚರಣೆ ಇದೇ ದಿನಾಂಕ 6 ರಂದು ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ವಿಶೇಷ ಅತಿಥಿ ಯಾಗಿ ದೆಹಲಿಯಿಂದ ಆಗಮಿಸಿದ್ದ ಸವಿತಾ ಇನಾಮದಾರ ಕನ್ನಡತಿ, ಲೇಖಕಿ, ಗಾಯಕಿ,ನಟಿ,ದುಭಾಷಿ ಇವರು ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರ ಸಾಂಘಿಕ ಶಕ್ತಿ ನೈಜ ಶಕ್ತಿ, ಸಾಹಿತ್ಯ ವು ಯುವ ಪೀಳಿಗೆಗೆ ಮಾದರಿಯಾಗಿದೆ ಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಜಾತಿ,ಭಾಷೆ,ಮಾತು ಪಂಥಗಳು ಸಂಕೋಲೆಯಿಂದ ಹೊರಬರಬೇಕು.ದೇಹಕ್ಕೆ ಮುಪ್ಪು …
Read More »ಒಣ ಕಸ, ಹಸಿ ವಿಂಗಡಿಸಿ ನೀಡದಿದ್ರೆ ದಂಡ: ಬೆಳಗಾವಿ ಪಾಲಿಕೆ ಎಚ್ಚರಿಕೆ
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆಯಲ್ಲಿ/ವ್ಯಾಪಾರ-ಉದ್ದಿಮೆಗಳಲ್ಲಿ ಉತ್ಪತ್ತಿಯಾಗುವ ದೈನಂದಿನ ತ್ಯಾಜ್ಯವನ್ನು ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ಸ್ಪೆಷಲ್ ಕೇರ್ ವೇಸ್ಟ್ (ಬಲ್ಬಗಳು, ಬ್ಯಾಟರಿಗಳು, ಅವಧಿ ಮೀರಿದ ಔಷಧಿಗಳು, ಪೇಂಟ್ ಡಬ್ಬಿಗಳು ಇತ್ಯಾದಿ) ಈ ನಾಲ್ಕು ಮಾದರಿಯಲ್ಲಿ ತ್ಯಾಜ್ಯವನ್ನು ವಿಂಗಡಿಸಿ ಪಾಲಿಕೆಯ ತ್ಯಾಜ್ಯ ಸಂಗ್ರಹಕಾರರಿಗೆ ನೀಡಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸುವಂತೆ ಸೂಚಿಸಲಾಗಿದೆ. ಈ ನೀಯಮ ಉಲ್ಲಂಘಿಸಿದಲ್ಲಿ ಕಾನೂನನ್ವಯ ದಂಡ …
Read More »“ಆ್ಯಂಟಿ ಸ್ಟಾಬಿಂಗ್ ಸ್ಕ್ವಾಡ್” ವಿಶೇಷ ಕಾರ್ಯಾಚರಣೆ: ಆಯುಧ ಸಮೇತ ಆರೋಪಿ ವಶಕ್ಕೆ
ಬೆಳಗಾವಿ: ಬೆಳಗಾವಿ ನಗರದಲ್ಲಿ ಇತ್ತಿಚೆಗೆ ಹೆಚ್ಚುತ್ತಿರುವ ಸ್ಟಾಬಿಂಗ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಬೆಳಗಾವಿ ನಗರದ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ “ಆ್ಯಂಟಿ ಸ್ಟಾಬಿಂಗ್ ಸ್ಕ್ವಾಡ್” ತಂಡದಿಂದ ಪರಿಶೀಲನೆ ಮುಂದುವರೆಸಲಾಗಿದೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಂಡಿ-ಬುಡ್ಯಾನೂರ ರಸ್ತೆಯಲ್ಲಿ ಆರೋಪಿತನಾದ ಕಿರಣ ದುರ್ಗಪ್ಪ ಕಡ್ಯಾಗೋಳ (22) ಎಂಬಾಗ ಕಾನೂನು ಬಾಹಿರವಾಗಿ ಅರಣ್ಯ ಪ್ರದೇಶದ ಗಿಡಗಂಟಿಗಳಲ್ಲಿ ನಿಂತು ಕೈಯಲ್ಲಿ ಕಬ್ಬಿಣದ ಕುಡುಗೋಲ ಹಿಡಿದು ಜಳಪಳಿಸುತ್ತಿದ್ದ. ಈ …
Read More »ಮೇ.10 ರಂದು ಬೆಳಗಾವಿಯ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ ಮೊದಲನೇಯ ತ್ರೈಮಾಸಿಕ ನಿರ್ವಹಣೆ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮೇ. 10.2026 ರಂದು ಬೆಳಿಗ್ಗೆ 9 ಘಂಟೆಯಿಂದ ಸಾಯಂಕಾಲ 4 ಘಂಟೆಯವರೆಗೆ 110 ಕೆ.ವಿ. ಹೊನಗಾ ಉಪಕೇಂದ್ರದಿಂದ ಸರಬರಾಜು ಆಗುವ ಬೆಳಗಾವಿ ತಾಲೂಕಿನ ಬೈಲೂರ, ಜುಮನಾಳ, ಹೆಗ್ಗೇರಿ, ಕೆಂಚಾನಟ್ಟಿ, ಬೆನ್ನಾಳಿ, ದಾಸರವಾಡಿ, ಜೋಗ್ಯಾನಟ್ಟಿ, ಭೂತರಾಮನಹಟ್ಟಿ, ಬಂಬರಗಾ, ಸಿದ್ದಗಂಗಾ ಆಯಿಲ್ ಮಿಲ್, ತುಳಜಾ ಅಲ್ಲಾಯ್ಸ್, ಹತ್ತರಕಿ ಫೀಡ್ಸ್, ವಿನಾಯಕ ಸ್ಟೀಲ್ ಇಂಡಸ್ಟ್ರೀಸ್, ಹರ್ಷದ್ಭವ, ಜಿ. …
Read More »ಮೇ 10 ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಕೆಎಲ್‌ಇ ಶಾಲೆಯ ನಾಮಕರಣ ಸಮಾರಂಭ
ಕೆಎಲ್‌ಇ ಸಂಸ್ಥೆಯ ಬೆಂಗಳೂರಿನ ರಾಜಾಜಿನಗರದ ಎಸ್.ನಿಜಲಿಂಗಪ್ಪ ಕಾಲೇಜು ಆವರಣದಲ್ಲಿರುವ ‘ಕೆಎಲ್‌ಇ ಸಂಸ್ಥೆಯ ಸಿಬಿಎಸ್‌ಇ ಆಂಗ್ಲ ಮಾಧ್ಯಮ ಶಾಲೆ’ಯ ನಾಮಕರಣ ಸಮಾರಂಭವು ಇದೇ ರವಿವಾರ 10 ಮೇ 2026 ರಂದು ಸಂಜೆ 4 ಗಂಟೆಗೆ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಪ್ರಹ್ಲಾದ ಜೋಶಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರಾದ …
Read More »ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ
ಬೆಳಗಾವಿ: ನಗರದ ಕ್ಲಬ್ ರಸ್ತೆಯಲ್ಲಿರುವ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಜಿಲ್ಲಾ ಪಂಚಾಯತ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಶುಕ್ರವಾರದಿಂದ ಆಯೋಜಿಸಿರುವ “ಮಾವು ಪ್ರದರ್ಶನ ಮತ್ತು ಮಾರಾಟ ಮೇಳ”ಕ್ಕೆ ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಚೇತನಸಿಂಗ್ ರಾಠೋರ್ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ರೈತರಿಂದ ನೇರವಾಗಿ ಗ್ರಾಹಕರಿಗೆ ಗುಣಮಟ್ಟದ ಮಾವಿನ ಹಣ್ಣುಗಳನ್ನು ಯೋಗ್ಯ ದರದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಮಾವು ಮೇಳವನ್ನು ಆಯೋಜಿಸಲಾಗಿದೆ. ಬೆಳಗಾವಿ ನಗರ ಹಾಗೂ …
Read More »ಕೋಟಿ ರೂ. ವೆಚ್ಚದಲ್ಲಿ ಶ್ರೀ ಬ್ರಹ್ಮಲಿಂಗ ಸಮುದಾಯ ಭವನ: ಕಾಲಂ ಸ್ಲ್ಯಾಬ್ ಪೂಜೆ
ನಿಲಜಿಯಲ್ಲಿ ಸುಮಾರು 1 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಬ್ರಹ್ಮಲಿಂಗ ಸಮುದಾಯ ಭವನದ ಕಾಲಂ ಪೂಜೆ ಹಾಗೂ ಸ್ಲ್ಯಾಬ್ (ಕಾಂಕ್ರೀಟ್) ಹಾಕುವ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪ್ರಮುಖರೊಂದಿಗೆ ಸೇರಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಗ್ರಾಮದ ಸರ್ವತೋಮುಖ ಅಭಿವೃದ್ಧಿ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ …
Read More »ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಧನ್ಯವಾದ ಸಲ್ಲಿಸಿದ ಸಮರ್ಥ ಶಾಮನೂರು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ಸಮರ್ಥ್ ಶಾಮನೂರು ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿ ಮಾಡಿ ಧನ್ಯವಾದಗಳನ್ನು ಸಲ್ಲಿಸಿದರು. ಲಕ್ಷ್ಮೀ ಹೆಬ್ಬಾಳಕರ್ ಅವರು ದಾವಣಗೆರೆ ಉಪಚುನಾವಣೆ ವೇಳೆ ಅಲ್ಲಿಯೇ ವಾಸ್ತವ್ಯ ಹೂಡಿ ಪ್ರಚಾರ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಮರ್ಥ ಅವರು ವಿಧಾನಸೌಧದಲ್ಲಿ ಸಚಿವರನ್ನು ಭೇಟಿ …
Read More »
Laxmi News 24×7