ಚಾಮರಾಜನಗರ: ನಾಗಮಲೆಯಲ್ಲಿ ಚಿರತೆ ದಾಳಿಗೆ ಮೃತಪಟ್ಟ ಬಾಲಕನ ಕುಟುಂಬಕ್ಕೆ ಸರ್ಕಾರ 20 ಲಕ್ಷ ರೂ. ಪರಿಹಾರ ಘೋಷಿಸಿದೆ. ಭಾನುವಾರ (ಮೇ 10) ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹೋಗುವ ವೇಳೆ ಚಿರತೆ ದಾಳಿ ನಡೆಸಿತ್ತು. ಈ ವೇಳೆ ಬಾಲಕ ಸಾವನ್ನಪ್ಪಿದ್ದ. ಸದ್ಯ ಅರಣ್ಯ ಇಲಾಖೆ ಬಾಲಕನ ಕುಟುಂಬಸ್ಥರಿಗೆ 20 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಈಗಾಗಲೇ 5 ಲಕ್ಷ ರೂ. ಚೆಕ್ ನೀಡಿದ್ದಾರೆ. ಇನ್ನುಳಿದ ಹಣವನ್ನು ಅಕೌಂಟ್ ಮಾಹಿತಿ ಪಡೆದು ಶೀಘ್ರದಲ್ಲೇ …
Read More »Daily Archives: ಮೇ 12, 2026
ಐರನ್‌ಮ್ಯಾನ್ ಸ್ಪರ್ಧೆ ಗೆದ್ದ ಐಜಿಪಿ ಸಂದೀಪ್ ಪಾಟೀಲ್
ಬೆಳಗಾವಿ : ಇತ್ತೀಚೆಗೆ ಬೆಳಗಾವಿ ಉತ್ತರ ವಲಯದ ಐಜಿಪಿ ಆಗಿ ನೇಮಕಗೊಂಡಿರುವ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರು ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಪ್ರಸಿದ್ಧ “ಐರನ್‌ಮ್ಯಾನ್ 70.3 ವೆಸ್ಟರ್ನ್ ಸಿಡ್ನಿ–2026” ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಮತ್ತೊಮ್ಮೆ ತಮ್ಮ ಅಪಾರ ಸಹಿಷ್ಣುತೆ ಮತ್ತು ದೃಢಸಂಕಲ್ಪವನ್ನು ಸಾಬೀತುಪಡಿಸಿದ್ದಾರೆ. ಈ ಸಾಧನೆಯೊಂದಿಗೆ ಅವರು ವಿಶ್ವದ ವಿವಿಧ ದೇಶಗಳಲ್ಲಿ ಒಟ್ಟು ಆರನೇ ಬಾರಿ ಐರನ್‌ಮ್ಯಾನ್ ಸ್ಪರ್ಧೆಯನ್ನು ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಗೋವಾ, ಥೈಲ್ಯಾಂಡ್, ಪೋಲೆಂಡ್, …
Read More »ಪ್ರೀತಿಸಿದವನೊಂದಿಗೆ ಮದುವೆಯಾಗಲು ಕುಟುಂಬಸ್ಥರ ವಿರೋಧ – ಯುವತಿ ಆತ್ಮಹತ್ಯೆ
ಧಾರವಾಡ: ಪ್ರೀತಿಸಿದವನ ಜೊತೆ ಮದುವೆಯಾಗಲು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಮನನೊಂದು ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶ್ವೇತಾ ಕೊಟೆನ್ನವರ್ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ಶ್ವೇತ ಹಲವು ವರ್ಷಗಳಿಂದ ಹುಬ್ಬಳ್ಳಿ ತಾಲೂಕಿನ ಕೆರೆಸೂರ ಗ್ರಾಮದ ನಾಗರಾಜ್ ಎನ್ನುವ ಯುವಕನನ್ನ ಪ್ರೀತಿಸುತ್ತಿದ್ದಳು. ಈ ವಿಷಯವನ್ನು ತನ್ನ ಕುಟುಂಬಸ್ಥರಿಗೆ ತಿಳಿಸಿ, ನಾಗರಾಜ್‌ನನ್ನು …
Read More »ಸಂತಾನಹರಣ ಚಿಕಿತ್ಸೆ ವೇಳೆ ಕರುಳು ಕಟ್ – ವೈದ್ಯರ ಯಡವಟ್ಟಿನಿಂದ ಮಹಿಳೆ ಸಾವು: ಪತಿ ಆರೋಪ
ಚಿಕ್ಕಬಳ್ಳಾಪುರ: ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಚಿಕಿತ್ಸೆ ವೇಳೆ ಕರುಳು ಕತ್ತರಿಸಿ ವೈದ್ಯರ ಯಡವಟ್ಟು ಮಾಡಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ. ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದ ನರ್ಮದಾ ಮೃತ ದುರ್ದೈವಿ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಸಂತಾಹರಣ ಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಮರಳಿದಾಗ ಸಾವನ್ನಪ್ಪಿದ್ದಾರೆ. ಏ.24ರಂದು ಚಿಂತಾಮಣಿಯ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯೆ ವಾಣಿ ರೆಡ್ಡಿ ನರ್ಮದಾ ಅವರಿಗೆ ಮಕ್ಕಳಾಗದಂತೆ ಟುಬೆಕ್ಟಮಿ …
Read More »ಮೇ 13ಕ್ಕೆ ಬೆಂಗಳೂರು ಜನತೆಗೆ ಬಿಗ್ ಗಿಫ್ಟ್: ಡಿಕೆಶಿ
ಬೆಂಗಳೂರು: ಮೇ 13ಕ್ಕೆ ಬೆಂಗಳೂರು ಜನತೆಗೆ ಬಿಗ್ ಗಿಫ್ಟ್ ನೀಡಲಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುರ್ಜೇವಾಲ ಅವರ ಜೊತೆ ರಾಜಕೀಯವಾಗಿ ಸಭೆ ಮಾಡಿದ್ದೇವೆ. ಈಗ ಅಧಿಕಾರಿಗಳನ್ನು ಕರೆದು ಸೂಚನೆ ಕೊಟ್ಟಿದ್ದೇನೆ. ಮೇ 13ರಂದು ಬೆಂಗಳೂರು ಜನರಿಗೆ ಒಂದು ದೊಡ್ಡ ಗ್ಯಾರಂಟಿ, ಬಿಗ್ ಗಿಫ್ಟ್ ಕೊಡಲಿದ್ದೇವೆ. ಅದನ್ನು ಮೇ 13ರಂದೇ ತಿಳಿಸುತ್ತೇನೆ ಎಂದಿದ್ದಾರೆ. ಇದೇ ವೇಳೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ …
Read More »ಮೋದಿ ಭಸ್ಮಾಸುರ, ಅವರ ಕುರ್ಚಿ ಗಟ್ಟಿ ಇದೆಯೇ ಎಂದು ನೋಡಿಕೊಳ್ಳಲಿ: ಬಿ.ಕೆ ಹರಿಪ್ರಸಾದ್ ವಾಗ್ದಾಳಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ ಎಂದು ಎಂಎಲ್‌ಸಿ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ರಾಜ್ಯ ಕಾಂಗ್ರೆಸ್ ಸಿಎಂ ಕುರ್ಚಿ ವಿಚಾರಕ್ಕೆ ಕುಟುಕಿದ್ದ ಪ್ರಧಾನಿ ಮೋದಿಗೆ ತಿರುಗೇಟು ನೀಡಿದರು. ಪಿಎಂ ಎಂದರೆ ನಾವು ಪ್ರಧಾನಮಂತ್ರಿ ಎಂದು ತಿಳಿದುಕೊಂಡಿದ್ದೇವೆ. ಇವರು ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು. ಕರ್ನಾಟಕ ರಾಜ್ಯದ ರಾಜಕಾರಣದ ಬಗ್ಗೆ ಕಮ್ಮಿ ಮಾತಾಡೋದು …
Read More »ಪ್ರಧಾನಿ ಮೋದಿ ಅವರ ಮಿತ ಬಳಕೆ ಮನವಿ ಎಲ್ಲರೂ ಸ್ವಾಗತಿಸಬೇಕು: ಹೆಚ್‌ಡಿಡಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮಿತ ಬಳಕೆ ಮನವಿಯನ್ನು ಎಲ್ಲರೂ ಸ್ವಾಗತ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ತೆಲಂಗಾಣದಲ್ಲಿ ಮೋದಿ ಕೆಲವು ಸಲಹೆ ಕೊಟ್ಟಿದ್ದಾರೆ. ದೇಶದ 150 ಕೋಟಿ ಜನರಿಗೆ ಮೋದಿ ಮನವಿ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಸಂಘರ್ಷದಿಂದ ಆಗಿರುವ ಕೆಟ್ಟ ದುಷ್ಪರಿಣಾಮವಿದು. ಹೀಗಾಗಿ ಮೋದಿ ಅವರ ಮನವಿಯನ್ನ ಸ್ವಾಗತ ಮಾಡಬೇಕು ಎಂದಿದ್ದಾರೆ. ಅಮೆರಿಕಾ-ಇಸ್ರೇಲ್-ಇರಾನ್ ನಡುವೆ ಕದನ ಆಗ್ತಿದೆ. …
Read More »ತೈಲ ಉತ್ಪನ್ನದಲ್ಲಿ ಭಾರತ ಆತ್ಮನಿರ್ಭರ್ ಇಲ್ಲ – ಮೋದಿ ಕರೆ ಸಮರ್ಥಿಸಿಕೊಂಡ ಶೋಭಾ ಕರಂದ್ಲಾಜೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಮಿತ ಬಳಕೆ ಕರೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಮರ್ಥನೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೋದಿಯವರು ಕಳೆದ 10 ವರ್ಷಗಳಲ್ಲಿ ಬೇರೆ ಬೇರೆ ವಿಚಾರಗಳನ್ನು ಹೇಳುತ್ತಾ ಬಂದಿದ್ದಾರೆ. ಕೋವಿಡ್ ಸಮಯದಲ್ಲಿ ಯೋಗ ಮಾಡೋಕೆ ಹೇಳಿದ್ರು. ಎರಡು ವರ್ಷಗಳಿಂದ ಎಣ್ಣೆ ಬಳಕೆ ಕಡಿಮೆ ಮಾಡಿ ಅಂತ ಹೇಳ್ತಾ ಇದ್ದಾರೆ. ತೈಲದ ವಿಚಾರದಲ್ಲಿ ನಮ್ಮ ದೇಶ ಆತ್ಮನಿರ್ಭರ್ ಇಲ್ಲ. ಖಾದ್ಯ ತೈಲದ 70% ಹೊರ ದೇಶದಿಂದ …
Read More »ಸೆಪ್ಟೆಂಬರ್ ತನಕ ಜಿಬಿಎ ಎಲೆಕ್ಷನ್ ಮುಂದೂಡಿಕೆಗೆ ಸರ್ಕಸ್ – ಸುಪ್ರೀಂ ಮೊರೆ ಹೋದ ಕಾಂಗ್ರೆಸ್
ಬೆಂಗಳೂರು: ಜಿಬಿಎ ಎಲೆಕ್ಷನ್ ಮುಂದೂಡಿಕೆ ಕಾಂಗ್ರೆಸ್ ಸರ್ಕಾರ ಸರ್ಕಸ್ ನಡೆಸಿದೆ. ಸೆಪ್ಟೆಂಬರ್ ತನಕ ಚುನಾವಣೆಗೆ ಮುಂದೂಡಿಕೆಗೆ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ, ಸಿದ್ಧತೆಗೆ ನಾಲ್ಕು ತಿಂಗಳ ಅವಕಾಶ ನೀಡುವಂತೆ ಮನವಿ ಮಾಡುತ್ತಿದೆ. ಜೂನ್ ಒಳಗೆ ದಿನಾಂಕ ಘೋಷಣೆ ಮಾಡಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಚುನಾವಣೆ ಮುಂದೂಡಿಕೆಗೆ ರಾಜ್ಯ ಸರ್ಕಾರ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದೆ. ಇನ್ನೊಂದೆಡೆ ಜಿಬಿಎ ಚುನಾವಣೆ ಬಗ್ಗೆ ನಿನ್ನೆ …
Read More »ಬಾಲಕನ ಬಲಿ ಪಡೆದ ಚಿರತೆ ಸೆರೆಗೆ ಅರಣ್ಯ ಇಲಾಖೆ ಪಣ – 70ಕ್ಕೂ ಹೆಚ್ಚು ಸಿಬ್ಬಂದಿಯಿಂದ ಕಾರ್ಯಾಚರಣೆ
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ ಹೋಗುತ್ತಿದ್ದ ಬಾಲಕನನ್ನು ಬಲಿ ಪಡೆದ ಚಿರತೆ ಸೆರೆಗೆ ಅರಣ್ಯ ಇಲಾಖೆ ಪಣ ತೊಟ್ಟಿದೆ. ಚಿರತೆ ಸೆರೆಗೆ ಥರ್ಮಲ್ ಡ್ರೋನ್ ಟೀಂ ಸ್ಥಳದಲ್ಲೇ ಬೀಡುಬಿಟ್ಟಿದೆ. ಬೆಂಗಳೂರು ಮೂಲದ ಹರ್ಷಿತ್ ಎಂಬ ಬಾಲಕನನ್ನು ಚಿರತೆ ಬಲಿ ಪಡೆದಿತ್ತು. ಮಗುವನ್ನು ಕೊಂದ ಚಿರತೆಯನ್ನು ಸೆರೆಹಿಡಿಯಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಹಿನ್ನಲೆ ಅರಣ್ಯಾಧಿಕಾರಿಗಳು ಹಿರಿಯ ಅಧಿಕಾರಿಗಳ ಸಲಹೆ ಸೂಚನೆ ಪಡೆದು ನರಹಂತಕ ಚಿರತೆಯ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. …
Read More »
Laxmi News 24×7